ಇಲಕಲ್ ಶ್ರೀಗಳ ಪೂರ್ವಾಶ್ರಮದ ಮಾತೋಶ್ರೀ ಲಿಂಗೈಕ್ಯೆ

| Published : Oct 26 2023, 01:00 AM IST

ಸಾರಾಂಶ

ನರಗುಂದ: ಇಳಕಲ್ ಚಿತ್ತರಗಿ ವಿಜಯ ಮಹಾಂತೇಶ್ವರ ಮಠದ ಮಹಾಂತ ಸ್ವಾಮೀಜಿಗಳ ಪೂರ್ವಾಶ್ರಮದ ಮಾತೋಶ್ರೀ ಶಾಂತಮ್ಮ ಹೆಗಡಾಲ (88) ಬುಧವಾರ ಲಿಂಗೈಕ್ಯೆರಾದರು.ಮೃತರಿಗೆ ನಾಲ್ಕು ಜನ ಗಂಡು ಮಕ್ಕಳು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವಿದೆ.
ನರಗುಂದ: ಇಳಕಲ್ ಚಿತ್ತರಗಿ ವಿಜಯ ಮಹಾಂತೇಶ್ವರ ಮಠದ ಮಹಾಂತ ಸ್ವಾಮೀಜಿಗಳ ಪೂರ್ವಾಶ್ರಮದ ಮಾತೋಶ್ರೀ ಶಾಂತಮ್ಮ ಹೆಗಡಾಲ (88) ಬುಧವಾರ ಲಿಂಗೈಕ್ಯೆರಾದರು. ಮೃತರಿಗೆ ನಾಲ್ಕು ಜನ ಗಂಡು ಮಕ್ಕಳು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವಿದೆ. ಗದುಗಿನ ತೋಂಟದಾಯ ಮಠದ ಸಿದ್ದರಾಮ ಶ್ರೀಗಳು, ಜಯಮೃತ್ಯಂಜಯ ಶ್ರೀಗಳು, ಬೈಲೂರ ನಿಜಗುಣಾನಂದ ಶ್ರೀಗಳು, ಲಿಂಗಸೂರ ಸಿದ್ದಲಿಂಗ ಶ್ರೀಗಳು, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಶಿರೂರ ಬಸವಲಿಂಗ ಶ್ರೀಗಳು, ಶಾಸಕ ಸಿ.ಸಿ. ಪಾಟೀಲ, ಮಾಜಿ ಶಾಸಕ ಬಿ.ಆರ್. ಯಾವಗಲ್, ವೀಣಾ ಕಾಶಪ್ಪನವರ, ಚನ್ನಬಸಪ್ಪ ಕಂಠಿ, ಚನ್ನಬಸಪ್ಪ ನಾಗಠಾಣ ಸಂತಾಪ ಸೂಚಿಸಿದ್ದಾರೆ.