ಮ್ಯಾಟ್ರಿಮೋನಿ ಆಪ್ನಲ್ಲಿ ಪರಿಚಯವಾದ ಯುವತಿಯೊಬ್ಬಳು ವಿವಾಹದ ನೆಪದಲ್ಲಿ ಯುವಕನಿಗೆ ಬೆದರಿಸಿ 42.97 ಲಕ್ಷ ರು. ವಸೂಲಿ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಉಡುಪಿ: ಮ್ಯಾಟ್ರಿಮೋನಿ ಆಪ್ನಲ್ಲಿ ಪರಿಚಯವಾದ ಯುವತಿಯೊಬ್ಬಳು ವಿವಾಹದ ನೆಪದಲ್ಲಿ ಯುವಕನಿಗೆ ಬೆದರಿಸಿ 42.97 ಲಕ್ಷ ರು. ವಸೂಲಿ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.ದೂರುದಾರ ಪ್ರದೀಪ್ ಕೆ. ಉಡುಪಿಯ ಸಹಕಾರಿ ಸಂಘದ ಉದ್ಯೋಗಿಯಾಗಿದ್ದು, 2024ರಲ್ಲಿ ಕನ್ನಡ ಜೋಡಿ ಎಂಬ ಮ್ಯಾಟ್ರಿಮೋನಿ ಆಪ್ನಲ್ಲಿ ಬೆಂಗಳೂರಿನ ಬಸವೇಶ್ವರ ನಗರದ ಕನ್ನಡ ಶಿಕ್ಷಕಿ ಎಂದು ಹೇಳಿಕೊಂಡಿದ್ದ, ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹೆಣ್ಬೇರು ನಿವಾಸಿ ನಾಗರತ್ನ ಎಚ್. ಎಂಬುವವರು ಪರಿಚಯವಾಗಿದ್ದರು. ಆದರೆ ಬೇರೆ ಜಾತಿ ಎಂಬ ಕಾರಣಕ್ಕೆ ವಿವಾಹದ ಪ್ರಸ್ತಾಪವನ್ನು ಪ್ರದೀಪ್ ನಿರಾಕರಿಸಿದ್ದರು.ಆದರೂ ಇಬ್ಬರ ನಡುವೆ ಫೋನ್, ಮೆಸೇಜ್ ನಡೆಯುತ್ತಿತ್ತು. ನಾಗರತ್ನ ತನ್ನ ಕಷ್ಟ ಹೇಳಿಕೊಂಡು, 2024 ರಿಂದ 2026 ರ ನಡುವೆ ತನ್ನ ಹಾಗೂ ತನ್ನ ತನ್ನ ಸಹೋದ್ಯೋಗಿ ಹೇಮಂತ್ ಕರ್ಕೇರಾ, ಚಿಕ್ಕಮ್ಮನ ಮಗ ಪ್ರಮೋದ್ ಮತ್ತು ಅಕ್ಕ ರೇಣುಕಾ ಅವರ ಖಾತೆಗಳಿಗೆ ಬ್ಯಾಂಕ್ ಮೂಲಕ ಒಟ್ಟು 42,97,350 ರೂ. ಹಾಕಿಸಿಕೊಂಡಿದ್ದಾರೆ. ಇದೀಗ ಪ್ರದೀಪ್ ಹಣ ವಾಪಸ್ ಕೇಳಿದಾಗ ನಮ್ಮಿಬ್ಬರಿಗೂ ಅಕ್ರಮ ಸಂಬಂಧ ಇದೆ ಎಂದು ಸುಳ್ಳು ಕೇಸ್ ಹಾಕುತ್ತೇನೆ, ನಿಮ್ಮ ಕಚೇರಿಗೆ ಬಂದು ಮಾನ ಹರಾಜು ಹಾಕುತ್ತೇನೆ, ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ಸಹಕಾರಿ ಸಂಘದ ಹಣ ದುರುಪಯೋಗ ಮಾಡಿದ್ದಿ ಎಂದು ಆರೋಪ ಮಾಡುತ್ತೇನೆ ಎಂದು ಬೆದರಿಸಿದ್ದು, ಹಣ ಕೊಡಲು ನಿರಾಕರಿಸುತಿದ್ದಾಳೆ ಎಂದು ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ.
ಸ್ ನಿಲ್ದಾಣದಲ್ಲಿ ನಾಗರತ್ನ ಎಚ್. (42) ಮತ್ತು ಮತ್ತು ಬಸವೇಶ್ವರ ನಗರದಲ್ಲಿ ಮೂಲತಃ ಕಾರ್ಕಳ ತಾಲೂಕಿನ ಮಿಯಾರು ನಿವಾಸಿ ಹೇಮಂತ (41) ಅವರನ್ನು ಬಂಧಿಸಿದ್ದಾರೆ. ಇನ್ನಿಬ್ಬರ ಆರೋಪಿಗಳ ಪತ್ತೆಗೆ ಶೋಧ ನಡೆಯುತ್ತಿದೆ.