ಸಾರಾಂಶ
Maunesha Gireppanore as President of District Photographers Association
ಯಾದಗಿರಿ: ಛಾಯಾಗ್ರಾಹಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನಗರದ ಛಾಯಾಗ್ರಾಹಕ ಮೌನೇಶ ಗಿರೆಪ್ನೋರ್ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ನಗರದ ಜಿಲ್ಲಾ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಅವಿರೋಧವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳಾಗಿ ಶೇಕ್ ಸರ್ದಾರ್ (ಉಪಾಧ್ಯಕ್ಷ), ಈಶ್ವರ ಬಲಕಲ್ (ಕಾರ್ಯದರ್ಶಿ), ಬಾಬು ಮೋಜಸ್ (ಸಹ ಕಾರ್ಯದರ್ಶಿ), ಅಜ್ಹರೋದಿನ್ (ಖಂಜಾಚಿ) ಆಯ್ಕೆಯಾದರು. ಸಭೆಯಲ್ಲಿ ಸಂಘದ ಹಿರಿಯ ಮುಖಂಡರಾದ ಧರ್ಮಣ್ಣ ಗಿರೆಪ್ನೋರ್, ವಸೀಂ ಅಹಮದ್, ಗಿಡಿಯೋನ್ ಮೋಜೆಸ್, ಅಬ್ದುಲ್ ಅಲಿಂ, ನಂದಕುಮಾರ್, ಉಮಾರ್, ಏಜಾಜ್, ಮುಂತಾದ ಛಾಯಾಗ್ರಹಕರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು.------ಫೋಟೊ: 5ವೈಡಿಆರ್15 : ಯಾದಗಿರಿ ಛಾಯಾಗ್ರಾಹಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮೌನೇಶ ಗಿರೆಪ್ನೋರ್ ಅವಿರೋಧ ಆಯ್ಕೆಯಾಗಿದ್ದಾರೆ.