ಏಳು ಬಣ್ಣಗಳಿಂದ ನವೊಲ್ಲಾಸಗಳು ತುಂಬಿ ಬರಲಿ

| Published : Mar 27 2024, 01:03 AM IST

ಸಾರಾಂಶ

ಹೋಳಿ ಹಬ್ಬದ ಕಾಮ ದಹನದ ಬೆಂಕಿಯಲ್ಲಿ ಸಿಟ್ಟು-ಸಿಡುಕು, ದುರಾಚಾರ, ಅಹಂಕಾರಗಳೆಲ್ಲವೂ ಸುಟ್ಟುಹೋಗಲಿ, ನಮ್ಮೆಲ್ಲರ ಬದುಕಿನಲ್ಲಿ ಉಲ್ಲಾಸದ ಕೆಂಪು, ಸಮೃದ್ಧಿಯ ಹಸಿರು, ಸಂಭ್ರಮದ ಹಳದಿ, ಸಂತೋಷದ ಗುಲಾಬಿ, ಸಂಪತ್ತಿನ ನೇರಳೆ, ಜ್ಞಾನದ ಕೇಸರಿ, ಧನಾತ್ಮಕತೆ ನೀಲಿ ಈ ಏಳು ಬಣ್ಣಗಳಿಂದ ನವೋಲ್ಲಾಸಗಳು ತುಂಬಿ ಬರಲಿ.

ಬೀದರ್: ಹೋಳಿ ಹಬ್ಬದ ಕಾಮ ದಹನದ ಬೆಂಕಿಯಲ್ಲಿ ಸಿಟ್ಟು-ಸಿಡುಕು, ದುರಾಚಾರ, ಅಹಂಕಾರಗಳೆಲ್ಲವೂ ಸುಟ್ಟುಹೋಗಲಿ, ನಮ್ಮೆಲ್ಲರ ಬದುಕಿನಲ್ಲಿ ಉಲ್ಲಾಸದ ಕೆಂಪು, ಸಮೃದ್ಧಿಯ ಹಸಿರು, ಸಂಭ್ರಮದ ಹಳದಿ, ಸಂತೋಷದ ಗುಲಾಬಿ, ಸಂಪತ್ತಿನ ನೇರಳೆ, ಜ್ಞಾನದ ಕೇಸರಿ, ಧನಾತ್ಮಕತೆ ನೀಲಿ ಈ ಏಳು ಬಣ್ಣಗಳಿಂದ ನವೋಲ್ಲಾಸಗಳು ತುಂಬಿ ಬರಲಿ, ಸರ್ವರ ಬಾಳು ಆನಂದಮಯವಾಗಿರಲಿ ಎಂದು ಸೂರ್ಯ ನಮಸ್ಕಾರ ಸಂಘದ ಅಧ್ಯಕ್ಷರಾದ ಕಮಶೆಟ್ಟಿ ಚಿಕಬಸೆ ನುಡಿದರು.

ನಗರದ ಬಿವಿಬಿ ಕಾಲೇಜಿನ ಆವರಣದಲ್ಲಿ ಸೂರ್ಯ ನಮಸ್ಕಾರ ಸಂಘ ಆಯೋಜಿಸಿದ್ದ ಹೋಳಿ ಹಬ್ಬ ಆಚರಣೆಯಲ್ಲಿ ಮಾತನಾಡಿ, ಸರ್ವರಿಗೂ ಹೋಳಿ ಹಬ್ಬದ ಶುಭ ಕೋರಿದ ಅವರು, ಭಾರತೀಯ ಸಂಸ್ಕೃತಿ, ಸಂಪ್ರದಾಯದ ಪ್ರಕಾರ ವರ್ಷದ ಪ್ರಥಮ ಮತ್ತು ನೂತನ ಹಬ್ಬ ಯುಗಾದಿಯಾದರೆ ವರ್ಷದ ಕೊನೆಯ ಹಬ್ಬ ಹೋಳಿ ಆಗಿದೆ ಎಂದರು.

ಅನೀಲ ಸೋರಳಿಕರ್, ಸಂತೋಷ ಬೆಲ್ದಾಳೆ, ಸತ್ಯಪ್ರಕಾಶ, ಶ್ರೀಧರ ಜಾಧವ, ಶೀವರಾಜ, ಹರಿಪ್ರಸಾದ, ನವನೀತ ಪಾಟೀಲ, ಪ್ರದೀಪ ಪಾಂಚಾಳ, ಅನೀಲ, ಲೋಕೇಶ, ಶಿವಕುಮಾರ ಬಿರಾದಾರ, ಮಲ್ಲಿಕಾರ್ಜುನ ಧಾಬಕೆ, ಬಸವರಾಜ ಬುಳ್ಳಾ, ಬಸವರಾಜ ದಾನಿ, ವಿಜಯಕುಮಾರ ಜಾಧವ, ಸಂತೋಷ ಶೇರಿಕಾರ, ನಾಗರಾಜ ರಾಗಾ, ಬಳವಂತರೆಡ್ಡಿ, ಬಸವರಾಜ ಕರಪೂರ, ನಾಗಭೂಷಣ, ದತ್ತು, ಮನೋಹರ ರಾಥೋಡ, ಸುರೇಶ ಲಕ್ಕಶೆಟ್ಟಿ, ರಾಜಶೇಖರ ಪಾಟೀಲ, ಭದ್ರ ಸ್ವಾಮಿ, ಜಿ. ಎಂ. ಮರಕಲೆ, ಸೇರಿದಂತೆ ಮತ್ತಿತರರು ಭಾಗವಹಿಸಿ ಪರಸ್ಪರ ಶುಭ ಕೋರುವ ಮೂಲಕ ಹೋಳಿ ಹಬ್ಬದ ಸಂದೇಶ ರವಾನಿಸಿದರು.