ತರೀಕೆರೆಪ್ರತಿಯೊಬ್ಬರು ಆರ್ಥಿಕ ಸಾಕ್ಷರತೆ ಬಗ್ಗೆ ತಿಳಿದುಕೊಂಡು ಯೋಜನೆಗಳ ಫಲ ಪಡೆಯಬೇಕು ಎಂದು ಯೂನಿಯನ್ ಬ್ಯಾಂಕ್ ಅರ್ಥಿಕ ಸಾಕ್ಷರತಾ ಅಧಿಕಾರಿ ಕೆ.ಶ್ರೀನಿವಾಸ್ ಹೇಳಿದ್ದಾರೆ.
- ಕುಡ್ಲೂರು ಗ್ರಾಮದಲ್ಲಿ ಅರ್ಥಿಕ ಸಾಕ್ಷರತಾ ಮಾಹಿತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ತರೀಕೆರೆಪ್ರತಿಯೊಬ್ಬರು ಆರ್ಥಿಕ ಸಾಕ್ಷರತೆ ಬಗ್ಗೆ ತಿಳಿದುಕೊಂಡು ಯೋಜನೆಗಳ ಫಲ ಪಡೆಯಬೇಕು ಎಂದು ಯೂನಿಯನ್ ಬ್ಯಾಂಕ್ ಅರ್ಥಿಕ ಸಾಕ್ಷರತಾ ಅಧಿಕಾರಿ ಕೆ.ಶ್ರೀನಿವಾಸ್ ಹೇಳಿದ್ದಾರೆ.ಯೂನಿಯನ್ ಬ್ಯಾಂಕ್ ಶಿವಮೊಗ್ಗ, ಚಿಕ್ಕಮಗಳೂರು ಲೀಡ್ ಬ್ಯಾಂಕ್ ಸಂಯಕ್ತಾಶ್ರಯದಲ್ಲಿ ಸಮೀಪದ ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದ ಕಾಲೋನಿಯಲ್ಲಿ ನಡೆದ ಆರ್ಥಿಕ ಸಾಕ್ಷರತಾ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದರು. ಜನರು ಹಣಕಾಸಿನ ಗಳಿಕೆ, ಬಳಕೆ ಮತ್ತು ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ತಿಳಿಯುವುದು ಅಗತ್ಯ. ಬ್ಯಾಂಕು ಗಳ ಮೂಲಕ ವೇ ವ್ಯವಹಾರ ನಡೆಸಿ ಸಿಬಿಲ್ ಸ್ಕೋರನ್ನ ಹೆಚ್ಚಿಸಿಕೊಂಡು ಹಣಕಾಸಿನ ಸಹಕಾರ ಮತ್ತೆ ಸಾಲದ ವ್ಯವಸ್ಥೆ ಪಡೆದುಕೊಂಡು ಪ್ರಾಮಾಣಿಕ ವ್ಯವಹಾರ ನಡೆಸಬೇಕು. ಇದರ ಜೊತೆಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ಯೋಜನೆ ಪಡೆಯಲು 18 ವರ್ಷ ತುಂಬಿದ್ದು 50 ವರ್ಷದ ಒಳಗಿನವರಾಗಿರಬೇಕು. ಇವರು ವರ್ಷಕ್ಕೆ ₹436 ರು. ತುಂಬಿ ಯಾವುದೇ ಸಾವು ನೋವುಗಳ ಮತ್ತು ಸ್ವಾಭಾವಿಕ ಸಾವುಗಳಾದರೂ ಅಗತ್ಯ ದಾಖಲೆ ಬ್ಯಾಂಕಿಗೆ ನೀಡಿದಾಗ ಅವರ ಕುಟುಂಬಕ್ಕೆ ₹2 ಲಕ್ಷ ಸಿಗುತ್ತದೆ ಎಂದು ಹೇಳಿದರು.ಆಪತ್ಕಾಲದಲ್ಲಿ ಈ ಹಣ ಸಂಜೀವಿನಿಯಂತೆ ಅವರ ಕುಟುಂಬ ಉಳಿಸುತ್ತದೆ. ಪ್ರಧಾನ ಮಂತ್ರಿ ಜೀವನ ಸುರಕ್ಷಾ ಯೋಜನೆ. ಪ್ರತಿಯೊಬ್ಬರು ಮಾಡಿಕೊಳ್ಳಬೇಕು ಇದು ಸಹ 18 ವರ್ಷ ಮೇಲ್ಪಟ್ಟು 70 ವರ್ಷದ ಒಳಗಿನವರು ₹20 ರು ವರ್ಷಕ್ಕೆ ನಿಮ್ಮ ಹತ್ತಿರದ ಬ್ಯಾಂಕಿಗೆ ತುಂಬಿ ಯಾವುದೇ ಅಪಘಾತಗಳು ಆದರೂ ಇದರಿಂದ ಯಾವುದೇ ಅಂಗ ಊನವಾದರೂ ₹1 ಲಕ್ಷ ಸಿಗುವ ಜೊತೆಗೆ ಆಕಸ್ಮಿಕ ಅಪಘಾತದಲ್ಲಿ ಮರಣ ಹೊಂದಿದವರ ಕುಟುಂಬಕ್ಕೆ ₹2 ಲಕ್ಷ ಸಿಗುತ್ತದೆ ಎಲ್ಲರೂ ಇದರ ಬಗ್ಗೆ ಗಮನ ಹರಿಸಬೇಕು ಎಂದು ವಿವರಿಸಿದರು.
ಆಟಲ್ ಪಿಂಚಣಿಯಲ್ಲಿ 18 ವರ್ಷ ಮೇಲ್ಪಟ್ಟು 40 ವರ್ಷದೊಳಗಿನವರು ಈ ಯೋಜನೆಯಡಿ ದಾಖಲಿಸಿ 60 ವರ್ಷದ ನಂತರ ಈ ಪಿಂಚಣಿ ಪಡೆಯಬಹುದು. ಕಾರ್ಮಿಕರು ಸಹ ಪಿಂಚಣಿ ಪಡೆಯಬಹುದು. ಇದರಂತೆ ₹1,000 ದಿಂದ 5000 ವರೆಗೆ ವಯಸ್ಸಿಗೆ ಅನುಗುಣವಾಗಿ ಅಟಲ್ ಪಿಂಚಣಿ ಯೋಜನೆ ಪಡೆಯಲು ಸಾಧ್ಯ. ನಮ್ಮ ಖಾತೆ ಹಣವನ್ನು ಸೈಬರ್ ಕಳ್ಳರು ದೋಚುವ ಬಗ್ಗೆಯೂ ಎಚ್ಚರದಿಂದ ಇರಬೇಕು ಎಂದು ಹೇಳಿದರು. ನಮ್ಮ ಓಟಿಪಿ ಎಟಿಎಂ ಪಿನ್ ನಂಬರ್ ಆಧಾರ್ ನಂಬರ್ ಹೀಗೆ ಕೇಳುವವರ ಬಗ್ಗೆ ಎಚ್ಚರದಿಂದ ಇರಬೇಕು. ಯಾವುದೇ ಕಾರಣಕ್ಕೂ ಬ್ಯಾಂಕಿನ ಅಧಿಕಾರಿಗಳು ದೂರವಾಣಿ ಮೂಲಕ ಈ ಮಾಹಿತಿ ಕೇಳಲ್ಲ ಈಇದರ ಬಗ್ಗೆ ಎಚ್ಚರ ಇರಲಿ ಒಂದು ವೇಳೆ ಸೈಬರ್ ಕಳ್ಳತನವಾದರೆ 1930 ಕಾಲ್ ಮಾಡಿ ದೂರು ನೀಡಿ. ಮೊಬೈಲ್ ಗಳಲ್ಲಿ ಬರುವ ಯಾವುದೇ ಲಿಂಕ್‌ಗಳನ್ನು ಒತ್ತದೇ ಆಸೆ ಆಮಿಷಗಳಿಗೆ ಬಲಿಯಾಗದೆ ಎಚ್ಚರದಿಂದಿರಿ ಎಂದು ತಿಳಿಸಿದರು. ಬ್ಯಾಂಕ್ ಖಾತೆ ತೆರೆಯದಿರುವ ವ್ಯಕ್ತಿಗಳು ಜೀರೋ ಅಕೌಂಟ್ ನಲ್ಲಿ ಜನಧನ್ ಖಾತೆ ಪ್ರಾರಂಭ ಮಾಡಬೇಕು. ಕೃಷಿ ಇಲಾಖೆ ಮೂಲಕ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ಯಮಗಳನ್ನು ನಿಯಮಬದ್ದಗೊಳಿಸುವಿಕೆ ಯೋಜನೆಯಲ್ಲಿ ಶೇ.50 ರಷ್ಟು ಗರಿಷ್ಠ ₹15 ಲಕ್ಷ ಸಹಾಯಧನ ಇದರಲ್ಲಿ ಕೇಂದ್ರ ಸರ್ಕಾರ ₹6 ಲಕ್ಷ ರಾಜ್ಯ ಸರ್ಕಾರ ₹9 ಲಕ್ಷ ಸಹಾಯಧನದಡಿ ಯೋಜನೆ ಫಲ ಪಡೆಯಬಹುದು ಎಂದರು.ಗ್ರಾಪಂ ಸದಸ್ಯರಾದ ಶಕುಂತಲಾ ಮಾತನಾಡಿ ಈ ದಿನ ನಮ್ಮ ಯೂನಿಯನ್ ಬ್ಯಾಂಕಿನವರು ನನಗೆ ಕಾಲ್ ಮಾಡಿ ನಾಳೆ ನಾವು ಇಂತಹ ಕಾರ್ಯಕ್ರಮ ಮಾಡುವ ಬಗ್ಗೆ ತಿಳಿಸಿದರು. ಆದರೆ ಇಷ್ಟು ಅತ್ಯುತ್ತಮ ಕಾರ್ಯಕ್ರಮ ಎಂದು ನಾನು ಅಂದು ಕೊಂಡಿರಲಿಲ್ಲ. ಇದರಿಂದ ಜನರಿಗೆ ಬಹಳ ಉಪಯುಕ್ತವಾಯಿತು ಎಂದು ತಿಳಿಸಿದರು. ಸ್ವ ಸಹಾಯ ಸಂಘದ ಸದಸ್ಯೆ ಪದ್ಮ ಮಾತನಾಡಿ ಈ ದಿನ ಯೂನಿಯನ್ ಬ್ಯಾಂಕಿನಿಂದ ಸಾಕ್ಷರತಾ ಅಧಿಕಾರಿ ಯಾದ ಶ್ರೀನಿವಾಸ್ ಬಂದು ನಮಗೆ ಮಾಹಿತಿ ಕೊಟ್ಟಿದ್ದರಿಂದ ₹1000 ಪಿಂಚಣಿ ಇಬ್ಬರು ಮಾಡಿಸಿದ್ದಾರೆ. ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ 15 ಜನ ಮಾಡಿಸಿದ್ದಾರೆ. ಆಟಲ್ ಪಿಂಚಣಿ ಯೋಜನೆ 9 ಜನ ಮಾಡಿಸಿರುವುದು ವಿಶೇಷ ಎಂದು ತಿಳಿಸಿದರು. ಸ್ಥಳೀಯ ಐಒಬಿ ಬ್ಯಾಂಕಿನ ಗಿರೀಶ್ ಎಲ್ಲಾ ಫಲಾನುಭವಿಗಳ ನೋಂದಣಿ ಮಾಡಿಕೊಂಡರು. ಗ್ರಾಮ ಪಂಚಾಯಿತಿ ಸದಸ್ಯೆ ಶಕುಂತಲಾ ಮತ್ತು ಸ್ವಸಾಯ ಸಂಘದ ಸದಸ್ಯರು ಭಾಗವಹಿಸಿದ್ದರು.2ಕೆಟಿಆರ್.ಕೆ1ತರೀಕೆರೆ ಸಮೀಪದ ಕುಡ್ಲೂರು ಗ್ರಾಮದ ಕಾಲೋನಿಯಲ್ಲಿ ನಡೆದ ಅರ್ಥಿಕ ಸಾಕ್ಷರತಾ ಮಾಹಿತಿ ಕಾರ್ಯಕ್ರಮದಲ್ಲಿ ಯೂನಿಯನ್ ಬ್ಯಾಂಕ್ ಅರ್ಥಿಕ ಸಾಕ್ಷರತಾ ಅಧಿಕಾರಿ ಕೆ.ಶ್ರೀನಿವಾಸ್, ಗ್ರಾಪಂ ಸದಸ್ಯರಾದ ಶಕುಂತಲಾ ಮತ್ತಿತರರು ಭಾಗವಹಿಸಿದ್ದರು.