ಗಣೇಶೋತ್ಸವ ಬಡ ಕಲಾವಿರ ಹೊಟ್ಟೆ ತುಂಬಿಸುವ ಹಬ್ಬವಾಗಲಿ

| Published : Sep 13 2025, 02:04 AM IST

ಸಾರಾಂಶ

ಹೊಸದುರ್ಗದ ಕುಂಚಿಟಿಗ ಮಠದಲ್ಲಿ ನಡೆದ ಸುಜ್ಞಾನ ಸಂಗಮ ಕಾರ್ಯಕ್ರಮದಲ್ಲಿ ಶಾಂತವೀರಸ್ವಾಮೀಜಿ ಮಾತನಾಡಿದರು.

ಕನ್ನಡಪ್ರಭವಾರ್ತೆ ಹೊಸದುರ್ಗ

ಗಣಪತಿ ಹಬ್ಬ ಪ್ರಕೃತಿ ಮೇಲಿನ ಅಪಾಯವನ್ನು ತಪ್ಪಿಸುವುದರ ಜೊತೆಗೆ ಬಡ ಕಲಾವಿದರ ಹೊಟ್ಟೆ ತುಂಬಿಸುವ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಸಾಂಸ್ಕೃತಿಕ ಹಬ್ಬವಾಗಲಿ ಎಂದು ಕುಂಚಿಟಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.

ಪಟ್ಟಣದ ಕುಂಚಿಟಗ ಮಠದ ಸಭಾಂಗಣದಲ್ಲಿ ನಡೆದ 23ನೇ ವರ್ಷದ ಸುಜ್ಞಾನ ಸಂಗಮ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇತ್ತೀಚಿಗೆ ಸ್ಪರ್ಧೆಗೆ ಬಿದ್ದಂತೆ ದೊಡ್ಡ ಗಾತ್ರದ ಗಣಪತಿಗಳನ್ನು ತಂದು ಕೋಟಿಗಟ್ಟಲೆ ವೆಚ್ಚ ಮಾಡಿ ಜೆಸಿಬಿಯಲ್ಲಿ ಕೆರೆಗೆ ತಳ್ಳಿ ಅದರ ಮೇಲೆ ಕುಣಿದು ಕುಪ್ಪಳಿಸುವ ಮೂಲಕ ಗಣಪತಿಯ ಪಾವಿತ್ರಕ್ಕೆ ಹಾಗೂ ಭಕ್ತರ ಭಾವನೆಗೆ ಧಕ್ಕೆ ತರಲಾಗುತ್ತಿದೆ ನಮ್ಮ ಪರಂಪರೆಯಂತೆ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸಿ ನಾವು ಕುಡಿಯುವ ನೀರಿನ ಬಾವಿಯಲ್ಲಿ ಬಿಡುವ ವಾಡಿಕೆ ಇತ್ತು ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಗಣಪತಿಯ ಪಾವಿತ್ರತೆಯನ್ನು ಉಳಿಸಿ ಪಿಓಪಿ ಗಣಪತಿಯನ್ನು ನಿಷೇಧಿಸುವಂತೆ ಆಗ್ರಹಿಸಿದರು.

ಗಣಪ ಎಂದರೆ ಭಕ್ತಿಯ ಸಂಕೇತ ವಿಘ್ನ ನಿವಾರಣೆಯಾಗಲಿ ಎಂದು ವಿಘ್ನೇಶ್ವರನನ್ನು ತರುವ ಜನ ಕುಡಿದ ಮತ್ತಿನಲ್ಲಿ ಸಾಯುತ್ತಿರುವುದು ಅತ್ಯಂತ ನೋವಿನ ಸಂಗತಿ ಉತ್ಸಾಹ ಮಾಡುವ ಉತ್ಸಾಹದಲ್ಲಿ ಮಧ್ಯಪಾನ ಮಾಡಿ ಗಣಪತಿ ತರುವುದು ಮದ್ಯಪಾನ ಮಾಡಿ ಗಣಪತಿ ಬಿಡುವುದು ಎರಡು ಹಿಂದೂ ಧರ್ಮಕ್ಕೆ ಮಾಡುವ ಅಗೌರವ . ವಿಶ್ವ ಹಿಂದೂ ಪರಿಷತ್. ಬಜರಂಗದಳ. ರಾಷ್ಟ್ರೀಯ ಸ್ವಯಂಸೇವಕ ಸಂಘ ಜಾಗೃತಿ ವಹಿಸಬೇಕು ಇಲ್ಲದಿದ್ದರೆ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್. ಗೂಗಲ್. ಫೇಸ್ಬುಕ್. ಟ್ವಿಟರ್.ಎಕ್ಸ್. ನೋಡುವ ವಿದೇಶಿಗರು ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡುವ ಅವಕಾಶಗಳಿವೆ ತಕ್ಷಣ ಜಾಗ್ರತರಾಗಿ ಈ ನಿಟ್ಟಿನಲ್ಲಿ ಯುವಕರಿಗೆ ಸರಿದಾರಿಯಲ್ಲಿ ತೆಗೆದುಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಗುರು ಸ್ಥಾನಕ್ಕೆ ತಮ್ಮ ಮೇರು ವ್ಯಕ್ತಿತ್ವದ ಮೂಲಕ ಸರ್ವಪಲ್ಲಿ ರಾಧಾಕೃಷ್ಣನ್ ರವರು ಗೌರವ ತಂದಿದ್ದಾರೆ ಅವರ ದಾರಿಯಲ್ಲಿ ನಡೆಯಬೇಕಾದ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಶಿಕ್ಷಕ ಎಂದರೆ ಗುರು ಆ ಗುರುಗಳು ಸಮಾಜದ ಉನ್ನತಿಗೆ ಪ್ರಗತಿಗೆ ಪೂರಕವಾದ ಪಾಠ ಪ್ರವಚನಗಳನ್ನು ಮಕ್ಕಳಿಗೆ ಬೋಧಿಸುವ ಮೂಲಕ ಸುಭದ್ರ ಸಮಾಜವನ್ನು ನಿರ್ಮಾಣ ಮಾಡಲು ನಿಮ್ಮಗಳ ಪಾತ್ರ ತುಂಬಾ ದೊಡ್ಡದಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪ್ರಾಚಾರ್ಯ ಈಶ್ವರಪ್ಪ ಮಾತನಾಡಿ, ಸಂಸಾರದ ಜಂಜಾಟ, ಖಿನ್ನತೆ, ಜಿಗುಪ್ಸೆಯಿಂದ ಹೊರಬರಲು ಗುರುವಿನ ಸನ್ಮಾರ್ಗ ಅತ್ಯಮೂಲ್ಯ. ಏನೇ ಸಮಸ್ಯೆ ಬಂದರೂ ನಿಭಾಯಿಸುವ ಆತ್ಮವಿಶ್ವಾಸ ತುಂಬುವ ಮತ್ತು ಮಾರ್ಗದರ್ಶನ ಮಾಡುವ ಗುರುವಿನ ಸಾನ್ನಿಧ್ಯವನ್ನು ನಮ್ಮ ಮಕ್ಕಳಿಗೆ ತೋರಿಸಿದಾಗ ಮಾತ್ರ ಏನೇ ಬಂದರೂ ನಿಭಾಯಿಸುವ ನಿರ್ವಹಿಸುವ ಶಕ್ತಿ ಸಂಪಾದಿಸುತ್ತಾರೆ. ಮಕ್ಕಳಿಗೆ ಸದ್ಗುರುಗಳ ಮಾರ್ಗದರ್ಶನ ಕೊಡಿಸಿ ಉತ್ತಮ ಭವಿಷ್ಯ ರೂಪಿಸಲು ಪೋಷಕರು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಚನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ ಮಾತನಾಡಿದರು. ಲಿಂಗದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮು.ಶಿ ಎಲ್.ಅರ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ್ ರಂಗಾಪುರ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ 25ನೇ ಸಾಲಿನ ರಾಜ್ಯ ಪ್ರಶಸ್ತಿ ವಿಜೇತ ಹೊಸದುರ್ಗದ ಶಿವಶಂಕರ್, ಜಿಲ್ಲಾ ಪ್ರಶಸ್ತಿ ವಿಜೇತರಾದ ಮಂಜುನಾಥ್ ಕೊಂಡಾಪುರ, ಉಮಾದೇವಿ ವೆಂಗಸಂದ್ರ, ಮಹಾಂತೇಶ್ ಅರೇನಹಳ್ಳಿ, ರಮೇಶ್ ನಾಗತಿಹಳ್ಳಿ, ಮಂಜುನಾಥ್ ಹೊಸದುರ್ಗ, ವಸಂತ್ ಕುಮಾರ್ ಹಾಗಲಕೆರೆ ಹಾಗೂ ನಿವೃತ್ತ ಶಿಕ್ಷಕ ಮಂಜುನಾಥ್, ದೇವಪುರ ಅವರನ್ನು ಶ್ರೀಮಠದಿಂದ ಸನ್ಮಾನಿಸಿ ಆಶೀರ್ವದಿಸಲಾಯಿತು.