ಇಂದಿರಾ ಕ್ಯಾಂಟಿನ ಸದುಪಯೋಗವಾಗಲಿ

| Published : Jul 11 2024, 01:34 AM IST

ಸಾರಾಂಶ

ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಕಡಿಮೆ ದರದಲ್ಲಿ ಉತ್ತಮವಾದ ಹಾಗೂ ಉಟೋಪಚಾರವನ್ನು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಕೈಗೊಂಡಿರುವ ಇಂದಿರಾ ಕ್ಯಾಂಟಿನದ ಲಾಭವನ್ನು ಜನತೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಕಡಿಮೆ ದರದಲ್ಲಿ ಉತ್ತಮವಾದ ಹಾಗೂ ಉಟೋಪಚಾರವನ್ನು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಕೈಗೊಂಡಿರುವ ಇಂದಿರಾ ಕ್ಯಾಂಟಿನದ ಲಾಭವನ್ನು ಜನತೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಪೌರಾಡಳಿತ ಇಲಾಖೆ ಮತ್ತು ಪುರಸಭೆ ಸಿಂದಗಿ ಸಹಯೋಗದಲ್ಲಿ ಸುಮಾರು ₹86 ಲಕ್ಷಗಳ ಇಂದಿರಾ ಕ್ಯಾಂಟಿನ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಬಡ ಜನತೆ ಉತ್ತಮ ಆಹಾರದಿಂದ ವಂಚಿತರಾಗಬಾರದು, ಎಲ್ಲರಿಗೂ ಪೌಷ್ಟಿಕವಾದ ಆಹಾರ ಸಿಗುವಂತಾಗಬೇಕೆಂಬ ಕನಸು ರಾಜ್ಯ ಸರ್ಕಾರದ್ದಾಗಿದೆ. ಈ ಮೊದಲು ಮಹಾನಗರದಲ್ಲಿ ಈ ಯೋಜನೆ ಪ್ರಾರಂಭಗೊಂಡಿದೆ. ಪ್ರಸ್ತುತ ರಾಜ್ಯದ ತುಂಬೆಲ್ಲ ಇದು ವಿಸ್ತರಣೆಗೊಂಡಿದೆ ಎಂದರು.

ಈ ವೇಳೆ ಇಂಡಿ ಉಪವಿಭಾಗಾಧಿಕಾರಿ ಹಬೀದ ಗದ್ಯಾಳ, ತಹಸೀಲ್ದಾರ್‌ ಪ್ರದೀಪಕುಮಾರ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಪುರಸಭೆಯ ಸದಸ್ಯ ರಾಜಣ್ಣ ನಾರಾಯಣಕರ, ಬಸವರಾಜ ಯರನಾಳ, ಸಂದೀಪ ಚೌರ, ನಾಮ ನಿರ್ದೆಶಿತ ಸದಸ್ಯರಾದ ಚನ್ನಪ್ಪ ಗೋಣಿ, ಸದಾನಂದ ಕುಂಬಾರ, ಸಿದ್ದು ಮಲ್ಲೇದ, ಸಿಂದಗಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಕಾಂಬಳೆ, ಅಂಬಿಕಾ ಪಾಟೀಲ, ಶರಣಮ್ಮ ನಾಯಕ, ಶಾಂತಪ್ಪ ರಾಣಾಗೋಳ, ಮಹಾದೇವ ಸುಲ್ಪಿ, ಆರೋಗ್ಯ ಇಲಾಖೆಯ ಡಾ.ಮಹಾಂತೇಶ ಹಿರೇಮಠ, ಡಾ.ರಾಜಶೇಖರ ಪಾಟೀಲ, ಡಾ. ಮೌನೇಶ ಬಡಿಗೇರ, ರಾಜು ನರಗೋಧಿ, ಎಸ್.ಡಿ.ಕುಲಕರ್ಣಿ, ಸುರೇಶ ಪಾಟೀಲ, ಪುರಸಭೆಯ ಆರೋಗ್ಯ ನಿರೀಕ್ಷಕ ನಬೀರಸುಲ್ ಉಸ್ತಾದ, ಅಜರುದ್ದಿನ ನಾಟಿಕಾರ, ಸದ್ದಾಮ ಶೇಖ, ದಯಾನಂದ ಇವಣಿ, ಸಿದ್ದು ಅಂಗಡಿ, ಅನೀಲ ಕರಾಬಿ, ಅಲ್ತಾಫ್ ಮುಜಾವರ ಸೇರಿದಂತೆ ಇತರರು ಇದ್ದರು.