ಕನ್ನಡ ಕಾವ್ಯಕ್ಕೆ ಹೊಸ ಮುಗುಳನ್ನು ಮುಡಿಸುವಂತಾಗಲಿ

| Published : Apr 17 2024, 01:20 AM IST

ಸಾರಾಂಶ

ಬದುಕಿನ ಕಷ್ಟ-ಸುಖಗಳಿಗೆ ಸಮಾನವಾಗಿ ಸ್ಪಂದಿಸುವುದನ್ನು ಹಬ್ಬಗಳು ನಮಗೆ ಹೇಳಿಕೊಡುತ್ತವೆ. ಸಾಹಿತ್ಯ-ಕಲೆಯ ಈ ರೀತಿಯ ಅವಕಾಶಗಳಿಗೆ ಮತ್ತು ಪ್ರಯೋಗಗಳಿಗೆ ವಿದ್ಯಾಥಿ೯ಗಳು ತಮ್ಮನ್ನು ತಾವು ಅಳವಡಿಸಿಕೊಳ್ಳಬೇಕು

ಗದಗ: ಕನ್ನಡ ಕಾವ್ಯಕ್ಕೆ ಹೊಸ ತಲೆಮಾರು ಹೊಸ ಮುಗುಳನ್ನು ಮುಡಿಸುವಂತಾಗಲಿ ಎಂದು ಹಿರಿಯ ಸಾಹಿತಿ ಎ.ಎಸ್.‌ಮಕಾನದಾರ ಹೇಳಿದರು.

ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಸವೇಶ್ವರ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಯುಗಾದಿ ಕವಿಗೋಷ್ಠಿ ಕಾರ್ಯಕ್ರಮಲ್ಲಿ ಪಾಲ್ಗೊಂಡು ಮಾತನಾಡಿದರು.

ಬಸವೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಎಂ.ಎಂ. ಬುರಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬದುಕಿನ ಕಷ್ಟ-ಸುಖಗಳಿಗೆ ಸಮಾನವಾಗಿ ಸ್ಪಂದಿಸುವುದನ್ನು ಹಬ್ಬಗಳು ನಮಗೆ ಹೇಳಿಕೊಡುತ್ತವೆ. ಸಾಹಿತ್ಯ-ಕಲೆಯ ಈ ರೀತಿಯ ಅವಕಾಶಗಳಿಗೆ ಮತ್ತು ಪ್ರಯೋಗಗಳಿಗೆ ವಿದ್ಯಾಥಿ೯ಗಳು ತಮ್ಮನ್ನು ತಾವು ಅಳವಡಿಸಿಕೊಳ್ಳಬೇಕು ಎಂದರು.

ಉಪನ್ಯಾಸಕ ಬಾಗಲಕೋಟೆ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿಗೋಷ್ಠಿಯಲ್ಲಿ ಅನಸೂಯಾ ಮಿಟ್ಟಿ, ಎಂ.ಸಿ.ದೊಡ್ಡಮನಿ, ದೀನಬಂಧು ಆದಿ, ಪ್ರೇಮಾ ಗುಳಗೌಡರ, ಮಹಾಂತೇಶ ಮಲ್ಲಾರಿ, ವೀಣಾ ತಿರ್ಲಾಪೂರ, ಭಾಗ್ಯಶ್ರೀ ಹುರಕಡ್ಲಿ, ಶಿಲ್ಪಾ ಮ್ಯಾಗೇರಿ, ರಮಾ ಬಸು ಮತ್ತು ಬಸವೇಶ್ವರ ಮಹಾವಿದ್ಯಾಲಯದ ಹಲವಾರು ವಿದ್ಯಾಥಿ೯ಗಳು ಉತ್ತಮ ಕವನಗಳ ವಾಚನ ಮಾಡಿದರು.

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ತೋಂಟದ ಸಿದ್ದೇಶ್ವರ ಪದವಿಪೂವ೯ ಮಹಾವಿದ್ಯಾಲಯದ ಪ್ರಾಂಶುಪಾಲ ವೈ.‌ಎಸ್.‌ಮತ್ತೂರ ವಹಿಸಿದ್ದರು. ಕಿತ್ತೂರ ಚೆನ್ನಮ್ಮ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ವಿ.ವಿ. ಹಿರೇಮಠ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ತಾಲೂಕು ಕಸಾಪ ಅಧ್ಯಕ್ಷೆ ಡಾ.ರಶ್ಮಿ ಅಂಗಡಿ, ಕನ್ನಡ ಉಪನ್ಯಾಸಕಿ ಶಿಲ್ಪಾ ಮ್ಯಾಗೇರಿ ಮುಂತಾದವರು ಮಾತನಾಡಿದರು.