ಸಾಮಾಜಿಕ ಸಂದೇಶ ನೀಡುವ ಉತ್ತಮ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಬೇಕು ಎಂದು ಮಾಜಿ ಶಾಸಕ ವಿ.ಐ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಾಮಾಜಿಕ ಸಂದೇಶ ನೀಡುವ ಉತ್ತಮ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಬೇಕು ಎಂದು ಮಾಜಿ ಶಾಸಕ ವಿ.ಐ.ಪಾಟೀಲ ಹೇಳಿದರು.

ಬೈಲಹೊಂಗಲ ತಾಲೂಕಿನ ಚಚಡಿ ಗ್ರಾಮದಲ್ಲಿನ ಐತಿಹಾಸಿಕ ದೇಸಾಯಿವಾಡೆಯಲ್ಲಿ ಜನಕ ಚಲನಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.ಚಚಡಿ ದೇಸಗತ್ತಿಯ ನಾಗರಾಜ್ ದೇಸಾಯಿ ಕ್ಯಾಮೆರಾ ಚಲಾಯಿಸಿ ಮಾತನಾಡಿ, ಉತ್ತರ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಗಳು ನಿರ್ಮಾಣವಾಗಬೇಕು, ಈ ಭಾಗದ ಐತಿಹಾಸಿಕ ಪರಂಪರೆಯನ್ನು ಎಲ್ಲ ಕಡೆಗೂ ಪಸರಿಸುವಂತಾಗಬೇಕು ಎಂದರು.ಧಾರವಾಡ ರಂಗಾಯಣ ನಿರ್ದೇಶಕ ಝಕೀರ್ ನದಾಫ್ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ನಿರ್ಮಾಣವಾಗುವ ಚಲನಚಿತ್ರಗಳ ಪ್ರದರ್ಶನಕ್ಕೆ ಚಿತ್ರಮಂದಿರಗಳ ಲಭ್ಯತೆ ಸುಲಭವಾಗುವಂತೆ ಕ್ರಮವಾಗಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್, ಬೆಳಗಾವಿ ಜಿಲ್ಲಾ ವೀರಶೈವ ಮಹಾಸಭೆ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಹಿರಿಯ ಕಲಾವಿದ ಸಿ.ಕೆ.ಮೆಕ್ಕೇದ, ಚಿತ್ರದ ನಿರ್ಮಾಪಕ ಅರವಿಂದ ಪಾಟೀಲ, ಸಹ ನಿರ್ಮಾಪಕ ಮುರುಗೇಶ್ ಶಿವಪೂಜಿ, ನಿರ್ದೇಶಕ ಕಲ್ಯಾಣರಾಜ ಗೊಬ್ಬೂರಕರ್, ಹಿರಿಯ ಸಾಹಿತಿಗಳಾದ ನೀಲಗಂಗಾ ಚರಂತಿಮಠ, ಯ.ರು.ಪಾಟೀಲ, ಎಸ್.ಎ.ಅರಕೇರಿ, ಶೈಲಜಾ ಭಿಂಗೆ, ಜಯಶೀಲಾ ಬ್ಯಾಕೋಡ, ರಾಜೇಶ್ವರಿ ಕಲೂತಿ, ವಿರುಪಾಕ್ಷಯ್ಯ ನೀರಲಿಗಿಮಠ, ಶಾರದಾ ಪಾಟೀಲ್ ಉಪಸ್ಥಿತರಿದ್ದರು.