ಸಾರಾಂಶ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತರೀಕೆರೆ ತಾಲೂಕು ಘಟಕದ ಪದಗ್ರಹಣ ಸಮಾರಂಭ
ಕನ್ನಡಪ್ರಭ ವಾರ್ತೆ, ತರೀಕೆರೆಶರಣ ಸಾಹಿತ್ಯವನ್ನು ಎಲ್ಲರಿಗೂ ತಲುಪಿಸಬೇಕೆಂದು ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಅದ್ಯಕ್ಷ, ಮಾಜಿ ಶಾಸಕ ಡಿ.ಎಸ್.ಸುರೇಶ್ ಹೇಳಿದ್ದಾರೆ.ಭಾನುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತರೀಕೆರೆ ತಾಲೂಕು ಘಟಕದಿಂದ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ತರೀಕೆರೆ ತಾಲೂಕು ಘಟಕದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಬಸವಾದಿ ಶಿವಶರಣರು ಸರ್ವರಿಗೂ ಸಮಬಾಳು ಮತ್ತು ಸಮಪಾಲು ಕಲ್ಪಿಸಿದವರು. 12ನೇ ಶತಮಾನದ ಅದ್ಬುತ ಸಂದೇಶವನ್ನು ಎಲ್ಲರಿಗೂ ತಿಳಿಸಬೇಕು. ಶರಣ ಸಾಹಿತ್ಯವನ್ನು ಕುರಿತು ತರೀಕೆರೆ ಪ್ರದೇಶದಲ್ಲಿ ಅದ್ಭುತವಾದ ಕಾರ್ಯಕ್ರಮ ಗಳನ್ನು ಆಯೋಜಿಸಬೇಕು.ಇಂದಿನ ಸಮಾಜಕ್ಕೆ ಶರಣರ ಸಂದೇಶಗಳು ಅವಶ್ಯಕವಾಗಿದೆ. ತರೀಕೆರೆ ಶರಣರ ನೆಲೆ ವೀಡು. ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳಿಗೆ ಅವಕಾಶ ಮಾಡಿಕೊಡಬೇಕು. ಶರಣ ಸಾಹಿತ್ಯ ಪರಿಷತ್ತಿನ ಎಲ್ಲ ಕಾರ್ಯಕ್ರಮಗಳಿಗೂ ತಾವು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಶಿವಮೊಗ್ಗ ರಾಷ್ಟ್ರೀಯ ಶೈಕ್ಷಣಿಕ ನಾವಿನ್ಯತಾ ಪುರಸ್ಕಾರ ಪಡೆದ ಉಪನ್ಯಾಸಕ ಜಿ.ವಿ.ಹರಿಪ್ರಸಾದ್ ಶರಣ ಸಾಹಿತ್ಯ ಕುರಿತು ಉಪನ್ಯಾಸ ನೀಡಿ, ತರೀಕೆರೆ ಪ್ರದೇಶ ಒಂದು ಪ್ರಮುಖವಾದ ಶರಣರ ಕೇಂದ್ರ. ಶರಣರದು ಅದ್ಭುತ ಸಾಹಿತ್ಯ. ಸಾಹಿತ್ಯ ಸರಳವಾಗಿದ್ದರೆ ಜೀವನಕ್ಕೆ ಹತ್ತಿರವಾಗುತ್ತದೆ. ಶರಣ ಸಾಹಿತ್ಯ ಎಲ್ಲರಿಗೂ, ಅದರಲ್ಲೂ ಯುವ ಜನಾಂಗಕ್ಕೆ ತಲುಪಬೇಕು, ಎಂದು ಹೇಳಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತರೀಕೆರೆ ತಾಲೂಕು ಘಟಕದ ನೂತನ ಅಧ್ಯಕ್ಷ ಟಿ.ದಾದಾಪೀರ್ ಪದಗ್ರಹಣ ಸ್ವೀಕರಿಸಿ ಮಾತನಾಡಿ ಬಸವಾದಿ ಶಿವಶರಣರ ಜೀವನ ನನ್ನನ್ನು ಪ್ರಭಾವಿಸಿದೆ. ಶರಣರ ಸಂದೇಶಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ನನ್ನ ಮೇಲೆ ಭರವಸೆ ಇಟ್ಟು ಶರಣ ಸಾಹಿತ್ಯ ಪರಿಷತ್ತಿನ ಹೊಣೆ ನೀಡಿರುವುದಕ್ಕೆ ನಾನು ಜಿಲ್ಲಾ ಸಮಿತಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಚಿಕ್ಕಮಗಳೂರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವೀಶ್ ಕ್ಯಾತನಬೀಡು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಯವನ್ನು ಪೂರ್ಣವಾಗಿ ಉಪಯೋಗಿಸಿ ಕೊಳ್ಳಬೇಕು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮುಕ್ತವಾಗಿದೆ. ಒಟ್ಟಿಗೆ ಕರೆದುಕೊಂಡು ಹೋಗುವುದೇ ಪರಿಷತ್ತಿನ ಉದ್ದೇಶ. ಪರಿಷತ್ತು ಜನರ ಮನಸ್ಸನ್ನು ಕಟ್ಟುತ್ತದೆ. ಶರಣ ಸಾಹಿತ್ಯವನ್ನು ಎಲ್ಲರೊಟ್ಟಿಗೆ ಕರೆದುಕೊಂಡು ಹೋಗಬೇಕು ಎಂದು ಹೇಳಿದರು.ಪುರಸಭೆ ಅಧ್ಯಕ್ಷ ವಸಂತಕುಮಾರ್, ಅಭಾಶಸಾ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಡಿ.ಪಿ.ರಾಜಪ್ಪ, ಚಿಕ್ಕಮಗಳೂರು ಅಖಿಲ ಬಾರತ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಗೌ.ಅಧ್ಯಕ್ಷ ನಾಗೇನಹಳ್ಳಿ ತಿಮ್ಮಯ್ಯ, ಹಿರೇನಲ್ಲೂರು ಶಿವು, ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಮತ ರಮೇಶ್ ಮತ್ತಿತರರು ಮಾತನಾಡಿದರು.ಪುರಸಭೆ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್, ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಪದ್ಮ, ಚೇತನ್, ಟಿ.ಜಿ.ಸದಾನಂದ, ಶಫೀವುಲ್ಲಾ, ಹರೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋದಿಸಲಾಯಿತು.8ಕೆಟಿ.ಆರ್.ಕೆ.4ಃ
ತರೀಕೆರೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ನಡೆದ ಪದಗ್ರಹಣ ಸಮಾರಂಭವನ್ನು ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಡಿ.ಎಸ್.ಸುರೇಶ್ ಅವರು ಉದ್ಘಾಟಿಸಿದರು. ಟಿ.ದಾದಾಪೀರ್, ಉಪನ್ಯಾಸಕ ಜಿ.ವಿ.ಹರಿಪ್ರಸಾದ್, ರವೀಶ್ ಕ್ಯಾತನಬೀಡು, ಗಿರಿಜಾ ಪ್ರಕಾಶ್, ಟಿ.ಎಂ.ಬೋಜರಾಜ್ ಮತ್ತಿತರರು ಇದ್ದರು.