ಸಾರಾಂಶ
ಸಾವಿರಾರು ವರ್ಷಗಳ ಹಿಂದೆಯೇ ಜಗತ್ತಿಗೆ ಸಂಸ್ಕೃತಿ, ಸಂಸ್ಕಾರದ ಮೌಲ್ಯಗಳನ್ನು ನೀಡಿದ ದೇಶ ಭಾರತ. ಸರ್ವರಿಗೂ ಬೆಳಕು ತೋರಿದ ಮಹಾನ್ ವ್ಯಕ್ತಿಗಳು ಜನಸಿದ ಈ ಪುಣ್ಯಭೂಮಿಯಲ್ಲಿ ಹಿಂದುತ್ವದ ನೆಲೆಗಟ್ಟನ್ನು ಭದ್ರಪಡಿಸುವ ಅನಿವಾರ್ಯತೆಯಿದೆ ಎಂದು ವಿಶ್ವ ಹಿಂದೂ ಪರಿಷತ್ ಮಂಗಳೂರು ಶಾಖೆಯ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ ಹೇಳಿದರು.
ಶೃಂಗೇರಿ: ಸಾವಿರಾರು ವರ್ಷಗಳ ಹಿಂದೆಯೇ ಜಗತ್ತಿಗೆ ಸಂಸ್ಕೃತಿ, ಸಂಸ್ಕಾರದ ಮೌಲ್ಯಗಳನ್ನು ನೀಡಿದ ದೇಶ ಭಾರತ. ಸರ್ವರಿಗೂ ಬೆಳಕು ತೋರಿದ ಮಹಾನ್ ವ್ಯಕ್ತಿಗಳು ಜನಸಿದ ಈ ಪುಣ್ಯಭೂಮಿಯಲ್ಲಿ ಹಿಂದುತ್ವದ ನೆಲೆಗಟ್ಟನ್ನು ಭದ್ರಪಡಿಸುವ ಅನಿವಾರ್ಯತೆಯಿದೆ ಎಂದು ವಿಶ್ವ ಹಿಂದೂ ಪರಿಷತ್ ಮಂಗಳೂರು ಶಾಖೆಯ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ ಹೇಳಿದರು.
ಅವರು ಪಟ್ಟಣದ ಗೌರೀಶಂಕರ ವಿಶ್ವ ಹಿಂದೂ ಪರಿಷತ್, ಬಜರಂಗದಳ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮೊಸರುಕುಡಿಕೆ ಉತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಜಿಪ್ಟ್, ರೋಮ್ ಸಂಸ್ಕೃತಿಗಳು ಮರೆಯಾದರೂ ಹಿಂದೂ ಸಂಸ್ಕೃತಿ ಇಂದಿಗೂ ಉಳಿದುಕೊಂಡಿದೆ. ನಮ್ಮ ದೇಶದ ಮೇಲೆ ಅದೆಷ್ಟು ಆಕ್ರಮಣಗಳು ನಡೆದಿದ್ದರೂ, ನಾವು ಹಿಮ್ಮೆಟ್ಟಿಸುತ್ತಲೇ ಬಂದಿದ್ದೇವೆ. ಈ ದೇಶಕ್ಕೆ ವಿಶ್ವದಲ್ಲಿಯೇ ಭವ್ಯ ಪರಂಪರೆಯಿದೆ. ದೇಶದಲ್ಲಿ ಲಕ್ಷಾಂತರ ಗುರುಕುಲಗಳಿದ್ದು ಜಾತಿ, ಮತ, ಪಂಥ ಮೀರಿ ಶಿಕ್ಷಣ ಪಡೆದ ಇತಿಹಾಸ ನಮ್ಮದು ಎಂದರು.ಬಜರಂಗದಳ ಜಿಲ್ಲಾ ಘಟಕದ ಸಂಯೋಜಕ ಅಜಿತ್ ಕುಲಾಲ್ ಮಾತನಾಡಿ, ನಮ್ಮಲ್ಲಿ ಭ್ರಾತೃತ್ವ ಭಾವನೆಯಿದ್ದಾಗ ಮಾತ್ರ ಧರ್ಮ ಬೆಳೆಯುತ್ತದೆ. ಪ್ರತಿಯೊಬ್ಬ ಹಿಂದೂ ತಮ್ಮೊಳಗಿನ ವಿಚಾರಗಳನ್ನು ಆಚರಣೆಗೆ ತರಬೇಕು. ಐಕ್ಯಮತ ಬದುಕಿನ ಪ್ರಮುಖ ಧ್ಯೇಯವಾದಾಗ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ. ನಮ್ಮಲ್ಲಿ ಒಡಕುಂಟಾದರೆ ದೇಶದ ಉನ್ನತಿಗೆ ಮಾರಕ ಎಂದರು.
ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೆ.ಪಿ. ಸುರೇಶ್, ಗೋರಕ್ಷ ಪ್ರಮುಖ್ ಶಶಾಂಕ್, ದಿವೀರ್, ನಾಗೇಶ್ ಶೆಟ್ಟಿ, ಕೆ.ಎಂ. ಶ್ರೀನಿವಾಸ್ ಮತ್ತಿತರರು ಇದ್ದರು.