ಕವಿ ಸಮ್ಮೇಳನದಲ್ಲಿ ಪ್ರಸ್ತುತ ಪಡಿಸಿದ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಉತ್ತಮ ಕವಿತೆಗಳು ಅಧ್ಯಯನಶೀಲತೆಯಿಂದ ಬರುತ್ತದೆ. ಕಮ್ಮಟಗಳನ್ನು ಸಂಘಟಿಸುವ ಮೂಲಕ ಸೂಕ್ತ ಮಾರ್ಗದರ್ಶನವನ್ನು ಯುವ ಕವಿಗಳಿಗೆ ನೀಡಲಾಗುವುದು.
ಗದಗ: ಕವಿಗಳು ಜನಮಾನಸವನ್ನು ತಿದ್ದುವ ಶಕ್ತಿ ಹೊಂದಿದ್ದಾರೆ. ಕವಿಗಳಿಗೆ ಎಲ್ಲಿಲ್ಲದ ಮನ್ನಣೆ ಜಗತ್ತಿನಲ್ಲಿ ಇದೆ. ಇಲ್ಲಿಯ ಪರಿಸರ ಹೊಸ ಕವಿಗಳ ಬರವಣಿಗೆಯ ಚೈತನ್ಯ ನೀಡಲಿ ಎಂದು ಬಸವಬೆಟ್ಟ ಕಡಕೋಳ, ಕಪ್ಪತ್ತಗಿರಿಯ ಶರಣೆ ಓಂಕಾರೇಶ್ವರಿ ಮಾತಾಜಿ ತಿಳಿಸಿದರು.
ಕಪ್ಪತಗುಡ್ಡದ ಸೆರಗಿನ ದೇವರೆಡ್ಡಿ ಅಗಸನಕೊಪ್ಪ ಕೃಷಿ ಆಶ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ತಾಲೂಕಿನ ಕಸಾಪ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕವಿ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕವಿ ಸಮ್ಮೇಳನದಲ್ಲಿ ಪ್ರಸ್ತುತ ಪಡಿಸಿದ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಉತ್ತಮ ಕವಿತೆಗಳು ಅಧ್ಯಯನಶೀಲತೆಯಿಂದ ಬರುತ್ತದೆ. ಕಮ್ಮಟಗಳನ್ನು ಸಂಘಟಿಸುವ ಮೂಲಕ ಸೂಕ್ತ ಮಾರ್ಗದರ್ಶನವನ್ನು ಯುವ ಕವಿಗಳಿಗೆ ನೀಡಲಾಗುವುದು ಎಂದರು.
ಈ ವೇಳೆ ದೇವರಡ್ಡಿ ಅಗಸನಕೊಪ್ಪ, ಬಸವರಾಜ ಪಲ್ಲೇದ, ಸುರೇಶ ಕುಂಬಾರ, ರಮಾಕಾಂತ ಕಮತಗಿ, ಪಿ.ಆರ್. ಹಿರೇಮಠ, ನಿಂಗಪ್ಪ ಮಾಚೇನಹಳ್ಳಿ, ಶರಣಪ್ಪ ಹರ್ಲಾಪೂರ, ಯಲ್ಲಪ್ಪ ನಾವಿ, ಕಡಕೋಳ, ತಿಪ್ಪಣ್ಣ ಕೆಳಗಡೆ ಮೊದಲಾದವರನ್ನು ಸನ್ಮಾನಿಸಲಾಯಿತು. ಸುಶೀಲಮ್ಮ ಅಗಸನಕೊಪ್ಪ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಎಂ.ಜಿ. ಗಚ್ಚಣ್ಣವರ, ಡಾ. ರಶ್ಮಿ ಅಂಗಡಿ, ಈಶ್ವರ ಮೆಡ್ಲೇರಿ, ರಮಾಕಾಂತ ಕಮತಗಿ, ಸುರೇಶ ಕುಂಬಾರ, ತಿಪ್ಪಣ್ಣ ಕೊಂಚಿಗೇರಿ, ಕೆ.ಎ. ಬಳಿಗೇರ, ವೀರಣ್ಣ ಮಜ್ಜಗಿ, ರುದ್ರಣ್ಣ ಗುಳಗುಳಿ ಮೊದಲಾದ ಗಣ್ಯರು ಇದ್ದರು. ನಂತರ ಕಲಾ ತಂಡಗಳಿಂದ ಕಲಾಪ್ರದರ್ಶನ ಜರುಗಿತು.ಸರ್ವರ್ ಸಮಸ್ಯೆ ಬಗೆಹರಿಸಲು ಆಗ್ರಹಗದಗ: ಸರ್ವರ್ ಹಾಗೂ ರೇಷನ್ ಎತ್ತುವಳಿ ವಿಳಂಬ ಸಮಸ್ಯೆ ಬಗ್ಗೆ ಹಾಗೂ ಕಮಿಷನ್ ಬಿಡುಗಡೆ ಮಾಡುವಂತೆ ಆಗ್ರಹಿಸಿ ಗದಗ ತಾಲೂಕು ಗ್ರಾಮೀಣ ಪಡಿತರ ವಿತರಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಸಂಗದ ಅಧ್ಯಕ್ಷ ರಮೇಶ ಬೆಳಗಟ್ಟಿ, ಹಾಲಪ್ಪ ಉನಗುಂಟಿ, ಈರಣ್ಣ ತಿಮ್ಮಾಪೂರ, ಪ್ರಕಾಶ ಉಂಡೇನಹಳ್ಳಿ, ಫಕೀರಪ್ಪ ಗಾಣಿಗೇರ, ರಮೇಶ ನಾಯಕ, ಶಂಕರ ನಡುವಿನಮನಿ, ಕೃಷ್ಣ ಜಾಲಮ್ಮನವರ, ಬಸವರಾಜ ಹೊಸಳ್ಳಿ, ಫಕ್ಕೀರೇಶ ಹುಲಿ, ನಿಂಗಪ್ಪ, ಬಸಪ್ಪ ಮಡ್ಡಿ ಸೇರಿದಂತೆ ನ್ಯಾಯಬೆಲೆ ಅಂಗಡಿ ಮಾಲೀಕರು ಇದ್ದರು.