ಕನ್ನಡಪ್ರಭ ವಾರ್ತೆ ಯರಗಟ್ಟಿ
ಹಸುವಿನಿಂದ ಯಾರು ಬಳಲಬಾರದು ಎಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್‌ಗಳನ್ನು ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.ಪಟ್ಟಣದ ಬಸ್ ನಿಲ್ದಾಣ ಆವರಣದಲ್ಲಿ ಮಂಗಳವಾರ ನೂತನ ಪ್ರಾರಂಭಗೊಂಡ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಇಂದಿರಾ ಕ್ಯಾಂಟೀನ್ ಆರಂಭಿಸಿ ಶ್ರಮಿಕ ವರ್ಗ, ವಿದ್ಯಾರ್ಥಿ, ಬಡವರಿಗೆ, ಕೂಲಿ ಕಾರ್ಮಕರಿಗೆ, ದೂರದ ಪ್ರಯಾಣಿಕರಿಗೆ, ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸಿ ಅನುಕೂಲ ಮಾಡಿದ್ದಾರೆ. ಈ ಕ್ಯಾಂಟೀನ್‌ದಲ್ಲಿ ದಿನಕ್ಕೆ 200 ಪ್ಲೇಟ್ ಉಪಹಾರ ಮತ್ತು ಊಟದ ವ್ಯವಸ್ಥೆ ಇದ್ದು ಮುಂದಿನ ದಿನಗಳಲ್ಲಿ ಸಚಿವ ಡಾ.ಯತೀಂದ್ರರ ಗಮನಕ್ಕೆ ತಂದು 500 ಪ್ಪೇಟ್‌ವರೆಗೆ ವಿಸ್ತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಪಟ್ಟಣದ ರಾಜರಾಜೇಶ್ವರಿ ಆಶ್ರಮದ ಗಣಪತಿ ಸ್ವಾಮೀಜಿ ಮಾತನಾಡಿ, ಕೇವಲ ಐದು ರೂಪಾಯಿಗೆ ಉಪಹಾರ ಮತ್ತು ಹತ್ತು ರೂಪಾಯಿಗೆ ಮಧ್ಯಾಹ್ನ ಹಾಗೂ ರಾತ್ರಿ ಊಟ ನೀಡುವ ಮೂಲಕ ಜನರಿಗೆ ಅನುಕೂಲವಾಗಿದೆ. ಹಸಿವು ಮುಕ್ತ ಸಮಾಜ ನಿರ್ಮಾಣ ಮಾಡುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಎಂ.ವ್ಹಿ.ಗುಂಡಪ್ಪಗೋಳ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ನಿಖಿಲ್ ದೇಸಾಯಿ, ಬೆಳಗಾವಿ ಇಂಜಿನಿಯರ್ ವಿಠ್ಠಲ ತಡಸಲೂರ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಕೆಎಮ್‌ಎಫ್ ನಿರ್ದೇಶಕ ಶಂಕರ ಇಟ್ನಾಳ, ವೈ.ಡಿ.ಕಾಮನ್ನವರ, ವಿಠ್ಠಲ ಬಂಟನೂರ, ವೆಂಕಣ್ಣ ಕಳ್ಳಿಗುದ್ದಿ, ವಿಠ್ಠಲಗೌಡ ದೇವರಡ್ಡಿ, ಫಕ್ಕೀರಪ್ಪ ಹದ್ದನ್ನವರ, ಶಿವಾನಂದ ಕರಿಗೋಣ್ಣವರ, ಮಹಾಂತೇಶ ಉಪ್ಪಿನ, ವೆಂಕಣ್ಣ ಯರಡ್ಡಿ ಹಲವರು ಹಾಜರಿದ್ದರು.