ಸಾರಾಂಶ
ರೈತರಿಗೆ ಈಗಾಗಲೆ ಹಿಂಗಾರು ಬೀಜಗಳ ದಾಸ್ತಾನು ಮಾಡಿದ್ದು, ರೈತರು ಬಿತ್ತನೆಗೆ ಕೃಷಿ ಇಲಾಖೆಯಿಂದ ಕೊಡುವ ಬೀಜಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು.
ಡಂಬಳ: ಪ್ರತಿ ಹಳ್ಳಿಗೂ ಅಭಿವೃದ್ಧಿಯ ಬೆಳಕು ತಲುಪಬೇಕು. ಸರ್ಕಾರವು ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಗ್ರಾಮೀಣ ಪ್ರದೇಶ ಬಡಾವಣೆಗಳಲ್ಲಿ ಸಿಸಿ ರಸ್ತೆ, ಶೈಕ್ಷಣಿಕ, ರೈತರ ಹಿತ ಕಾಯುವ ಅಭಿವೃದ್ಧಿ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ್ ತಿಳಿಸಿದರು.
ಡಂಬಳ ಹೋಬಳಿಯ ಹಳ್ಳಿಗುಡಿ ಗ್ರಾಮದಲ್ಲಿ ₹45 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಗ್ರಂಥಾಲಯ, ಹಳ್ಳಿಕೇರಿ ಗ್ರಾಮದ ಕವಲೂರ ರಸ್ತೆಯ ಹಳ್ಳಕ್ಕೆ ₹45 ಲಕ್ಷ ಬ್ರಿಡ್ಜ್ ನಿರ್ಮಾಣ, ₹18 ಲಕ್ಷಗಳ ವೆಚ್ಚದಲ್ಲಿ ಅಂಗನವಾಡಿ ಕಟ್ಟಡಕ್ಕೆ ಭೂಮಿಪೂಜೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿ ಹೆಕ್ಟೇರ್ ₹8 ಸಾವಿರಕ್ಕೂ ಹೆಚ್ಚು ಪರಿಹಾರವನ್ನು ನೀಡುವುದಕ್ಕಾಗಿ ತಿಳಿಸಿದ್ದಾರೆ ಎಂದರು.ರೈತರಿಗೆ ಈಗಾಗಲೆ ಹಿಂಗಾರು ಬೀಜಗಳ ದಾಸ್ತಾನು ಮಾಡಿದ್ದು, ರೈತರು ಬಿತ್ತನೆಗೆ ಕೃಷಿ ಇಲಾಖೆಯಿಂದ ಕೊಡುವ ಬೀಜಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರವು ನುಡಿದಂತೆ ನಡೆದು ಜನರ ಸುಖ- ಸಮೃದ್ಧಿಗಾಗಿ ಸರ್ಕಾರದಿಂದ ಅನೇಕ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮುಂಡರಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ತಹಸೀಲ್ದಾರ್ ಯರಿಸ್ವಾಮಿ ಪಿ.ಎಸ್., ಇಒ ವಿಶ್ವನಾಥ ಹೊಸಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮರಿಯಮ್ಮ ಹಿರೇಮನಿ, ತಾಪಂ ಮಾಜಿ ಅಧ್ಯಕ್ಷ ಕೃಷ್ಟಗೌಡ ಪಾಟೀಲ್, ಗೋಣಿಬಸಪ್ಪ ಕೊರ್ಲಹಳ್ಳಿ, ಶಾಂತವೀರ ಚೆನ್ನಳ್ಳಿ, ಬಸವರಡ್ಡಿ ಬಂಡಿಹಾಳ, ಬಸವರಾಜ ಶಿರೋಳ, ಬಾಬು ಸರಕಾವಾಸ, ದೊಡ್ಡಬಸಪ್ಪ ಚೆನ್ನಳ್ಳಿ, ಗುರಣ್ಣ ಕುರ್ತಿಕೋಟಿ, ಪ್ರಥಮದರ್ಜೆ ಗುತ್ತಿಗೆದಾರ ನಾಗರಾಜ ಸಜ್ಜನ ಹಾಗೂ ಬೀರಪ್ಪ ಬೀರಣ್ಣನವರ, ಮಲ್ಲನಾಯ್ಕರ, ಯಲ್ಲಪ್ಪ ಬಚನಳ್ಳಿ, ಹನುಮಂತ ಆನಿ, ದೇವೇಂದ್ರ ಪೂಜಾರ, ಕುಬೇರಪ್ಪ ಕೊಳ್ಳಾರ, ಬಸಪ್ಪ ಮಲ್ಲನಾಯ್ಕರ, ನಿಂಗಪ್ಪ ತೊಂಡಿಹಾಳ, ವೀರಭದ್ರಪ್ಪ ಚುರ್ಚಿಹಾಳ, ಪಿಡಿಒ ಲತಾ ಮಾನೆ ಇತರರು ಇದ್ದರು.