ಯಕ್ಷಗಾನದ ಹೊಸ ತಲೆಮಾರಿನ ಕಲಾವಿದರು ಸೃಷ್ಟಿಯಾಗಲಿ: ಸ್ವರ್ಣವಲ್ಲೀ ಶ್ರೀ

| Published : Sep 02 2024, 02:03 AM IST

ಯಕ್ಷಗಾನದ ಹೊಸ ತಲೆಮಾರಿನ ಕಲಾವಿದರು ಸೃಷ್ಟಿಯಾಗಲಿ: ಸ್ವರ್ಣವಲ್ಲೀ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಯಕ್ಷಗಾನ ಎಂಬ ದಿವ್ಯವಾದ ಕಲೆಗೆ ಹೊಸ ತಲೆಮಾರಿನ ಕಲಾವಿದರು ಸೃಷ್ಟಿಯಾಗಬೇಕು. ಯಕ್ಷೋತ್ಸವದ ಕೇಂದ್ರಬಿಂದು ಮಕ್ಕಳಾಗಿದ್ದಾರೆ.

ಶಿರಸಿ: ವರ್ತಮಾನ ಕಾಲದ ವಿಷಯವನ್ನು ಬಿಂಬಿಸುವ ಅನೇಕ ಕಲೆಗಳಿವೆ. ಆದರೆ ವರ್ತಮಾನ ಕಾಲದಿಂದ ಪುರಾಣ ಕಾಲದ ಇತಿಹಾಸಕ್ಕೆ ಕರೆದುಕೊಂಡು ಹೋಗುವ ವಿಶ್ವದಲ್ಲಿರುವ ಒಂದು ಕಲೆ ಯಕ್ಷಗಾನ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಭಾನುವಾರ ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಠದ ಸುಧರ್ಮಾ ಸಭಾಭವನದಲ್ಲಿ ಯಕ್ಷ ಶಾಲ್ಮಲಾ ಹಾಗೂ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ಆಶ್ರಯದಲ್ಲಿ ಹಮ್ಮಿಕೊಂಡ ೨ನೇ ದಿನದ ಯಕ್ಷೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಹೊಸ್ತೋಟ ಮಂಜುನಾಥ ಭಾಗವತ್ ಪ್ರಶಸ್ತಿ ಪ್ರದಾನ ಮಾಡಿ, ಆಶೀರ್ವಚನ ನೀಡಿದರು.ಯಕ್ಷಗಾನ ಎಂಬ ದಿವ್ಯವಾದ ಕಲೆಗೆ ಹೊಸ ತಲೆಮಾರಿನ ಕಲಾವಿದರು ಸೃಷ್ಟಿಯಾಗಬೇಕು. ಯಕ್ಷೋತ್ಸವದ ಕೇಂದ್ರಬಿಂದು ಮಕ್ಕಳಾಗಿದ್ದಾರೆ. ಆಧುನಿಕ ಕಾಲದ ಮೊಬೈಲ್, ದೂರದರ್ಶನ ಹವ್ಯಾಸ ಅಂಟಿದೆ. ಇದರಿಂದ ಅನೇಕ ಸಮಾಜದಲ್ಲಿ ಅನಾರೋಗ್ಯ ಉಂಟಾಗಿದ್ದು, ಮಕ್ಕಳ ಮೇಲೆ ಯಕ್ಷಗಾನ ಪ್ರಭಾವ ಬೀರಬೇಕು ಎಂಬುದು ಯಕ್ಷ ಶಾಲ್ಮಲಾ ಒತ್ತಾಸೆ. ಮೊಬೈಲ್ ದುರ್ವೆಸನದ ಸಾಲಿನಲ್ಲಿದೆ. ಅದು ವ್ಯಸನವಾಗಿ ಅಂಟಬಾರದು ಎಂದರು.ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ವೇದ, ಪುರಾಣ, ಸ್ಮೃತಿ, ರಾಮಾಯಾಣಾಧಿ ಇತಿಹಾಸಗಳಲ್ಲಿ ಅನೇಕ ಕಥೆಗಳು ಬರುತ್ತವೆ. ಅವರು ಮನರಂಜನಾ ಕಥೆಗಳಲ್ಲ. ಸಮಾಜದಲ್ಲಿ ಸಂದೇಶಗಳು ಹೇಳುತ್ತವೆ. ಯಕ್ಷಗಾನದಲ್ಲಿ ಪದ್ಯಗಳು ಪ್ರಧಾನವಾಗಿದ್ದು, ಪುರಾಣದ ಕಥೆಗಳು ಪದ್ಯದ ರೂಪದಲ್ಲಿ ಹೇಳಲ್ಪಿಟ್ಟಿದೆ. ಯಕ್ಷಗಾನದಲ್ಲಿ ಪ್ರಧಾನವಾಗಿ ಭಾಗವತಿಕೆ ಹೆಚ್ಚು ಎಂದು ಹೇಳುತ್ತಾರೆ. ಮನರಂಜನೆ ಮಾತ್ರವಲ್ಲದೇ ಸಂಪ್ರದಾಯ ರಕ್ಷಣೆ ಮತ್ತು ಇಷ್ಟಸಿದ್ಧಿಯನ್ನು ನೀಡುತ್ತದೆ. ಯಕ್ಷಗಾನ ದೃಶ್ಯಕಾವ್ಯವಾಗಿದೆ ಎಂದರು.ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಮಾತನಾಡಿ, ರಾಮಾಯಣ ಮತ್ತು ಮಹಾಭಾರತ ಮನುಷ್ಯನಿಗೆ ಜ್ಞಾನವನ್ನು ನೀಡುತ್ತದೆ. ರಾಮಾಯಣ ಮತ್ತು ಮಹಾಭಾರತ ಸುಲಭವಾಗಿ ಅರ್ಥವಾಗಬೇಕಾದರೆ ಯಕ್ಷಗಾನ ಹೆಚ್ಚೆಚ್ಚು ನೋಡಬೇಕು ಎಂದರು.ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶೀನ್ಮನೆ ಮಾತನಾಡಿ, ಋಷಿ ಪರಂಪರೆಯಿಂದ ಬಂದವರು ನಾವು. ಗುರುಗಳಿಗೆ ಎಷ್ಟು ವಂದಿಸಿದರೂ ಕಡಿಮೆಯೇ. ಯಕ್ಷಗಾನ ಪರಂಪರೆಗೆ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯವಿದೆ ಎಂದರು.ಯಕ್ಷ ಶಾಲ್ಮಲಾ ಕಾರ್ಯದರ್ಶಿ ನಾಗರಾಜ ಜೋಶಿ ಸೋಂದಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷೋತ್ಸವದ ಪಕ್ಷಿನೋಟದ ಕುರಿತು ಎಂ.ಎನ್. ಹೆಗಡೆ ಹಳವಳ್ಳಿ ಮಾತನಾಡಿದರು.

ಸನ್ಮಾನ ಪತ್ರವನ್ನು ಗುರುಪ್ರಸಾದ ಹೆಗಡೆ ವಾಚಿಸಿದರು. ಯಕ್ಷ ಶಾಲ್ಮಲಾ ಕಾರ್ಯಾಧ್ಯಕ್ಷ ಆರ್.ಎಸ್.ಹೆಗಡೆ ಭೈರುಂಬೆ ಸ್ವಾಗತಿಸಿದರು. ಶ್ರೀನಿವಾಸ ಮತ್ತಿಘಟ್ಟ ನಿರೂಪಿಸಿದರು. ನಿರ್ಣಾಯಕರ ಪರವಾಗಿ ಚಂದ್ರಕಲಾ ಭಟ್ಟ ಮಾತನಾಡಿದರು.ಹೊಸ್ತೋಟ ಮಂಜುನಾಥ ಭಾಗವತ್ ಪ್ರಶಸ್ತಿ ಪ್ರದಾನ

ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಠದ ಸುಧರ್ಮಾ ಸಭಾಭವನದಲ್ಲಿ ಭಾನುವಾರ ಯಕ್ಷ ಶಾಲ್ಮಲಾ ಹಾಗೂ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ೨ನೇ ದಿನದ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಹೊಸ್ತೋಟ ಮಂಜುನಾಥ ಭಾಗವತ್ ಪ್ರಶಸ್ತಿಯನ್ನು ಕೆ.ಜಿ. ಮಂಜುನಾಥ ಕೆಳಮನೆ ಅವರಿಗೆ ಸ್ವರ್ಣವಲ್ಲೀ ಶ್ರೀಗಳು ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿ, ಕೆ.ಜಿ. ಮಂಜುನಾಥ ಮಾತನಾಡಿ, ನಾವು ನಿರ್ವಹಿಸುವ ಪಾತ್ರದಲ್ಲಿ ಅತೃಪ್ತಿಯಿರುವ ವ್ಯಕ್ತಿ ನಿಜವಾದ ಕಲಾವಿದ. ಕಲಾವಿದನಿಗೆ ತೃಪ್ತಿ ಇರಬಾರದು. ಹೊಸ್ತೋಟ ಮಂಜುನಾಥ ಭಾಗವತ್ ಅವರ ಸಂಬಂಧ ಬಹಳ ಅನೇಕ ವರ್ಷದ್ದು, ನನ್ನದು ಹಾಗೂ ಮಠದ ಸಂಬಂಧವೂ ೩೫ ವರ್ಷದ್ದು, ಇಲ್ಲಿಯ ವರೆಗೂ ಬರುತ್ತಿದ್ದೇನೆ. ಹೊಸ್ತೋಟ ಮಂಜುನಾಥ ಭಾಗವತರು ತಪಸ್ಸಿನಂತೆ ಯಕ್ಷಗಾನವನ್ನು ಸ್ವೀಕರಿಸಿದ್ದರು. ಯುವಕರು ಯಕ್ಷಗಾನ ಕ್ಷೇತ್ರಕ್ಕೆ ಬರಬೇಕು ಎಂಬುದು ಹೊಸ್ತೋಟ ಭಾಗವತರ ಮನಸ್ಸಿನಲ್ಲಿತ್ತು. ಅನೇಕ ಯುವಕರನ್ನು ಯಕ್ಷಗಾನಕ್ಕೆ ಕರೆ ತಂದಿದ್ದರು ಎಂದರು.