ಸಾರಾಂಶ
ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಯ ಪ್ರಯುಕ್ತ ಪಾಪು ಅಭಿಮಾನಿ ಬಳಗವು ಇಲ್ಲಿಯ ಕೆಂಪಗೇರಿಯ ಹೇಮಾ ನಿಲಯದಲ್ಲಿ ಚುನಾವಣಾ ಕಚೇರಿಯ ಉದ್ಘಾಟನೆ ನೆರವೇರಿಸಿ ಹೊಸ ಧೈಯೋದ್ದೇಶದೊಂದಿಗೆ ಚುನಾವಣೆ ಎದುರಿಸುತ್ತಿರುವ ಪಾಪು ಅಭಿಮಾನಿ ಬಳಗಕ್ಕೆ ಬೆಂಬಲಿಸಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿ ಎಂದು ಮನವಿ ಮಾಡಿದರು.
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕ್ಷಮತೆ ಕುಗ್ಗುತ್ತಿರುವ ಸಂದರ್ಭದಲ್ಲಿ ಗತವೈಭವ ಮರುಕಳಿಸಲು ಬದಲಾವಣೆಯ ಪರ್ವದ ಅವಶ್ಯಕತೆ ಮತದಾರರು ಅರಿಯಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ. ಎಸ್.ಸಿ. ಹಿರೇಮಠ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಯ ಪ್ರಯುಕ್ತ ಪಾಪು ಅಭಿಮಾನಿ ಬಳಗವು ಇಲ್ಲಿಯ ಕೆಂಪಗೇರಿಯ ಹೇಮಾ ನಿಲಯದಲ್ಲಿ ಚುನಾವಣಾ ಕಚೇರಿಯ ಉದ್ಘಾಟನೆ ನೆರವೇರಿಸಿ ಹೊಸ ಧೈಯೋದ್ದೇಶದೊಂದಿಗೆ ಚುನಾವಣೆ ಎದುರಿಸುತ್ತಿರುವ ಪಾಪು ಅಭಿಮಾನಿ ಬಳಗಕ್ಕೆ ಬೆಂಬಲಿಸಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿ ಎಂದು ಮನವಿ ಮಾಡಿದರು.ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡಿನ ಪ್ರಮುಖರು, ಸಾಹಿತಿಗಳು, ಯುವ ಬರಹಗಾರು, ವ್ಯಾಪಾರಸ್ಥರು, ಹಿರಿಯರು, ಕಿರಿಯರ ಅಭಿಪ್ರಾಯದ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೇವೆ. ಜನಾಭಿಪ್ರಾಯದ ಹಿನ್ನೆಲೆಯಲ್ಲಿ ಚುನಾವಣೆ ಎದುರಿಸೋಣ ಎಂದರು.
ಪ್ರಧಾನ ಕಾರ್ಯದರ್ಶಿ ಸ್ಥಾನದ ಅಭ್ಯರ್ಥಿ ಪ್ರಕಾಶ ಉಡಕೇರಿ, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ. ಶರಣಪ್ಪ ಕೊಟಗಿ, ಕೋಶಾಧ್ಯಕ್ಷ ಸ್ಥಾನದ ಅಭ್ಯರ್ಥಿ ವೀರಣ್ಣ ಯಳಲ್ಲಿ ಹಾಗೂ ಬಿಜೆಪಿ ಮುಖಂಡರಾದ ಸವಿತಾ ಅಮರಶೆಟ್ಟಿ ಮಾತನಾಡಿದರು. ಮಹಿಳಾ ಸ್ಥಾನದ ಅಭ್ಯರ್ಥಿ ಡಾ. ರತ್ನಾ ಐರಸಂಗ, ಸಹ ಕಾರ್ಯದರ್ಶಿ ಸ್ಥಾನದ ಅಭ್ಯರ್ಥಿ ಮಾರ್ತಾಂಡಪ್ಪ ಕತ್ತಿ ಸೇರಿದಂತೆ ಇತರರು ಇದ್ದರು.