ಕನ್ನಡಪ್ರಭ ವಾರ್ತೆ ಗೋಕಾಕ ಮಹಾತ್ಮರ ಚಿಂತನೆಗಳಿಂದ ಶ್ರೇಷ್ಠವಾದ ಮಾನವ ಜನ್ಮದ ಆತ್ಮೋದ್ಧಾರ ಮಾಡಿಕೊಳ್ಳುವಂತೆ ಮನ್ನಿಕೇರಿಯ ವಿಜಯಸಿದ್ದೇಶ್ವರ ಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಮಹಾತ್ಮರ ಚಿಂತನೆಗಳಿಂದ ಶ್ರೇಷ್ಠವಾದ ಮಾನವ ಜನ್ಮದ ಆತ್ಮೋದ್ಧಾರ ಮಾಡಿಕೊಳ್ಳುವಂತೆ ಮನ್ನಿಕೇರಿಯ ವಿಜಯಸಿದ್ದೇಶ್ವರ ಸ್ವಾಮಿಗಳು ಹೇಳಿದರು.ನಗರದ ವಿಠಲ ರುಕ್ಮಿಣಿ ಸಭಾಂಗಣದಲ್ಲಿ ಶ್ರೀಕ್ಷೇತ್ರ ಯಡೂರದಲ್ಲಿ ನಡೆಯುವ ಕಾರ್ಯಕ್ರಮಗಳ ನಿಮಿತ್ತ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಾತ್ಮರ, ಶರಣರ, ಸಂತರ ಹಿತನುಡಿಗಳನ್ನು ಕೇಳಿ ಅದನ್ನು ಆಚರಣೆಗೆ ತರುವುದರೊಂದಿಗೆ ಮಾನವ ಜನ್ಮವನ್ನು ಸಾರ್ಥಕ ಪಡೆಸಿಕೊಳ್ಳಿ. ಆಧ್ಯಾತ್ಮಿಕ ಚಿಂತನೆಯಿಂದ ದೇವರ ಪ್ರೀತಿಗೆ ಪಾತ್ರರಾಗಿ ಒಳ್ಳೆಯ ಆಚರಣೆಗಳಿಂದ ನಾವೆಲ್ಲರೂ ದೈವತ್ವವನ್ನು ಪಡೆಯಬಹುದು ಎಂದರು.ಪ್ರವಚನಕಾರ ಗಂಡಹಿಂಗ್ಲಜನ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧಕ್ಷ ಬ್ರಹ್ಮನನ್ನು ವೀರಭದ್ರೇಶ್ವರರು ಸಂಹರಿಸಿದ ಕ್ಷೇತ್ರ ಯಡೂರು. ಅದನ್ನು ಶ್ರೀಶೈಲದ ಜದ್ಗಗುರುಗಳು ರಾಜಗೋಪೂರ ಸ್ಥಾಪಿಸಿ ಜೀರ್ಣೋದ್ಧಾರ ಮಾಡಿದ್ದಾರೆ. ಪ್ರಸಿದ್ಧ ಸುಕ್ಷೇತ್ರ ಮಾಡುವ ಉದ್ದೇಶದಿಂದ ಹಲವಾರು ಧಾರ್ಮಿಕ ಕಾರ್ಯಗಳನ್ನು ಕೈಗೊಂಡಿದ್ದು, ಅವುಗಳಲ್ಲಿ ತಾವೆಲ್ಲರೂ ಪಾಲ್ಗೊಳುವಂತೆ ಕರೆ ನೀಡಿದರು.ಈ ಸಂದರ್ಭದಲ್ಲಿ ಮುಪ್ಪಯ್ಯನ ಮಠದ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಪ್ರಕಾಶ ಕಂಬಿ, ವಿಜಯಶಾಸ್ತ್ರಿ, ಯಡೂರ ಪಾದಯಾತ್ರೆ ಕಮೀಟಿಯ ರಮೇಶ ಮೂರತೆಲೆ, ಮಲ್ಲಯ್ಯ ಹಿರೇಮಠ, ಚಂದ್ರಕಾಂತ ಕುರಬೇಟ, ಸಂಜೀವ ಪೂಜಾರಿ, ಶ್ರೀಕಾಂತ್ ಮಗ್ಗೆನ್ನವರ, ಮಲ್ಲಿಕಾರ್ಜುನ ಪೂಜಾರಿ, ಅನೀಲ ಸಂನಾಜಿ, ಅಶೋಕ್ ಹೊಸಮನಿ, ಸೋಮನಾಥ ಮಗದುಮ್ಮ, ಮಲ್ಲಿಕಾರ್ಜುನ ಹೊಸಪೇಟೆ, ರವಿ ಜುಗುಲಿ, ಬಸವರಾಜ ಊರಿ ಇದ್ದರು.