ಸಾರಾಂಶ
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಸಮಾಜದ ಹಿತವನ್ನು ಕಾಯುವ ಸದ್ಗುಣಗಳನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಿದೆ ಎಂದು ಸ್ಥಳೀಯ ತೆಗ್ಗಿನ ಮಠದ ವರಸದ್ಯೋಜಾತ ಸ್ವಾಮೀಜಿ ತಿಳಿಸಿದರು.ಪಟ್ಟಣದ ಟೆಕ್ಕದಗರಡಿಕೆರೆ ಬಳಿಯಿರುವ ಮಸ್ಜಿದ್-ಎ-ಅಹ್ಲೇ ಹದೀಸ್‌ನಲ್ಲಿ ಭಾನುವಾರ ಅಯೋಜಿಸಿದ್ದ ರಮಜಾನ್ ಸೌಹಾರ್ದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾವು ಇಂತಹದ್ದೇ ಧರ್ಮದಲ್ಲಿ ಹುಟ್ಟಬೇಕು ಎನ್ನುವುದು ಸಾಧ್ಯವಿಲ್ಲ. ಹಿಂದೂ-ಮುಸ್ಲಿಂ ಧರ್ಮದಲ್ಲಿ ಆಚರಣೆಗಳು ಬೇರೆ-ಬೇರೆ ಇರಬಹುದು ಆದರೆ ನಾವು-ನಿವು ಮಾಡುವ ಪೂಜೆ, ಪ್ರಾರ್ಥನೆ ಭಗವಂತನಿಗೆ ಸಲ್ಲುತ್ತದೆ ಎಂದು ನುಡಿದರು.ಮಾನವ ಕಷ್ಟದಿಂದ ಸುಖದ ಕಡೆಗೆ ಬರಲು ಹಲವು ಸತ್ಕಾರ್ಯಗಳನ್ನು ಮಾಡುತ್ತಾನೆ. ಅದರಂತೆ ಮುಸ್ಲಿಮರು ಇಂತಹ ಇಫ್ತಾರ್ ಕೂಟ ಅಯೋಜಿಸಿರುವುದು ಶ್ಲಾಘನೀಯ ಎಂದರು.
ವಾಲ್ಮೀಕಿ ನಗರದ ಹಾಲಸ್ವಾಮಿ ಮಠದ ಸಣ್ಣಹಾಲಸ್ವಾಮೀಜಿ ಮಾತನಾಡಿ, ಹಿಂದೂಗಳಿಗೆ ಶ್ರಾವಣ ಮಾಸ ಪವಿತ್ರವಾದರೆ, ಮುಸ್ಲಿಂ ಸಮುದಾಯಕ್ಕೆ ರಂಜಾನ್ ಪವಿತ್ರ ಮಾಸವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸರ್ವ ಧರ್ಮೀಯರನ್ನು ಕರೆದು ಇಫ್ತಾರ್ ಕೂಟ ಅಯೋಜಿಸಿರುವುದು ಶ್ಲಾಘನೀಯ. ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕೋಣ ಎಂದರು.ಮುಸ್ಲಿಂ ಸಮುದಾಯದ ಗುರು ಷೈಕ್ ಮೌಲಾನಾ ಅಬ್ದುಲ್ ಅಜೀಜ್ ಜಾಮಯಿ, ಚಿತ್ರದುರ್ಗದ ಮಹಮ್ಮದ್ ನೂರ್ ಮಾತನಾಡಿದರು.
ರಿಯಾಜ್ ಸಾಹೇಬ್ ಉಮ್ರಿ ಪ್ರಸ್ತಾವಿಕವಾಗಿ ಮಾತನಾಡಿದರುಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ವಕೀಲರ ಸಂಘದ ಅಧ್ಯಕ್ಷ, ಟಿ.ವೆಂಕಟೇಶ, ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ. ಹಾಲೇಶ, ಅಕ್ರಮ್ ಭಾಷಾ, ಬಡಜಿ ಶಬೀರ್ ಅಹಮದ್, ಡೆಂಕಿ ಇಮ್ರಾನ್, ಇಸ್ಮಾಯಿಲ್ ಎಲಿಗಾರ, ಶಿರಹಟ್ಟಿ ದಂಡೇಪ್ಪ, ಮಹಬೂಬ್ ಸಾಹೇಬ್ ಬಿ.ಅಲ್ಲಾಭಕ್ಷೀ ಸಾಹೇಬ್, ಎ.ಮಹಮದ್ ಆಲಿ, ಡಿ.ಜಬೀವುಲ್ಲಾ, ಡಿ.ಮುಜೀಬ್, ಎ.ಅನ್ಸರ್, ಬಿ.ಅಬ್ದುಲ್ ಅಲೀಮ್, ಬಿ.ಇಮಾಮ್ ಸಾಹೇಬ್, ತೋಷಿಪ್, ಓ.ಹಾಯತ್, ಸಲಿಂ, ಅಕ್ರಂ, ಕೆ.ಸಿಕಂದರ್, ಡಿ.ಅಬ್ದುಲ್ ವಾಹೀದ್, ಎ.ಶೇಖರ್ ಆಲಿ, ರಿಯಾಜ್, ಹಾಸೀಪ್, ಅಲಂಕಮ್, ಅಭು, ಅತೀಖ್, ಪಾರುಖ್, ಜಿಯಾ, ಡಿ.ರಿಯಾಜ್, ಟಿ.ಮುಸವಾರ್, ಸಾದೀಖ್, ಸಾಲ್ಮನ್ ಸೇರಿದಂತೆ ಇತರರು ಇದ್ದರು.