ಯುವ ಪರಿವರ್ತನೆ ಯಾತ್ರೆ ಯಶಸ್ವಿಯಾಗಲಿ

| Published : Oct 08 2025, 01:01 AM IST

ಸಾರಾಂಶ

ರಾಜ್ಯದ ಜ್ವಲಂತ ಸಮಸ್ಯೆಗಳು ಹಾಗೂ ಜನ ಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಸರ್ಕಾರದ ಗಮನಕ್ಕೆ ತರಲು ಪಕ್ಷಾತೀತವಾಗಿ, ಜ್ಯಾತ್ಯತೀತವಾಗಿ, ಸರ್ವ-ಧರ್ಮದ ಸರ್ವರು ಜಿಲ್ಲಾ ಕೇಂದ್ರಗಳಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ.

ನವಲಗುಂದ:

ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದು ಅವರನ್ನು ದುಶ್ಚಟಗಳಿಂದ ಮುಕ್ತಗೊಳಿಸಲು ನಡೆಯುತ್ತಿರುವ ಯುವ ಪರಿವರ್ತನೆ ಯಾತ್ರೆ ಯಶಸ್ವಿಯಾಗಲೆಂದು ರೈತ ಮುಖಂಡ ಸುಭಾಷಶ್ಚಂದ್ರಗೌಡ ಪಾಟೀಲ ಹೇಳಿದರು.

ಕರ್ನಾಟಕ ಜನಸಾಮಾನ್ಯರ ಒಕ್ಕೂಟದಿಂದ ಬೀದರ್‌ನಿಂದ ಬೆಂಗಳೂರು ವರೆಗೆ ನಡೆಯುತ್ತಿರುವ ಬೆಂಗಳೂರು ಚಲೋ ಚಳವಳಿಯ ಹೋರಾಟವನ್ನು (ಯುವ ಪರಿವರ್ತನೆ ಯಾತ್ರೆ) ಮಹದಾಯಿ, ಕಳಸಾ-ಬಂಡೂರಿ ಪಕ್ಷಾತೀತ ಹೋರಾಟ ಸಮಿತಿಯಿಂದ ಸ್ವಾಗತಿಸಿ ಮಾತನಾಡಿದರು.

ಯಾತ್ರೆ ಸಂಚಾಲಕ ಯಲ್ಲಪ್ಪ ಹೆಗಡೆ ಮಾತನಾಡಿ, ರಾಜ್ಯದ ಜ್ವಲಂತ ಸಮಸ್ಯೆಗಳು ಹಾಗೂ ಜನ ಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಸರ್ಕಾರದ ಗಮನಕ್ಕೆ ತರಲು ಪಕ್ಷಾತೀತವಾಗಿ, ಜ್ಯಾತ್ಯತೀತವಾಗಿ, ಸರ್ವ-ಧರ್ಮದ ಸರ್ವರು ಜಿಲ್ಲಾ ಕೇಂದ್ರಗಳಲ್ಲಿ ಜಾಥಾ ಹಮ್ಮಿಕೊಂಡಿದ್ದೇವೆ. ಅಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ರಾಜ್ಯದ ಅಭಿವೃದ್ಧಿಯತ್ತ ಚಿತ್ತ ಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗ ಮೂಲಕ ಯುವಜನರ ಹಾಗೂ ರೈತರ ಏಳಿಗೆಗೆ ಶ್ರಮಿಸುವಂತೆ ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು.

ನಂತರ ರೈತ ಭವನದಿಂದ ಗಾಂಧಿ ಸರ್ಕಲ್ ಮಾರ್ಗವಾಗಿ ಬಸ್ ನಿಲ್ದಾಣದ ವರೆಗೂ ರೈತರ ಪರ ಹಾಗೂ ವಿವಿಧ ಬೇಡಿಕೆಗಳ ಘೋಷಣೆ ಕೂಗುತ್ತಾ ಯಾತ್ರೆ ಧಾರವಾಡದತ್ತ ಪ್ರಯಾಣ ಬೆಳೆಸಿತು.

ಈ ವೇಳೆ ಯಲ್ಲಪ್ಪ ದಾಡಿಬಾವಿ, ಹನುಮಂತ ತಳವಾರ, ರವಿ ತೋಟದ ಮಂಜುಳಾ ನಾಯ್ಕರ ವಿನಾಯಕ ತಿರಕೋಡಿ ಸೇರಿದಂತೆ ರೈತರು ಹಾಗೂ ಯುವ ಪರಿವರ್ತನೆ ಯಾತ್ರೆಯ ಯುವಕರು ಭಾಗಿಯಾಗಿದ್ದರು.