ಒಗ್ಗಟ್ಟು ಸಮಾಜದ ಏಳಿಗೆಗೆ ಸಹಕಾರಿಯಾಗಲಿ: ಶಾಸಕ ಶಿವರಾಮ ಹೆಬ್ಬಾರ

| Published : Nov 18 2025, 01:15 AM IST

ಒಗ್ಗಟ್ಟು ಸಮಾಜದ ಏಳಿಗೆಗೆ ಸಹಕಾರಿಯಾಗಲಿ: ಶಾಸಕ ಶಿವರಾಮ ಹೆಬ್ಬಾರ
Share this Article
  • FB
  • TW
  • Linkdin
  • Email

ಸಾರಾಂಶ

ಜಾಗೃತ ಸಮಾಜದ ಸಮಷ್ಠಿಯ ನಿರ್ಮಾಣಕ್ಕಾಗಿ ಶ್ರೀಗಳು ತಪಸ್ಸಿನ ರೀತಿಯಲ್ಲಿ ಕೆಲಸ ಮಾಡುತ್ತ ಬಂದಿದ್ದಾರೆ.

ಶಾರದಾಂಬಾ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಗುರು ಸಾನಿಧ್ಯ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಯಲ್ಲಾಪುರ

ಹಿಂದುಳಿದ ಗ್ರಾಮ ಒಕ್ಕಲಿಗ ಸಮುದಾಯದವರು ಘಟ್ಟದ ಮೇಲೆ ಬಂದು ಕಷ್ಟಪಟ್ಟು ಬೆವರಿನ ಮೂಲಕ ಬದುಕನ್ನು ಕಟ್ಟಿಕೊಂಡಿದ್ದು, ಅವರ ಶ್ರಮ ಸಂಸ್ಕೃತಿಯ ಪ್ರತೀಕ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಭಾನುವಾರ ಪಟ್ಟಣದ ನಾಯಕನಕೆರೆ ಶಾರದಾಂಬಾ ದೇವಸ್ಥಾನ ಸಭಾಭವನದಲ್ಲಿ ತಾಲೂಕಾ ಗ್ರಾಮ ಒಕ್ಕಲಿಗ ಸಂಘದ ಆಶ್ರಯದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಗುರು ಸಾನಿಧ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಾಗೃತ ಸಮಾಜದ ಸಮಷ್ಠಿಯ ನಿರ್ಮಾಣಕ್ಕಾಗಿ ಶ್ರೀಗಳು ತಪಸ್ಸಿನ ರೀತಿಯಲ್ಲಿ ಕೆಲಸ ಮಾಡುತ್ತ ಬಂದಿದ್ದಾರೆ. ಗ್ರಾಮ ಒಕ್ಕಲಿಗರ ಒಗ್ಗಟ್ಟು ಸಮಾಜದ ಏಳಿಗೆಗೆ ಸಹಕಾರಿಯಾಗಲಿ ಎಂದರು.

ಆದಿ ಚುಂಚನಗಿರಿ ಟ್ರಸ್ಟ್ ನಿರ್ದೇಶಕ ಎಂ.ಟಿ. ಗೌಡ ಒಕ್ಕಲಿಗರು ನಡೆದು ಬಂದ ಪರಂಪರೆಯ ಕುರಿತು ಉಪನ್ಯಾಸ ನೀಡಿದರು.

ಆದಿ ಚುಂಚನಗಿರಿಯ ಶಾಖಾ ಮಠದ ನಿಶ್ಚಲಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಬದುಕಿನ ಸಂಕಷ್ಟ ದೂರವಾಗಿ ಸಂಸಾರ ಸಾಗರ ದಾಟಲು ಮೋಕ್ಷ ಸಂಪಾದನೆ ಸಲುವಾಗಿ ಗುರುವಿನ ಪದ, ಪಾದ ಪೂಜೆ ಅನುಗ್ರಹ ಪಡೆದುಕೊಳ್ಳಬೇಕು. ಸಂಪಾದನೆ ಮಾಡಿದ್ದನ್ನು ಒಂದಿಷ್ಟು ಬೇರೆಯವರಿಗೆ ದಾನ ಧರ್ಮ ಮಾಡಬೇಕು. ನಿರ್ಮಲ ಚಿತ್ತ, ನಿಶ್ಚಲ ಮನಸ್ಸಿನಿಂದ ಭಗವಂತನ ಆರಾಧಿಸಿದರೆ ಭಗವಂತನ ಸಾನಿಧ್ಯ ದೊರೆಯಲು ಸಾಧ್ಯ ಎಂದು ನುಡಿದರು.

ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಗ್ರಾಮ ಒಕ್ಕಲಿಗರ ಪರಂಪರೆ ಸಂಘಟನೆ ಕುರಿತು ಮಾತನಾಡಿದರು. ಗ್ರಾಮ ಒಕ್ಕಲಿಗ ಸಂಘದ ಅಧ್ಯಕ್ಷ ಶೇಖರ ಪಟಗಾರ ಅಧ್ಯಕ್ಷತೆ ವಹಿಸಿದ್ದರು.

ಜಿಪಂ ಮಾಜಿ ಸದಸ್ಯ ವಿಜಯ ಮಿರಾಶಿ, ಜಗದೀಶ ದೀಕ್ಷಿತ, ವಿವಿಧ ಸಂಘಟನೆಗಳ ಪ್ರಮುಖರಾದ ಎಂ.ಎನ್. ಪಟಗಾರ, ವಾಮನ ಗೌಡ, ಗೋವಿಂದ ಗೌಡ, ಹನುಮಂತ ಗೌಡ, ಸಂತೋಷ ಗೌಡ, ಅರುಣ ಗೌಡ, ಮೋಹನ ಗೌಡ, ಸುಬ್ರಾಯ ಗೌಡ, ತಿಮಪ್ಪ ಗೌಡ, ಪಾಂಡುರಂಗ ಪಟಗಾರ, ಮಂಜಪ್ಪ ಡಿವಿಬಿ, ವಿನಾಯಕ ಎಸ್. ಪಟಗಾರ, ರಾಜೇಶ್ವರಿ ಪಟಗಾರ, ಗಂಗಾಧರ ಪಟಗಾರ, ಪ್ರಮುಖರಾದ ಎಂ.ಕೆ. ಪಟಗಾರ, ಎಂ.ಆರ್. ಪಟಗಾರ, ಗಂಗಾಧರ ಪಟಗಾರ, ಈಶ್ವರ ಪಟಗಾರ, ಮಂಜುನಾಥ ಟಿ. ಪಟಗಾರ, ಸಂಜೀವ ಪಟಗಾರ, ಗಣಪತಿ ಡಿ. ಪಟಗಾರ, ಸತೀಶ ಎನ್. ಪಟಗಾರ, ಬಾಬು ಬಾಂದೇಕರ್, ಗಂಗಾಧರ ವಿ. ಪಟಗಾರ ಗುಳ್ಳಾಪುರ ಭಾಗವಹಿಸಿದ್ದರು.

ಇದೇ ವೇಳೆ ಸಾಧಕರು, ಪ್ರತಿಭಾವಂತರನ್ನು ಪುರಸ್ಕರಿಸಲಾಯಿತು. ಅಪಘಾತ ಪರಿಹಾರ ನಿಧಿ ಉದ್ಘಾಟಿಸಲಾಯಿತು. ನಯನಾ ಪಟಗಾರ ಭರತನಾಟ್ಯದ ಮೂಲಕ ಪ್ರಾರ್ಥಿಸಿದರು. ಬಿಆರ್‌ಪಿ ಪ್ರಶಾಂತ ಪಟಗಾರ ಸ್ವಾಗತಿಸಿದರು. ಶಿಕ್ಷಕರಾದ ರಾಘವೇಂದ್ರ ಗೌಡ ನಿರ್ವಹಿಸಿದರು. ಗಣಪತಿ ಪಟಗಾರ ವಂದಿಸಿದರು.