ಸಾರಾಂಶ
ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣ್ ರಾವ್, ಜಯಪ್ಪ ಹೊನ್ನಾಳಿ ಅವರ ಸಮ್ಮುಖದಲ್ಲಿ ಕಾವ್ಯ ವಾಚನ ಮತ್ತು ಗೀತ ಗಾಯನ
ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ಸುಗಮ ಸಂಗೀತ ಪರಿಷತ್ತು ಮೈಸೂರು ಜಿಲ್ಲಾ ಘಟಕದ ವತಿಯಿಂದ ಜು.28ರ ಸಂಜೆ 5ಕ್ಕೆ ಜೆ.ಪಿ. ನಗರ ಅಕ್ಕಮಹಾದೇವಿ ರಸ್ತೆಯ ಎಂಬಿಸಿಟಿ ಸಭಾಂಗಣದಲ್ಲಿ ಕವಿಯ ನೋಡಿ ಕವಿತೆ ಕೇಳಿ ಕಾರ್ಯಕ್ರಮ ನಡೆಯಿತು. ಎಂದು ಘಟಕದ ಅಧ್ಯಕ್ಷ ನಾಗರಾಜ್ ವಿ. ಬೈರಿ ತಿಳಿಸಿದರು.ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣ್ ರಾವ್, ಜಯಪ್ಪ ಹೊನ್ನಾಳಿ ಅವರ ಸಮ್ಮುಖದಲ್ಲಿ ಕಾವ್ಯ ವಾಚನ ಮತ್ತು ಗೀತ ಗಾಯನ ನಡೆಯಿತು. ಈ ಕಾರ್ಯಕ್ರಮವನ್ನು ಪರಿಷತ್ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಉದ್ಘಾಟಿಸಿದರು. ಕಾರ್ಯಾಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಅತಿಥಿಯಾಗಿದ್ದರು.
ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ವಿ. ಭೈರಿ, ಘಟಕದ ಪದಾಧಿಕಾರಿಗಳಾದ ಸಿರಿಬಾಲು, ಡೇವಿಡ್, ವೆಂಕಟೇಗೌಡ, ಚಾಮರಾಜನಗರದ ಸಿ.ಎಂ. ನರಸಿಂಹಮೂರ್ತಿ, ಎನ್.ಗಂಗಾಧರಪ್ಪ, ಎನ್. ಬೆಟ್ಟೇಗೌಡ ಮೊದಲಾದವರು ಇದ್ದರು.ಗಾಯಕರಾದ ವೈ.ಕೆ. ಮುದ್ದುಕೃಷ್ಣ, ಕಿಕ್ಕೇರಿ ಕೃಷ್ಣಮೂರ್ತಿ, ಸುನಿತಾ ಜೋಗಿ, ಮಂಗಳಾ ರವಿ, ಎ.ಡಿ. ಶ್ರೀನಿವಾಸ್, ನಿತಿನ್ ರಾಜಾರಾಮ್ ಶಾಸ್ತ್ರಿ, ಡೇವಿಡ್ ಪ್ರಭಾಂಜಲಿ, ಅಮೂಲ್ಯ, ದಿವ್ಯಾ ಸಚ್ಚಿದಾನಂದ, ಹಂಸಿನಿ, ಪುರುಷೋತ್ತಮ್, ರಾಜೇಶ್ ಪಡಿಯಾರ್ ಹಾಡಲಿದ್ದು, ಇವರಿಗೆ ಕೀಬೋರ್ಡ್ ನಲ್ಲಿ ಗಣೇಶ್ ಭಟ್, ಪುರುಷೋತ್ತಮ್, ತಬಲದಲ್ಲಿ ರಘುನಾಥ್, ರಿದಂ ಪ್ಯಾಡ್- ಗುರುದತ್ತ, ಡ್ರಮ್ಸ್ ರಾಘವೇಂದ್ರ ಪ್ರಸಾದ್ ವಾದ್ಯ ಸಹಕಾರ ನೀಡಿದರು.