ಬಿಬಿಎಸ್ ಸೀಟು ಪಡೆದ ವಿದ್ಯಾರ್ಥಿನಿಗೆ ಎಂಬಿಪಾ ನೆರವು

| Published : Oct 25 2024, 12:51 AM IST

ಬಿಬಿಎಸ್ ಸೀಟು ಪಡೆದ ವಿದ್ಯಾರ್ಥಿನಿಗೆ ಎಂಬಿಪಾ ನೆರವು
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ: ನೀಟ್ ಪಾಸಾಗಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದರೂ ಶುಲ್ಕ ಭರಿಸಲಾಗದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ವಿದ್ಯಾರ್ಥಿನಿಗೆ ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಸಹಾಯಹಸ್ತ ಚಾಚಿದ್ದು, ಕೋರ್ಸ್‌ನ ಸಂಪೂರ್ಣ ವೆಚ್ಚವನ್ನು ಭರಿಸಲಿದ್ದಾರೆ.

ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಭಾಗ್ಯಶ್ರಿ ದೇವರ ಎಂಬ ವಿದ್ಯಾರ್ಥಿನಿ ನೀಟ್ ಪರೀಕ್ಷೆಯಲ್ಲಿ 49707 ರ್‍ಯಾಂಕ್ ಪಡೆದಿದ್ದು, ಚಿಕ್ಕಬಳ್ಳಾಪುರ ಇನಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ವೈದ್ಯಕೀಯ ಸೀಟು ಪಡೆದಿದ್ದಾಳೆ. ಈ ವಿದ್ಯಾರ್ಥಿನಿಗೆ ಪೋಷಕರಿಗೆ ಸಂಸ್ಥೆಯ ವತಿಯಿಂದ ಎಂಬಿಬಿಎಸ್ ಕೋರ್ಸ್‌ನ ಮೊದಲ ವರ್ಷದ ಶೈಕ್ಷಣಿಕ ಶುಲ್ಕ, ಹಾಸ್ಟೆಲ್ ಮತ್ತು ಊಟದ ಖರ್ಚಿಗೆ ಅಗತ್ಯವಾಗಿರುವ ಪ್ರಥಮ ಕಂತಿನ ಹಣ ₹1.57 ಲಕ್ಷ ಚೆಕ್‌ ಅನ್ನು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ವಿತರಿಸಿದರು.ವಿದ್ಯಾರ್ಥಿನಿಯ ತಂದೆ ಶಂಕರ ಮತ್ತು ತಾಯಿ ರಾಜೇಶ್ವರಿ ತಮ್ಮ ಮಗಳ ಪರವಾಗಿ ಚೆಕ್ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಿಪ ಸದಸ್ಯ ಸುನೀಲಗೌಡ ಪಾಟೀಲ ಇದ್ದರು.