ಎಂಸಿಸಿ ಬ್ಯಾಂಕ್‌ ಕುಲಶೇಖರ ಶಾಖೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ

| Published : Aug 19 2025, 01:00 AM IST

ಎಂಸಿಸಿ ಬ್ಯಾಂಕ್‌ ಕುಲಶೇಖರ ಶಾಖೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ
Share this Article
  • FB
  • TW
  • Linkdin
  • Email

ಸಾರಾಂಶ

ಎಂಸಿಸಿ ಬ್ಯಾಂಕಿನ ಕುಲಶೇಖರ ಶಾಖೆಯ ಹೊಸ ಕಚೇರಿಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಉದ್ಘಾಟಿಸಿದರು.

ಮಂಗಳೂರು: ಎಂಸಿಸಿ ಬ್ಯಾಂಕಿನ ಕುಲಶೇಖರ ಶಾಖೆಯನ್ನು ನಗರದ ಕಲ್ಪನೆಯಲ್ಲಿರುವ ಸ್ಪೆಕ್ಟ್ರಮ್ ಬ್ಯುಸಿನೆಸ್ ಸೆಂಟರ್‌ನ ಕೆಳ ಮಹಡಿಯಲ್ಲಿ ಹೊಸದಾಗಿ ಖರೀದಿಸಿದ ಸ್ವಂತ ನಿವೇಶನಕ್ಕೆ ಸ್ಥಳಾಂತರಿಸಲಾಯಿತು.ಹೊಸ ಕಚೇರಿಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಉದ್ಘಾಟಿಸಿದರು. ಬಿಕರ್ನಕಟ್ಟೆ ಇನ್ಫೆಂಟ್ ಜೀಸಸ್ ಶ್ರೈನ್‌ ನಿರ್ದೇಶಕ ವಂ. ಸ್ಟಿಫನ್ ಪಿರೇರಾ ದೀಪ ಬೆಳಗಿಸಿದರು. ಕೊರ್ಡೆಲ್ ಹೋಲಿ ಕ್ರಾಸ್ ಚರ್ಚ್‌ ಧರ್ಮಗುರು ವಂ.ಕ್ಲಿಫರ್ಡ್ ಫರ್ನಾಂಡಿಸ್ ಅವರು ಹೊಸ ಕಚೇರಿಯನ್ನು ಆಶೀರ್ವದಿಸಿದರು. ಸೇಫ್ ರೂಮ್‌ನ್ನು ಮುಖ್ಯ ಅತಿಥಿ, ಸಿಸ್ಟರ್ಸ್ ಆಫ್ ದಿ ಲಿಟಲ್ ಫ್ಲವರ್ ಆಫ್ ಬೆಥನಿಯ ಪ್ರೊಕ್ಯುರೇಟರ್ ಸಿ. ಫ್ಲೋಸಿ ಮಿನೆಜಸ್ ಉದ್ಘಾಟಿಸಿದರು. ಎಟಿಎಂ ಸೌಲಭ್ಯವನ್ನು ಮಂಗಳೂರಿನ ವೈಟ್ ಡೌವ್ಸ್‌ ಸ್ಥಾಪಕಿ ಕೊರಿನ್ ರಸ್ಕ್ವಿನ್ಹಾ ಉದ್ಘಾಟಿಸಿದರು. ಮೊದಲ ಎಟಿಎಂ ನಗದು ಹಿಂಪಡೆಯುವಿಕೆಯನ್ನು ಮಂಗಳೂರಿನ ಪ್ರಸಾದ್ ಪ್ರಿಂಟರ್ಸ್‌ ಮಾಲೀಕ ಪ್ರವೀಣ್ ಪತ್ರಾವೊ ನೆರವೇರಿಸಿದರು.ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ ಸರ್ಕಾರಿ ವಕೀಲ ಮತ್ತು ಎಂಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಎಂ.ಪಿ. ನೊರೊನ್ಹಾ, ಎಂಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ವ್ಯಾಲೆಂಟೈನ್ ಡಿಸಿಲ್ವಾ, ಪ್ರೊವಿಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ (ಐಡಿಯಲ್ ಚಿಕನ್) ವ್ಯವಸ್ಥಾಪಕ ನಿರ್ದೇಶಕ ವಿನ್ಸೆಂಟ್ ಕುಟಿನ್ಹಾ, ಹೋಲಿ ಕ್ರಾಸ್ ಚರ್ಚ್‌ ಕೊರ್ಡೆಲ್‌ನ ಪ್ಯಾರಿಶ್ ಕೌನ್ಸಿಲ್ ಉಪಾಧ್ಯಕ್ಷೆ ರುತ್ ಕ್ಯಾಸ್ಟೆಲಿನೊ ಅತಿಥಿಗಳಾಗಿದ್ದರು, ಮಹಾಪ್ರಬಂಧಕ ಸುನಿಲ್ ಮಿನೆಜಸ್, ಶಾಖಾ ವ್ಯವಸ್ಥಾಪಕಿ ವಿಲ್ಮಾ ಜ್ಯೋತಿ ಸಿಕ್ವೇರಾ ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ವಹಿಸಿದ್ದರು.