ಮಂಗಳೂರು ಎಂಸಿಸಿ ಬ್ಯಾಂಕ್‌ನ ನವೀಕೃತ ಕಂಕನಾಡಿ ಶಾಖೆಯನ್ನು ನಗರದ ಪಂಪ್‌ವೆಲ್ ರಸ್ತೆಯಲ್ಲಿರುವ ಎಂಪೋರಿಯಂ ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟಿಸಲಾಯಿತು.

ಮಂಗಳೂರು: ಮಂಗಳೂರು ಎಂಸಿಸಿ ಬ್ಯಾಂಕ್‌ನ ನವೀಕೃತ ಕಂಕನಾಡಿ ಶಾಖೆಯನ್ನು ನಗರದ ಪಂಪ್‌ವೆಲ್ ರಸ್ತೆಯಲ್ಲಿರುವ ಎಂಪೋರಿಯಂ ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟಿಸಲಾಯಿತು. ನವೀಕರಿಸಿದ ಶಾಖೆಯನ್ನು ಹೆಸರಾಂತ ಅನಿವಾಸಿ ಭಾರತೀಯ ಉದ್ಯಮಿ, ಉದಾರ ದಾನಿ ಮತ್ತು ವಿಷನ್ ಕೊಂಕಣಿಯ ಪ್ರವರ್ತಕ ಮೈಕಲ್ ಡಿ ಸೋಜಾ ಉದ್ಘಾಟಿಸಿದರು. ಕಂಕನಾಡಿ ಫಾದರ್ ಮುಲ್ಲರ್ಸ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ರೆ.ಫಾ. ಫೌಸ್ಟಿನ್ ಲೋಬೊ ಆಶೀರ್ವದಿಸಿದರು.ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ, ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಜೆಪ್ಪುವಿನ ಸೇಂಟ್ ಆಂಟನಿ ಆಶ್ರಮದ ನಿರ್ದೇಶಕ ರೆ.ಫಾ. ಜೆ. ಬಿ. ಕ್ರಾಸ್ತಾ, ಬೆಂದೂರಿನ ಸೇವಾನಿಲಯ ಕಾನ್ವೆಂಟ್‌ನ ಸುಪೀರಿಯರ್‌ನ ಸಿಸ್ಟರ್ ಸಿಂಥಿಯಾ ಡಿಸೋಜಾ ಮತ್ತು ಕೊಂಕಣಿ ಸಾಂಸ್ಕೃತಿಕ ಸಂಸ್ಥೆ (ಕೆಸಿಒ) ಅಧ್ಯಕ್ಷ ಲಿಯೋ ರೋಡ್ರಿಗಸ್ ಮುಖ್ಯ ಅತಿಥಿಗಳಾಗಿದ್ದರು.ಅಧ್ಯಕ್ಷ ಅನಿಲ್ ಲೋಬೊ ಅವರು ಪ್ರಾಸ್ತಾವಿಕದಲ್ಲಿ, ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಆಧುನೀಕರಣ ಮತ್ತು ಹೊಸ

ಆಲೋಚನೆಗಳನ್ನು ನಿರೀಕ್ಷಿಸುತ್ತಾರೆ. ನಮ್ಮ ಬ್ಯಾಂಕ್ ಅದನ್ನು ಹೇಗೆ ಸಾಧಿಸುವುದು ಎಂಬುದರ ಸ್ಪಷ್ಟ ಷ್ಟಿಕೋನದೊಂದಿಗೆ ಡಿಜಿಟಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಎಲ್ಲ ೧೬ ಶಾಖೆಗಳನ್ನು ನವೀಕರಿಸಿದೆ. ಗ್ರಾಹಕರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ. ಕಂಕನಾಡಿ ಶಾಖೆಯು ೫೪ ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಗ್ರಾಹಕರು ತಮ್ಮ ವಹಿವಾಟುಗಳನ್ನು ಸಂತೋಷದಾಯಕವಾಗಿ ನಡೆಸಲು ಅನುಕೂಲವಾಗುವಂತೆ ಶಾಖೆಯನ್ನು ನವೀಕರಿಸಲಾಗಿದೆ ಎಂದರು.

ಪ್ರಸ್ತುತ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡಾಗ ಕೇವಲ ೧೬ ಶಾಖೆಗಳಿವೆ. ಕಳೆದ ೭ ವರ್ಷಗಳಲ್ಲಿ, ೨೨ ವರ್ಷಗಳ ನಂತರ ಐದು ಹೊಸ ಶಾಖೆಗಳನ್ನು ತೆರೆಯಲಾಗಿದೆ. ಆರ್‌ಬಿಐ ಹೆಚ್ಚುವರಿ ಶಾಖೆಗಳನ್ನು ತೆರೆಯಲು ಅನುಮತಿ ನೀಡಿದ್ದು, ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿ ಉತ್ತಮವಾಗಿ ನಿರ್ವಹಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ. ಪ್ರಸ್ತುತ ಆಡಳಿತ ಮಂಡಳಿ ೨೦೧೮ ರಲ್ಲಿ ಬ್ಯಾಂಕಿನ ಜವಾಬ್ದಾರಿಯನ್ನು ವಹಿಸಿಕೊಂಡಾಗಿನಿಂದ ಬ್ಯಾಂಕ್ ಎಲ್ಲ ಹಣಕಾಸು

ನಿಯತಾಂಕಗಳನ್ನು ಪೂರೈಸಿದ್ದುದೆ. ಪ್ರಸಕ್ತ ಒಟ್ಟು ೨೧ ಶಾಖೆಗಳು ಮತ್ತು ೧೫ ಎಟಿಎಂಗಳನ್ನು ಹೊಂದಿದೆ. ಮುಂದಿನ ಹಣಕಾಸು ವರ್ಷದಲ್ಲಿ ದೇರಳಕಟ್ಟೆ, ಕಟಪಾಡಿ, ಪಡೀಲ್ ಮತ್ತು ಮುಡಿಪು ಅಥವಾ ವಾಮಂಜೂರಿನಲ್ಲಿ ಇನ್ನೂ ನಾಲ್ಕು ಶಾಖೆಗಳನ್ನು ತೆರೆಯಲು ಯೋಜನೆಯನ್ನು ಹಮ್ಮಿಕೊಂಡಿದೆ. ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ರಾಷ್ಟ್ರ್ರದಾದ್ಯಂತ ಬ್ಯಾಂಕ್ ಬೆಳೆಯಲು ಅನುವು ಮಾಡಿಕೊಡಲು ಗ್ರಾಹಕರ ಬೆಂಬಲ ಮತ್ತು ಆಶೀರ್ವಾದವನ್ನು ಕೋರಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಂಗಳೂರಿನ ದಿ ವೈಟ್ ಡವ್ಸ್ ಸೈಕಿಯಾಟ್ರಿಕ್ ನರ್ಸಿಂಗ್‌, ಡೆಸ್ಟಿಟ್ಯೂಟ್ ಹೋಂನ ಸಂಸ್ಥಾಪಕಿ ಕೊರಿನ್ ರಸ್ಕ್ವಿನ್ಹಾ ಅವರನ್ನು ಶಾಲು, ಹಣ್ಣು ಹಂಪಲು, ಸ್ಮರಣಿಕೆ, ಸನ್ಮಾನ ಪತ್ರದೊಂದಿಗೆ ಸನ್ಮಾನಿಸಲಾಯಿತು. ಡಿಸೆಂಬರ್ ೧೧ ರಂದು ಚಂಡೀಗಢದಲ್ಲಿ ನಡೆಯುವ ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ ೨೦ ಪಂದ್ಯದಲ್ಲಿ ಎಸ್‌ಬಿಐ ಲೈಫ್ ಪರವಾಗಿ ಕ್ರಿಕೆಟ್ ತಾರೆಯೊಬ್ಬರಿಗೆ ಪಂದ್ಯ ಶೇಷ್ಟ ಪ್ರಶಸ್ತಿಯನ್ನು ಪ್ರದಾನ ಮಾಡಲು ಆಯ್ಕೆಯಾಗಿದ್ದಕ್ಕಾಗಿ ಶ್ರೀ ಐವಾನ್ ಫ್ರಾಂಕ್ ಅವರನ್ನು ಗೌರವಿಸಲಾಯಿತು.

ಇತ್ತೀಚೆಗೆ ಬಿಡುಗಡೆಯಾದ ಕೊಂಕಣಿ ಚಲನಚಿತ್ರ ಬಾಪಾಚೆ ಪುತಾಚೆ ನಾವಿ ದಲ್ಲಿ ನಟಿಸಿರುವ ಮೆಲ್ವಿನ್ ಡಿ ಅಲ್ಮೇಡಾ ಅವರನ್ನು ಸನ್ಮಾನಿಸಲಾಯಿತು.