ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಎಂಸಿಇ ಪ್ರಾಧ್ಯಾಪಕರು

| Published : Sep 23 2025, 01:03 AM IST

ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಎಂಸಿಇ ಪ್ರಾಧ್ಯಾಪಕರು
Share this Article
  • FB
  • TW
  • Linkdin
  • Email

ಸಾರಾಂಶ

ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಸಂಶೋಧನೆ ವಿಷಯಗಳಿಗೆ ಸಂಬಂಧಿಸಿದ ಡೀನ್ ಡಾ. ಮಧು ಪಿ ಹಾಗೂ ಅಸೋಸಿಯೇಟ್ ಡೀನ್ ಡಾ. ಯಶಸ್ ಗೌಡ ಟಿ ಜಿ ಅವರು ನೆದರ್‌ಲ್ಯಾಂಡ್ ಮೂಲದ ಪ್ರಕಾಶನ ಸಂಸ್ಥೆ ಎಲ್ಸ್‌ವಿಯರ್ ಹೊರತರುವ ಅತಿ ಹೆಚ್ಚು ಉಲ್ಲೇಖಿಸಲ್ಪಟ್ಟ ವಿಶ್ವದ ಅಗ್ರ ೨ ಪ್ರತಿಶತ ವಿಜ್ಞಾನಿಗಳ ಪಟ್ಟಿಯ ಮೆಟೀರಿಯಲ್ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ. ಕಾಂಪೋಸಿಟ್ಸ್ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವ ಡಾ. ಮಧು ಪಿ ಅವರ ೧೧೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಅಂತಾರಾಷ್ಟ್ರೀಯ ಮನ್ನಣೆ ಪಡೆದ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಪಾದಕರಾಗಿ ತಮ್ಮ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ೪ ಪುಸ್ತಕಗಳನ್ನು ರೂಪಿಸಿದ್ದಾರೆ. ಈ ಪಟ್ಟಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಸ್ಥಾನ ಪಡೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಸಂಶೋಧನೆ ವಿಷಯಗಳಿಗೆ ಸಂಬಂಧಿಸಿದ ಡೀನ್ ಡಾ. ಮಧು ಪಿ ಹಾಗೂ ಅಸೋಸಿಯೇಟ್ ಡೀನ್ ಡಾ. ಯಶಸ್ ಗೌಡ ಟಿ ಜಿ ಅವರು ನೆದರ್‌ಲ್ಯಾಂಡ್ ಮೂಲದ ಪ್ರಕಾಶನ ಸಂಸ್ಥೆ ಎಲ್ಸ್‌ವಿಯರ್ ಹೊರತರುವ ಅತಿ ಹೆಚ್ಚು ಉಲ್ಲೇಖಿಸಲ್ಪಟ್ಟ ವಿಶ್ವದ ಅಗ್ರ ೨ ಪ್ರತಿಶತ ವಿಜ್ಞಾನಿಗಳ ಪಟ್ಟಿಯ ಮೆಟೀರಿಯಲ್ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ.

ಕಾಂಪೋಸಿಟ್ಸ್ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವ ಡಾ. ಮಧು ಪಿ ಅವರ ೧೧೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಅಂತಾರಾಷ್ಟ್ರೀಯ ಮನ್ನಣೆ ಪಡೆದ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಪಾದಕರಾಗಿ ತಮ್ಮ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ೪ ಪುಸ್ತಕಗಳನ್ನು ರೂಪಿಸಿದ್ದಾರೆ. ಈ ಪಟ್ಟಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಸ್ಥಾನ ಪಡೆಯುತ್ತಿದ್ದಾರೆ. ಥೈಲ್ಯಾಂಡ್‌ನ ಕಿಂಗ್ ಮಾಂಗ್‌ಕುಟ್ಸ್ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿರುವ ಡಾ. ಯಶಸ್ ಗೌಡ ಟಿ ಜಿ ಅವರು, ಪಾಲಿಮರ್ ಕಾಂಪೋಸಿಟ್ಸ್ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಇವರ ೩೫ ಸಂಶೋಧನಾ ಪ್ರಬಂಧಗಳು ಅಂತಾರಾಷ್ಟ್ರೀಯ ಮನ್ನಣೆ ಪಡೆದ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಪಾದಕರಾಗಿ ತಮ್ಮ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ೨ ಪುಸ್ತಕಗಳನ್ನು ರೂಪಿಸಿದ್ದಾರೆ. ಈ ಪಟ್ಟಿಯಲ್ಲಿ ಕಳೆದ ಮೂರು ವರ್ಷಗಳಿಂದ ಸತತವಾಗಿ ಸ್ಥಾನ ಪಡೆಯುತ್ತಿದ್ದಾರೆ.