ಸಾರಾಂಶ
ಧರ್ಮದಿಂದ ಅರ್ಥ ಪ್ರಾಪ್ತಿಯಾಗುತ್ತದೆ, ಅಧರ್ಮ ಅವನತಿಯ ದಾರಿ ಹಿಡಿಯುತ್ತಿದೆ ಎಂದು ದಾವಣಗೆರೆ ಜಡೆಸಿದ್ದ ಮಠದ ಶಿವಾನಂದ ಮಹಾಸ್ವಾಮೀಜಿ ನುಡಿದಿದ್ದಾರೆ.
- ಯಲವಟ್ಟಿ ಗುರುಸಿದ್ದಾಶ್ರಮದಲ್ಲಿ ಶಿವಾನಂದ ಶ್ರೀ, ನಿತ್ಯಾನಂದ ಶ್ರೀ ಪುಣ್ಯಾರಾಧನೆ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು ಧರ್ಮದಿಂದ ಅರ್ಥ ಪ್ರಾಪ್ತಿಯಾಗುತ್ತದೆ, ಅಧರ್ಮ ಅವನತಿಯ ದಾರಿ ಹಿಡಿಯುತ್ತಿದೆ ಎಂದು ದಾವಣಗೆರೆ ಜಡೆಸಿದ್ದ ಮಠದ ಶಿವಾನಂದ ಮಹಾಸ್ವಾಮೀಜಿ ನುಡಿದರು.
ಇಲ್ಲಿಗೆ ಸಮೀಪದ ಯಲವಟ್ಟಿ ಗುರುಸಿದ್ದಾಶ್ರಮದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಶಿವಾನಂದ ಸ್ವಾಮೀಜಿ ಹಾಗೂ ನಿತ್ಯಾನಂದ ಸ್ವಾಮೀಜಿ ಪುಣ್ಯಾರಾಧನೆಯ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಕೆಳಗೆ ಬಿದ್ದವರನ್ನು ಮೇಲೆತ್ತುವುದೇ ನಿಜವಾದ ಧರ್ಮವಾಗಿದೆ ಎಂದರು.ಹದಡಿ ಚಂದ್ರಗಿರಿ ಮಠದ ಮುರಳೀಧರ ಸ್ವಾಮೀಜಿ ಸಂದೇಶ ನೀಡಿ, ಧರ್ಮದಲ್ಲಿ ದಯೆ ಇರದಿದ್ದರೆ ಅದು ಧರ್ಮ ಎನಿಸಲ್ಲ. ಈ ನಾಡಿನಲ್ಲಿ ಸಿದ್ಧಾರೂಢರು ಅರಿವಿನ ದೀಪ ಹಚ್ಚಿದ್ದಾರೆ, ಧರ್ಮದಿಂದ ನಡೆದಲ್ಲಿ ಎಲ್ಲವೂ ಲಭ್ಯವಾಗುತ್ತೆ ಎಂದು ಹೇಳಿದರು.
ಚಿತ್ರದುರ್ಗ ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಸಂದೇಶದಲ್ಲಿ ಹಿರಿಯರ ತಪಸ್ಸಿನ ಫಲವಾಗಿ ಪ್ರಸ್ತುತ ಭಕ್ತ, ಉಪಾಸನೆಗಳು ನಡೆಯುತ್ತಿವೆ. ಆ ಕಾರಣಕ್ಕಾಗಿಯೇ ವಿದೇಶಗಳಲ್ಲೂ ಸಿದ್ಧಾರೂಢ ಮಠಗಳು ಸ್ಥಾಪನೆಯಾಗಿವೆ ಎಂದರು.ವಾಣಿಜ್ಯ ತೆರಿಗೆ ಅಧಿಕಾರಿ ಮಂಜುನಾಥ್, ಧರ್ಮವು ಸತ್ಯ ಮತ್ತು ನ್ಯಾಯದ ಮೇಲೆ ನಿಂತಿದೆ, ಇವೆರಡೂ ಸಮಾನಾಂತರ ಪದಗಳಾಗಿವೆ. ಶರಣರ ಬಸವಣ್ಣ, ಗೌತಮ ಬುದ್ಧರ ಕಾಲದಲ್ಲಿ ನ್ಯಾಯ ಹಾಗೂ ನೀತಿ ಚಾಲ್ತಿಯಲ್ಲಿದ್ದವು. ದೇಶದಲ್ಲಿ ಆಚಾರ ವಿಚಾರಗಳನ್ನು ಭಗವಂತನಲ್ಲಿ ಕಂಡಾಗ ಪೊಲೀಸ್ ಮತ್ತು ನ್ಯಾಯಾಲಯಗಳು ಬೇಕಾಗಿಲ್ಲ ಎಂದರು.
ಮುಖಂಡ ಚಂದ್ರಶೇಖರ್ ಪೂಜಾರ್, ಸ್ವಾಭಿಮಾನಿ ಬಳಗದ ವಿನಯ್‌ಕುಮಾರ್, ಭಾಜಪ ಮುಖಂಡ ವೀರೇಶ್ ಮಾತನಾಡಿದರು. ಗುರು ಸಿದ್ದಾಶ್ರಮದ ಯೋಗಾನಂದ ಗುರುಗಳು, ಕೃಷ್ಣಾನಂದ ಭಾರತಿ ಗುರುಗಳು ಸಾನ್ನಿಧ್ಯ ವಹಿಸಿದ್ದರು. ಹುಬ್ಬಳ್ಳಿ ಸಿದ್ದಾರೂಢ ಮಠದ ಧರ್ಮದರ್ಶಿ ಸಿದ್ಧನಗೌಡ, ಎಚ್.ವೀರನಗೌಡ, ಬಿ.ಪ್ರಭು, ರಾಜಪ್ಪ, ಗೌಡರ ಬಸವರಾಜಪ್ಪ, ವಕೀಲ ತಿಮ್ಮನಗೌಡ, ಯೋಮಕೇಶ್ವರಪ್ಪ, ರಾಮಾನಾಯ್ಕ, ಜಿ ಆನಂದಪ್ಪ, ಎನ್.ಎಲ್. ಪ್ರಕಾಶ್, ಪ್ರವಚನಕಾರ ಸಿದ್ದೇಶ್, ಯೋಧ ಶಿವಕುಮಾರ್, 8 ಗ್ರಾಮಗಳ ಶರಣರು ಭಕ್ತರು ಇದ್ದರು.- - - -ಚಿತ್ರ೧೮ಎಂಬಿಆರ್೧: