ರಾಣಿಬೆನ್ನೂರು ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಗುರುವಾರದಂದು ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಲಿಂ ಪಂ.ವೇದತೀರ್ಥ ವಿರುಪಾಕ್ಷ ಒಡೆಯರವರ ಸ್ಮರಣೋತ್ಸವ ಹಾಗೂ ಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮವು ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಒಡೆಯರ ಚಿತ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಅರ್ಥಪೂರ್ಣವಾಗಿ ಜರುಗಿತು.

ರಾಣಿಬೆನ್ನೂರು: ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಗುರುವಾರದಂದು ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಲಿಂ ಪಂ.ವೇದತೀರ್ಥ ವಿರುಪಾಕ್ಷ ಒಡೆಯರವರ ಸ್ಮರಣೋತ್ಸವ ಹಾಗೂ ಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮವು ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಒಡೆಯರ ಚಿತ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಅರ್ಥಪೂರ್ಣವಾಗಿ ಜರುಗಿತು.ಶರಣ ಚೌಡಯ್ಯನವರ ಹಾಗೂ ವಿರುಪಾಕ್ಷ ಒಡೆಯರವರ ಭಾವಚಿತ್ರದ ಮೆರವಣಿಗೆ ಹಾಗೂ ಕುಂಭ ಮೇಳವು ಗ್ರಾಮದ ಒಡೆಯರ ಮಠದಿಂದ ಪ್ರಾರಂಭವಾಗಿ ತುಂಗಭದ್ರ ನದಿ ತೀರಕ್ಕೆ ತಲುಪಿತು. ನಂತರ ಚೌಡಯ್ಯನವರ ಐಕ್ಯಮಂಟಪಕ್ಕೆ ಕುಂಬಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮೆರವಣಿಗೆಯಲ್ಲಿ ಬಸವೇಶ್ವರ ಭಜನಾ ಸಂಘದವರು, ಜಾಂಜ್ ಮೇಳ, ನಂದಿಕೋಲು ಕುಣಿತ, ಸಮ್ಮಾಳ ಸೇರಿದಂತೆ ಸಕಲ ವಾದ್ಯ ವೃಂದ ಮೇಳದವರು ಭಾಗವಹಿಸಿದ್ದರು. ಜಯಂತ್ಯುತ್ಸವ ಹಾಗೂ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯ ತೋಟನಹಳ್ಳಿಯ ಮಹಾಂತೇಶ್ವರ ಹಿರೇಮಠದ ಡಾ. ತ್ರಿಮೂರ್ತಿ ಶಿವಾಚಾರ್ಯರು, ತೆಂಗಳಿಯ ಶಾಂತೇಶ್ವರ ಹಿರೇಮಠದ ಡಾ. ಶಾಂತ ಸೋಮನಾಥ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಗ್ರಾಮಸ್ಥರು ಭಕ್ತರು ಇದ್ದರು.