ತಾಲೂಕಿನ ಮಾತೋಳಿ ಗ್ರಾಮದ ಎಡದಂಡೆ ಕಾಲುವೆಯಲ್ಲಿ ಸುಮಾರು ದಶಕಗಳಿಂದ ನೀರು ಹರಿಸದೆ ಹಾಳು ಬಿದ್ದಿರುವುದು ಆದಷ್ಟು ಬೇಗ ಬಗೆಹರಿಸಿ ಕಾಲುವೆಗೆ ನೀರು ಹರಿಸಲಾಗುವುದು ಎಂದು ನೀರಾವರಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ವಿನಾಯಕ ಸುಗೂರು ಹೇಳಿದರು.
-ನೀರಾವರಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ವಿನಾಯಕ ಸುಗೂರು ಭರವಸೆ
--ಕನ್ನಡಪ್ರಭ ವಾರ್ತೆ ಅಫಜಲಪುರ
ತಾಲೂಕಿನ ಮಾತೋಳಿ ಗ್ರಾಮದ ಎಡದಂಡೆ ಕಾಲುವೆಯಲ್ಲಿ ಸುಮಾರು ದಶಕಗಳಿಂದ ನೀರು ಹರಿಸದೆ ಹಾಳು ಬಿದ್ದಿರುವುದು ಆದಷ್ಟು ಬೇಗ ಬಗೆಹರಿಸಿ ಕಾಲುವೆಗೆ ನೀರು ಹರಿಸಲಾಗುವುದು ಎಂದು ನೀರಾವರಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ವಿನಾಯಕ ಸುಗೂರು ಹೇಳಿದರು.ಅವರು ತಾಲೂಕಿನ ಮಾತೋಳಿ ಗ್ರಾಮದ ಎಡದಂಡೆಯ ಕಾಲುವೆಗೆ ನೀರು ಹರಿಸಲು ಅಫಜಲಪುರ ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಕಾಲುವೆಗಳನ್ನು ಪರಿಶೀಲನೆ ಮಾಡಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು.
ಕಾಲುವೆಗಳು ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿ, ಮುಂದೆ ಈ ರೀತಿ ಕಾಮಗಾರಿ ಆದರೆ ಸಂಬಂಧ ಪಟ್ಟ ಅಧಿಕಾರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ರೈತರ ಹೊಲಗಳಿಗೆ ನೀರು ಹರಿಸಲು ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರಾದ ಶಿವಕುಮಾರ ಸ್ವಾಮಿ,ಸಹಾಯಕ ಅಭಿಯಂತರ, ಸಂತೋಷ ಸಜ್ಜನ, ಸುಧೀರ ಸಂಗಾಣಿ, ಸಂತೋಷ ಪಾಟೀಲ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಶ್ರೀಮಂತ ಬಿರಾದಾರ, ಸಿದ್ದು ದೇವರನಾವದಗಿ, ಅಬ್ಬಾಸಲಿ ನದಾಫ್, ನಾಮದೇವ ಕಡಕೋಳ, ಅಶೋಕ ಬಗಲಿ, ಶಿವು ಪದಕಿ, ರಾಜಶೇಖರ ಪಾಟೀಲ ಖಾಸಿಂಸಾಬ, ರವಿ ಹಾಜರಿದ್ದರು