ಕನ್ನಡಪ್ರಭ ವಾರ್ತೆ ವಿಜಯಪುರ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಕ್ಕೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ 53ನೇ ದಿನಕ್ಕೆ ತಲುಪಿದ್ದು, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಕ್ಕೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ 53ನೇ ದಿನಕ್ಕೆ ತಲುಪಿದ್ದು, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಹೋರಾಟಕ್ಕೆ ಬೆಂಬಲ ಸೂಚಿಸಿದರು.ಈ ವೇಳೆ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ್ ನಾಗೇಂದ್ರ ಮಾತನಾಡಿ, ಉದ್ದೇಶ ಒಳ್ಳೆದಿದೆ, ಜನರ ಹಿತವಿದೆ, ಅದಕ್ಕೆ ಜನ ಹೋರಾಟವನ್ನು ಪ್ರಾರಂಭ ಮಾಡಿದ್ದೀರಾ. ಬಸವಣ್ಣ ಹುಟ್ಟಿದ ನಾಡಿದು. ಇವತ್ತಿನ ಶಿಕ್ಷಣ ಹಾಗೂ ಆರೋಗ್ಯ ಸರ್ಕಾರದ ಕೈಯಲ್ಲಿ ಇರಬೇಕು. ಖಾಸಗಿ ಅವರ ಕೈಯಲ್ಲಿ ಹೋಗಿ ಇವತ್ತಿನ ಶಿಕ್ಷಣ ಹದಗೆಟ್ಟಿದೆ. ಆರೋಗ್ಯ ಕ್ಷೇತ್ರ ಕೂಡ ಹದಗೆಟ್ಟಿದೆ. ಹಿಂತಾ ಒಂದು ದೊಡ್ಡ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶ ಇದೆ. ಸರ್ಕಾರಿ ಆಸ್ಪತ್ರೆ ಮಂಜೂರು ಆದ ಜಿಲ್ಲೆಯಲ್ಲಿ ಕೂಡ ಜಾಗ ಇಲ್ಲದೇ ನೆನಗುದಿಗೆ ಬಿದ್ದಿದೆ. ಇಲ್ಲಿ 153 ಎಕರೆ ಜಾಗವಿದೆ. ಆಸ್ಪತ್ರೆಯಿದೆ. ಇನ್ನೂ ವಿಸ್ತರಣೆ ಮಾಡಿ ಸಂಪೂರ್ಣ ಸರ್ಕಾರಿ ಆಸ್ಪತ್ರೆ ಮಾಡಬೇಕು. ಇಲ್ಲಿ ಪಿಪಿಪಿ ಮಾದರಿ ಮಾಡ್ತೀವಿ ಅಂದ್ರೆ ಇಲ್ಲಿಯ ರಾಜಕಾರಣಿಗಳ ಹಿತಾಸಕ್ತಿ ಇದ್ದೆ ಇರುತ್ತೆ. ಬಂಡವಾಳಶಾಹಿಗಳು ರಾಜಕಾರಣಿಗಳಲ್ಲಿ ಇರುತ್ತಾರೆ. ಅವರು ಖಾಸಗಿಗೆ ಪ್ರೋತ್ಸಾಹ ಕೊಡ್ತಾರೆ. ಆದರೆ, ದಿಟ್ಟತನದಿಂದ ಹೋರಾಟ ಸರಿ ಇದೆ. ಎಲ್ಲ ಕ್ಷೇತ್ರದಲ್ಲಿ ಖಾಸಗೀಕರಣ ಮಾಡಲಾಗುತ್ತಿದೆ. ಎಲ್ಲವೂ ಖಾಸಗೀಕರಣ ಆದರೆ ನಮಗೆ ಸಾರ್ವಭೌಮತ್ವದ ಪ್ರಜಾಪ್ರಭುತ್ವದ ಸರ್ಕಾರ ಯಾಕೆ ಬೇಕು. ವಿಧಾನಸೌಧವೂ ಕೂಡ ಖಾಸಗೀಕರಣ ಮಾಡಬಿಡಿ. ಇದು ರಾಜ್ಯಕ್ಕೆ ಅಪಾಯ. ವಿಜಯಪುರದಲ್ಲಿ ಈ ಹೋರಾಟ ಮುಂದುವರಿದಿದೆ. ಇದಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಸಂಪೂರ್ಣ ಬೆಂಬಲವನ್ನು ಸೂಚಿಸಿದೆ. ಎರಡು ದಿನಗಳಲ್ಲಿ ರೈತ ಸಂಘದಿಂದ ಮುಖ್ಯಮಂತ್ರಿ ಭೇಟಿ ಮಾಡಿ ಸರ್ಕಾರಿ ಕಾಲೇಜಿನ ಅವಶ್ಯಕತೆ ಹಾಗೂ ಅನುಕೂಲತೆ ಬಗ್ಗೆ ಪತ್ರ ಬರೆಯುವುದಾಗಿ ತಿಳಿಸಿದರು.ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಮಂಜುಳಾ ಅಕ್ಕಿ ಮಾತನಾಡಿ, ಹದಿಮೂರು ತಾಲೂಕಿನ ಜಿಲ್ಲೆಯಾದ ವಿಜಯಪುರದಲ್ಲಿ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲ ಅಂದ್ರೆ ಜಿಲ್ಲಾ ಉಸ್ತುವಾರಿಗಳು, ಸಚಿವರು, ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿಗಳು ಏನು ಮಾಡುತ್ತಿದ್ದಾರೆ. ಶಿಕ್ಷಣ. ಹೋರಾಟಕ್ಕೆ ಹೆಸರು ವಾಸಿಯಾದ ವಿಜಯಪುರ ಜಿಲ್ಲೆ ಇಡೀ ದೇಶಕ್ಕೆ ಮಾದರಿಯಾಗಿದೆ. ಜಿಲ್ಲಾಧಿಕಾರಿ ಆಗಿರಬಹುದು, ರಾಜ್ಯ ಸರ್ಕಾರ ಆಗಿರಬಹುದು, ಜಿಲ್ಲೆಯ ಉಸ್ತುವಾರಿಗಳಾಗಿರಬಹುದು, ಜಿಲ್ಲೆಯ ಶಾಸಕರಾಗಿರಬಹುದು, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಎಲ್ಲರೂ ಎಚ್ಚೆತ್ತುಗೊಂಡು ಈ ವೇದಿಕೆಯನ್ನು ಅರ್ಥ ಮಾಡಿಕೊಂಡು ತಕ್ಷಣ ವಿಧಾನಸಭೆಯಲ್ಲಿ ಚರ್ಚೆ ಮಾಡಿದರೆ ಒಳ್ಳೇಯರು. ಇಲ್ಲದಿದ್ದರೆ 30 ಜಿಲ್ಲೆಗಳಿಂದ ರೈತ ಸಂಘದ ಮುಖಂಡರು ಇಲ್ಲಿ ಬಂದು ದಿಟ್ಟ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆಯನ್ನು ನೀಡಿದರು.ಹಿರಿಯ ರೈತ ಮುಖಂಡರಾದ ಪಂಚಪ್ಪ ಕಲ್ಬುರ್ಗಿ, ರೈತ ಸಂಘದ ಸದಸ್ಯರಾದ ಶಿವನಗೌಡ ಪಾಟೀಲ್, ಶಿವನಂದ್ ಕೊಂಡಗುಲಿ, ರಾಜೇಂದ್ರ, ಭೀಮರಾಯ ಪೂಜಾರಿ, ರವಿಕುಮಾರ್, ಗಂಗಪ್ಪ ಮೈತ್ರಿ, ಬಸನಗೌಡ, ಶಬ್ಬೀರ್ ಪಟೇಲ್ ಬಿರಾದಾರ್, ಮಹದೇವಪ್ಪ ತೇಲಿ, ಬಸವರಾಜ್ ರೆಡ್ಡಿ, ಜಯಸಿಂಗ್ ರಜಪೂತ್, ರಾಜೇಸಾಬ್ ನದಾಫ್, ಅಮ್ಮೋಗಿ ಉಕ್ಕಲಿ, ಡಿ.ಎಂ.ನದಾಫ್, ಲಾಯಪ್ಪ ಇಂಗಳೇ, ಪ್ರಭುಲಿಂಗ ಕಾರಜೋಳ, ಸಂತೋಷ್ ಚವ್ಹಾಣ್, ಹನುಮಂತ ಹಾಗೂ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.