ವೈದ್ಯೋ ನಾರಾಯಣೋ ಹರಿ ಎಂಬ ಶ್ಲೋಕದಂತೆ ವೈದ್ಯರು ದೇವರ ಸಮಾನ. ಈ ಎಲ್ಲ ಸಂಘ- ಸಂಸ್ಥೆಗಳ ವೈದ್ಯರು ಶ್ರೀಮಠಕ್ಕೆ ಬಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ.
ಹುಬ್ಬಳ್ಳಿ:
ಸದ್ಗುರು ಶ್ರೀಸಿದ್ಧಾರೂಢರ ಮಠದಲ್ಲಿ ಅನ್ನದಾಸೋಹ, ಜ್ಞಾನದಾಸೋಹದ ಜತೆಗೆ ವೈದ್ಯಕೀಯ ದಾಸೋಹ ನಡೆಸುತ್ತಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ, ಶ್ರೀಮಠದ ಭಕ್ತರ ಮೇಲ್ಮನೆ ಸಭಾ ಅಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.ಭಾನುವಾರ ಶ್ರೀಮಠದ ಆವರಣದಲ್ಲಿ ಶ್ರೀಸಿದ್ಧಾರೂಢ ಸ್ವಾಮಿಯವರ ಟ್ರಸ್ಟ್ ಕಮಿಟಿ, ಕಿಮ್ಸ್ ಹಾಸ್ಪಿಟಲ್, ಬಾಲಾಜಿ ಹಾಸ್ಪಿಟಲ್, ಬೆಂಗಳೂರಿನ ಸಾಯಿ ಮಂದಿರ ಟ್ರಸ್ಟ್ ಕಮಿಟಿ , ತುಮಕೂರಿನ ಸದ್ಗುರು ಸೇವಾ ಸಂಘ ಹಾಗೂ ಗದಗಿನ ಕೆ.ಎಚ್. ಪಾಟೀಲ ಮೆಡಿಕಲ್ ಇನ್‌ಸ್ಟಿಟ್ಯೂಟ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮಠದ ಚೇರ್‌ಮನ್ ಬಾಳು ಮಗಜಿಕೊಂಡಿ, “ವೈದ್ಯೋ ನಾರಾಯಣೋ ಹರಿ” ಎಂಬ ಶ್ಲೋಕದಂತೆ ವೈದ್ಯರು ದೇವರ ಸಮಾನ. ಈ ಎಲ್ಲ ಸಂಘ- ಸಂಸ್ಥೆಗಳ ವೈದ್ಯರು ಶ್ರೀಮಠಕ್ಕೆ ಬಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.ಶ್ರೀಮಠದ ಟ್ರಸ್ಟ್ ಉಪಾಧ್ಯಕ್ಷೆ ಗೀತಾ ಕಲಬುರ್ಗಿ ನಿರೂಪಿಸಿದರು. ಡಾ. ರಘುನಾಥ ಸಿ.ಎನ್, ಡಾ. ಮೋಹನ ರಾಮ, ಡಾ. ಕ್ರಾಂತಿಕಿರಣ, ಡಾ. ಶಿಲ್ಪಾ ಚಾಟ್ನಿ, ಡಾ. ಮಿಲಿಂದ ಶೆಟ್ಟಿ, ಡಾ. ಶಿಲ್ಪಾ ಸೇರಿದಂತೆ 20 ವೈದ್ಯರನ್ನೊಳಗೊಂಡ ತಂಡದಿಂದ 920ಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಯಿತು.
ಧರ್ಮದರ್ಶಿಗಳಾದ ಡಾ. ಗೋವಿಂದ ಮಣ್ಣೂರ, ಬಸವರಾಜ ಕಲ್ಯಾಣಶೆಟ್ಟರ ಮತ್ತು ಶ್ರೀಮಠದ ಸಿಬ್ಬಂದಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.