ಸಾರಾಂಶ
ದುಪಯೋಗ ಪಡೆದುಕೊಂಡು ತಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು
ಹರಪನಹಳ್ಳಿ: ಪಟ್ಟಣದ ಜೋಯಿಸಕೇರಿಯ ಹೊಸಪೇಟೆ ರಸ್ತೆ, ಸುವರ್ಣ ಬ್ಯಾಂಕ್ ಕಟ್ಟಡದಲ್ಲಿ ನೂತನವಾಗಿ ಆರಂಭವಾಗಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಬುಧವಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶ್ರೀಗಳು, ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಜನೌಷಧಿ ಕೇಂದ್ರದಲ್ಲಿ ಬಡವರಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧಿಗಳು ದೊರೆಯುತ್ತವೆ ಎಂದು ಹೇಳಿದರು.ಪಟ್ಟಣದಲ್ಲಿ ಇಂತಹ ಜನೌಷಧಿ ಕೇಂದ್ರಗಳು ಅಗತ್ಯವಾಗಿದ್ದು, ತಾಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಂಡು ತಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಬಳ್ಳಾರಿ ಮಾಜಿ ಸಂಸದ ವೈ. ದೇವೇಂದ್ರಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ. ನಮೋಶಿ ಆಗಮಿಸಿ ಶುಭ ಹಾರೈಸಿದರು.ಜನೌಷಧಿ ಕೇಂದ್ರದ ಮುಖ್ಯಸ್ಥರಾದ ಶಿಲ್ಪಾ ವಾಗೀಶ್ ಎಚ್., ಅಶ್ವಿನಿ ನವೀನ್‌ಕುಮಾರ, ವೈದ್ಯರಾದ ಎನ್. ಶಂಕರ ನಾಯ್ಕ, ಬಿ.ಆರ್. ರಾಜೇಶ್, ಅನಂತ ಶೆಟ್ಟಿ ಪೆಂಡಕೂರ್, ಕೆ. ರಮೇಶಕುಮಾರ, ತಟ್ಟ ಇಂದ್ರೇಶ, ಕೆ.ಎಂ. ಖಾನ್, ನಿವೃತ್ತ ಶಿಕ್ಷಕ ಹಖಂಡಿ ಮರಿಕೊಟ್ರಪ್ಪ, ಕೆ.ಎಂ. ಬಸವರಾಜಯ್ಯ, ಶಶಿಧರ ಬೆನ್ನೂರು ಇದ್ದರು.
ಹರಪನಹಳ್ಳಿ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿದ ತೆಗ್ಗಿನಮಠದ ಶ್ರೀಗಳನ್ನು ಸನ್ಮಾನಿಸಲಾಯಿತು.