ಸಾರಾಂಶ
ಆಕ್ಸಿಜನ್ ಪ್ಲಾಂಟ್, ಐಸಿಯು ಕೇರ್ ಯುನಿಟ್‌ಗಳಿಗೆ ಭೇಟಿ ನೀಡಿ ಪರೀಶಿಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ರಾಯಬಾಗ
ಕೋವಿಡ್-19 ಮುಂಜಾಗೃತ ಕ್ರಮವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ತಹಸೀಲ್ದಾರ್ ಸುರೇಶ ಮುಂಜೆ ತಿಳಿಸಿದರು. ಶುಕ್ರವಾರ ಮಧ್ಯಾಹ್ನ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿಗಳ ಟಾಸ್ಕ್‌ಫೋರ್ಸ್ ನಿರ್ದೇಶನದಂತೆ ಸಭೆ ನಡೆಸಿ ಮಾತನಾಡಿದ ಅವರು, ಕೊರೊನಾ ಹರಡದಂತೆ ಶಾಲೆ ಮಕ್ಕಳಿಂದ ಜಾಥಾ, ದೇವಸ್ಥಾನ, ಮಸೀದಿ, ಚರ್ಚಗಳಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಬೇಕು.60 ವರ್ಷ ಮೇಲ್ಪಟ್ಟ ವೃದ್ದರು, ದೀರ್ಘಾವಧಿ ಕಾಯಿಲೆಯಿಂದ ಬಳಲುವವರು, ಮಧುಮೇಹ, ಕ್ಯಾನ್ಸರ್, ಹೃದಯ ಸಂಬಂಧಿ ರೋಗಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಎಸ್‌ಒಪಿ ಮಾರ್ಗಸೂಚಿ ಪ್ರಕಾರ ಔಷಧಿ ದಾಸ್ತಾನು, ಐಸಿಯು ಬೆಡ್, ಆಕ್ಸಿಜನ್ ಪ್ಲಾಂಟ್‌ಗಳ ಬಗ್ಗೆ ಮಾಹಿತಿ ಪಡೆದರು. ಸಾರ್ವಜನಿಕರು ಜೆಎನ್1 ಬಗ್ಗೆ ಭಯಪಡದೆ, ಮುನ್ನೆಚರಿಕೆ ವಹಿಸಬೇಕು. ಜನಸಂದಣಿ ಪ್ರದೇಶಗಳಿಂದ ದೂರವಿರಬೇಕು. ಜನದಟ್ಟನೆಗಳಲ್ಲಿ ಕಡ್ಡಾಯವಾಗಿ ಮಾಸ್ಕ ಧರಿಸುವಂತೆ ಸೂಚಿಸಿದರು. ನಂತರ ಆಕ್ಸಿಜನ್ ಪ್ಲಾಂಟ್, ಐಸಿಯು ಕೇರ್ ಯುನಿಟ್‌ಗಳಿಗೆ ಭೇಟಿ ನೀಡಿ ಪರೀಶಿಲನೆ ನಡೆಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಂ.ಪಾಟೀಲ, ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಎಚ್.ರಂಗಣ್ಣವರ, ತಾಲೂಕು ಶಿಕ್ಷಣಾಧಿಕಾರಿ ಎಸ್.ಎಸ್.ಪಾಟೀಲ, ತಾ.ಪಂ.ಎಡಿಪಿಆರ್ ವಾಸುದೇವ ಎಸ್.ವಿ. ಹಾಗೂ ಆರೋಗ್ಯ ಸಿಬ್ಬಂದಿ ಇದ್ದರು.