ಜೈನ ಬಸದಿಗೆ ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಭೇಟಿ

| Published : Aug 25 2024, 01:48 AM IST

ಸಾರಾಂಶ

ರಾಜ್ಯಪಾಲ ಸಿ.ಎಚ್.ವಿಜಯ ಶಂಕರ್ ಅವರನ್ನು ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಮುಖಂಡರಾದ ಇಂಡುವಾಳು ಎಸ್. ಸಚ್ಚಿದಾನಂದ, ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್ ನಂಜುಂಡೇಗೌಡ, ಜಿಲ್ಲಾ ಕಾರ್ಯದರ್ಶಿ ಹೊಸಹಳ್ಳಿ ಮಹದೇವು, ಟಿ.ಶ್ರೀಧರ್ ಸೇರಿದಂತೆ ಇತರ ಬಿಜೆಪಿ ಮುಖಂಡರು ಸನ್ಮಾನಿಸಿ ಗೌರವ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಐತಿಹಾಸಿಕ ಜೈನ ಬಸದಿಗೆ ಭೇಟಿ ನೀಡಿ ಆದಿನಾಥರ ದರ್ಶನ ಪಡೆದ ಮೇಘಾಲಯದ ರಾಜ್ಯಪಾಲ ಸಿ.ಎಚ್ ವಿಜಯಶಂಕರ್ ರವರನ್ನು ಬಿಜೆಪಿ ಮುಖಂಡರು ಅಭಿನಂದಿಸಿದರು.

ಜೈನ ಬಸದಿಯ 1008ನೇ ಶ್ರೀ ಆದಿನಾಥ ತೀರ್ಥಂಕರರಿಗೆ ಪ್ರಾರ್ಥನೆ ಸಲ್ಲಿಸಿ ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕ ಸನ್ಮತಿ ಪೂಜೆ ಕಾರ್ಯ ನೆರವೇರಿಸಿಕೊಟ್ಟರು.

ರಾಜ್ಯಪಾಲ ಸಿ.ಎಚ್.ವಿಜಯ ಶಂಕರ್ ಅವರನ್ನು ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಮುಖಂಡರಾದ ಇಂಡುವಾಳು ಎಸ್. ಸಚ್ಚಿದಾನಂದ, ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್ ನಂಜುಂಡೇಗೌಡ, ಜಿಲ್ಲಾ ಕಾರ್ಯದರ್ಶಿ ಹೊಸಹಳ್ಳಿ ಮಹದೇವು, ಟಿ.ಶ್ರೀಧರ್ ಸೇರಿದಂತೆ ಇತರ ಬಿಜೆಪಿ ಮುಖಂಡರು ಸನ್ಮಾನಿಸಿ ಗೌರವ ಸಲ್ಲಿಸಿದರು.

ನಂತರ ಸ್ಥಳಿಯ ಬಿಜೆಪಿಯ ಮುಖಂಡರು, ಸ್ಥಳೀಯ ಪುರಸಭೆ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರೊಂದಿಗೆ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಪೋಟೊ ತೆಗೆಸಿಕೊಂಡು ಸ್ಥಳೀಯರ ಪ್ರೀತಿಗೆ ಪಾತ್ರರಾದರು.

ಈ ವೇಳೆ ಪುರಸಭಾ ಸದಸ್ಯರಾದ ಎಸ್.ಟಿ.ರಾಜು, ಗಂಜಾಂ ಶಿವು, ಮುಖಂಡರುಗಳಾದ ಪುಟ್ಟರಾಜು, ಬಿ.ಸಿ.ಕೃಷ್ಣೇಗೌಡ, ಎಂ.ವಿ.ಕೃಷ್ಣ, ಚಂದ್ರಶೇಖರ್, ಲಕ್ಷ್ಮೀನಾರಾಯಣ್, ಪ್ರಭಾಕರ್ ಗುಪ್ತ, ಚಂದನ್, ಕಿರಣ್ ಸಿಂಗ್ ಇತರರು ಇದ್ದರು.