ಸಾರಾಂಶ
- 52 ವರ್ಷಗಳ ವಿವಾದಕ್ಕೆ ತಾರ್ಕಿಕ ಅಂತ್ಯ
- ಕೋರ್ಟ್ ತೀರ್ಪಿನಂತೆ ನಾಮ ಬದಲುಕನ್ನಡಪ್ರಭ ವಾರ್ತೆ ಮೇಲುಕೋಟೆ (ಮಂಡ್ಯ)
ಮೇಲುಕೋಟೆ ಬೆಟ್ಟದ ಶ್ರೀಯೋಗಾನರಸಿಂಹ ಸ್ವಾಮಿ ದೇವಾಲಯದ ಚಿಕ್ಕಗೋಪುರಕ್ಕೆ ತೆಂಗಲೆನಾಮ ಹಾಕುವ ಮೂಲಕ 52 ವರ್ಷಗಳ ವಿವಾದ ತಾರ್ಕಿಕ ಅಂತ್ಯ ಕಂಡಂತಾಗಿದೆ. ಯೋಗನರಸಿಂಹ ಸ್ವಾಮಿ ದೇಗುಲದ ಚಿಕ್ಕಗೋಪುರವನ್ನು1972ರಲ್ಲಿ ಜೀರ್ಣೋದ್ಧಾರದ ವೇಳೆ ಪಾಂಡವಪುರ ತಹಸೀಲ್ದಾರ್ ಆದೇಶದಂತೆ ತೆಂಗಲೆನಾಮ ತೆಗೆದು ವಡಗಲೆ ನಾಮ ಹಾಕಲಾಗಿತ್ತು.ಚಿಕ್ಕಗೋಪುರಕ್ಕೆ ವಡಗಲೆನಾಮ ಹಾಕಿದ್ದರಿಂದ ವಿವಾದವಾಗಿ ಪ್ರಕರಣ 1973ರಲ್ಲಿ ಹೈಕೋರ್ಟ್‌ಗೆ ತಲುಪಿತ್ತು. ಹೈಕೋರ್ಟ್ ಪ್ರಕರಣವನ್ನು ಪಾಂಡವಪುರ ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ಆದೇಶಿಸಿತ್ತು.
ಮತ್ತೆ ಪಾಂಡವಪುರ ಹಿರಿಯ ಶ್ರೇಣಿ ಸಿವಿಲ್ ಮತ್ತು ಜೆಎಂಎಪ್‌ಸಿ ನ್ಯಾಯಾಲಯದಲ್ಲಿ ಮೇಲ್ಮನವಿ ದಾಖಲಾಗಿ 22 ವರ್ಷಗಳ ಸುದೀರ್ಘ ವಿಚಾರಣೆ ನಂತರ ನ್ಯಾಯಾಲಯ 29 ಪುಟಗಳ ತೀರ್ಪು ನೀಡಿ ವಡಗಲೆನಾಮ ತೆಗೆದು ಚಿಕ್ಕಗೋಪುರಕ್ಕೆ ತೆಂಗಲೆ ನಾಮ ಅಳವಡಿಸುವಂತೆ ಆದೇಶ ಮಾಡಿದೆ. ಗುರುವಾರ ಸಂಜೆ ಗೋಪುರಕ್ಕೆ ತೆಂಗಲೆ ನಾಮ ಹಾಕಲಾಯಿತು.ಮೈಸೂರು ಮಹಾರಾಜ ಶ್ರೀಕೃಷ್ಣರಾಜ ಒಡೆಯರ್ ದೇವಾಲಯ ತೆಂಗಲೆ ಸಂಪ್ರದಾಯದ್ದಾಗಿದ್ದು ದೇವರಿಗೆ ಮತ್ತು ಗೋಪುರಕ್ಕೆ ತೆಂಗಲೆನಾಮ ಹಾಕಬೇಕು ಎಂದು 1814ರ ಸೆ.5ರಂದು ಹುಕುಂ ಹೊರಡಿಸಿದ್ದರು. ಆದರೆ, ಕಲ್ಕತ್ತ ವಿಷ್ಣುದೇವಾಲಯಗಳ ಜೀರ್ಣೋದ್ಧಾರ ಟ್ರಸ್ಟ್ ಬೆಟ್ಟದ ಜೀರ್ಣೋದ್ಧಾರ ವೇಳೆ ಪರಕಾಲಮಠದ ಪ್ರಭಾವದಿಂದ 1972ರ ಡಿ.30ರಂದು ಪಾಂಡವಪುರ ತಹಸೀಲ್ದಾರ್ ಮೂಲಕ ಚಿಕ್ಕಗೋಪುರಕ್ಕೆ ವಡಗಲೆನಾಮ ಹಾಕಿಸಿದ್ದರು. ಇದಕ್ಕೆ ವಿರೋಧ ವ್ಯಕ್ತವಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.
====ಪಡಿಸಿದ್ದ ತೆಂಗಲೆ ಸಂಪ್ರದಾಯದ ಆರ್.ಕೃಷ್ಣಯ್ಯಂಗಾರ್, ಅಳಹಿಯಮನವಾಳನ್ ಹಾಗೂ ಅಧ್ಯಾಪಕರು ನಿಯಮಬಾಹಿರವಾದ ತಹಸೀಲ್ದಾರ್ ಆದೇಶ ರದ್ದು ಮಾಡಿ ತೆಂಗಲೆ ನಾಮ ಅಳವಡಿಸಬೇಕು ಎಂದು 1973ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು.
ಪಾಂಡವಪುರ ಕಿರಿಯ ಸಿವಿಲ್ ನ್ಯಾಯಾಲಯ ಮೇಲುಕೋಟೆ ಚೆಲುವನಾರಾಯಣಸ್ವಾಮಿ ಮತ್ತು ಬೆಟ್ಟದ ಯೋಗನರಸಿಂಹಸ್ವಾಮಿ ದೇವಾಲಯಗಳು ತೆಂಗಲೆ ಸಂಪ್ರದಾಯ ದೇಗುಲಗಳು ಎಂದು 2001ರಲ್ಲಿ ತೀರ್ಪು ನೀಡಿದ್ದರೂ ಚಿಕ್ಕಗೋಪುರದಲ್ಲಿದ್ದ ವಡಗಲೆ ನಾಮ ತೆಗೆಯಲು ಅವಕಾಶ ನೀಡಲಿಲ್ಲ. ಈ ಬಗ್ಗೆ ಪಾಂಡವಪುರ ಹಿರಿಯ ಶ್ರೇಣಿಯ ಸಿವಿಲ್ ಮತ್ತು ಜೆಎಂಎಪ್‌ಸಿ ನ್ಯಾಯಾಲಯದಲ್ಲಿ ಅರ್ಜಿದಾರರು 2002ರಲ್ಲಿ ಮೇಲ್ಮನವಿ ದಾಖಲಿಸಿದ್ದರು. ಹಿರಿಯ ಶ್ರೇಣಿಯ ನ್ಯಾಯಾಲಯ 22 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿ ಚಿಕ್ಕಗೋಪುರದ ಮೇಲೆ ಅಳವಡಿಸಿದ್ದ ವಡಗಲೆನಾಮ ತೆಗೆದು ಹಳೆಯ ಸಂಪ್ರದಾಯದ ತೆಂಗಲೆ ನಾಮ ಹಾಕಬೇಕು ಎಂದು ಆದೇಶ ನೀಡಿದೆ.ಅರ್ಜಿದಾರರಾದ ಕೃಷ್ಣಯ್ಯಂಗಾರ್ ಅಳಹಿಯಮಣವಾಳನ್, ಪ್ರತಿವಾದಿಗಳಾಗಿದ್ದ ಕಸ್ತೂರಿ ನಾರಾಯಣ ಅಯ್ಯಂಗಾರ್ ಜಿ.ವಿಎನ್ ಆಚಾರ್ ನಿಧನ ಹೊಂದಿದ್ದಾರೆ.