ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಬಿರ್ಸಾ ಮುಂಡ ಅವರು ಬುಡಕಟ್ಟು ಜನಾಂಗದ ಮಹಾನ್ ನಾಯಕ. ಅವರು ರಾಜಕೀಯ ನಾಯಕ ಮತ್ತು ಆಧ್ಯಾತ್ಮಿಕ ಮಾರ್ಗದರ್ಶಕವಾಗಿ ಹೊರಹೊಮ್ಮಿದವರು ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ತಿಳಿಸಿದರು.ನಗರದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ಭಗವಾನಿ ಶ್ರೀ ಬಿರ್ಸಾ ಮುಂಡಾರವರ 150ನೇ ಜಯಂತಿ ಆಚರಣೆ ಹಾಗೂ ಪ್ರಧಾನಮಂತ್ರಿ ಜನಜಾತೀಯ ಆದಿವಾಸಿ ನ್ಯಾಯಮಹಾ ಗೌರವ ದಿವಸ ಅಭಿಯಾನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಅತ್ಯಂತ ತಳಮಟ್ಟದ ಬುಡಕಟ್ಟು ಸಮುದಾಯದಿಂದ ಬಂದ ಬಿರ್ಸಾ ಮುಂಡಾ ಅವರು ಉತ್ತಮ ನಾಯಕರಾದರು. ಅವರ ಬಗ್ಗೆ ಇಂದಿನ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು, ಚೆನ್ನಾಗಿ ಓದಬೇಕು. ಅವರ ಹೋರಾಟ ನಿಮಗೆ ಮಾದರಿಯಾಗಬೇಕು. ಯಾರು ಸಹ ಹುಟ್ಟಿದ ತಕ್ಷಣ ನಾಯಕರಾಗುವುದಿಲ್ಲ. ಆದರೆ ಚೆನ್ನಾಗಿ ಓದಿದರೆ ಉತ್ತಮ ನಾಯಕರಾಗಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.ಬಿರ್ಸಾ ಮುಂಡಾ ಅವರು 1898 ರಲ್ಲೇ ಬ್ರಿಟಿಷ್ ವಿರುದ್ಧ ಹೋರಾಟ ಮಾಡಿದ್ದರು. ಬುಡಕಟ್ಟು ಜನಾಂಗದ ಹಕ್ಕುಗಳಿಗಾಗಿ ಆಗಿನ ಕಾಲದಲ್ಲೇ ಹೋರಾಟ ನಡೆಸಿದ್ದರು. ಅವರ ಕೊಡುಗೆ ಬುಡಕಟ್ಟು ಜನಾಂಗಕ್ಕೆ ಅಪಾರವಾದದ್ದು. ಹೀಗಾಗಿ, ಈಗಿನ ಪೀಳಿಗೆಯ ಮಕ್ಕಳು ಅವರ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕು. ಅದಕ್ಕಾಗಿಯೇ ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿರ್ಸಾ ಮುಂಡಾ ಜನ್ಮ ದಿನ ಆಚರಿಸುತ್ತಿದ್ದಾರೆ ಎಂದರು.ಇದೇ ವೇಳೆ ಸರ್ಕಾರ ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿ 33 ಬಹು ಉಪಯೋಗಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದು, ಅದರಲ್ಲಿ ಪೂರ್ಣಗೊಂಡಿರುವ 4 ಕಟ್ಟಡಗಳನ್ನು ಲೋಕಾರ್ಪಣೆ ಮಾಡಿದರು.ಪದ್ಮಶ್ರೀ ಪುರಸ್ಕೃತರಾದ ಅಮಯ್ ಮಹಾಲಿಂಗ ನಾಯ್ಕ ಹಾಗೂ ಸೋಮಣ್ಣ ಅವರನ್ನು ಗೌರವಿಸಲಾಯಿತು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ನಂತರ ಆಶ್ರಮ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.ಬುಡಕಟ್ಟು ನಿವಾಸಿಗಳ ಸಚಿವಾಲಯದ ನಿರ್ದೇಶಕ ಶಿವಾನಂದ ಬಚಗುಂಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಟಿ. ಯೋಗೇಶ್, ಜಂಟಿ ನಿರ್ದೇಶಕರಾದ ಡಾ. ರಾಜಕುಮಾರ್, ಸುರೇಶ್ ರೆಡ್ಡಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜಶೇಖರಮೂರ್ತಿ, ಸಂಸ್ಥೆಯ ಉಪ ನಿರ್ದೇಶಕಿ ಎಚ್.ಎಸ್. ಗಿರಿಜಾಂಬ, ಲೆಕ್ಕಾಧಿಕಾರಿ ಬಿ.ಆರ್. ಭವ್ಯಾ, ಕಚೇರೀ ಅಧೀಕ್ಷಕಿ ಎಂ.ವಿ. ನಾಗರತ್ನಾ, ತಾಲೂಕು ಕಲ್ಯಾಣಾಧಿಕಾರಿಗಳಾದ ಅರುಣ್ ಪ್ರಭು, ಜಿ.ಆರ್. ಮಹೇಶ್, ಗಂಗಾಧರ್, ಚಂದ್ರಶೇಖರ್, ಎಂ.ಎನ್. ಕೋಮಲಾ ಮೊದಲಾದವರು ಇದ್ದರು. ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಬಿ. ರಂಗೇಗೌಡ ಸ್ವಾಗತಿಸಿದರು.----ಕೋಟ್...ಬುಡಕಟ್ಟು ಸಮುದಾಯಗಳಿಗೆ ಸರ್ಕಾರಗಳು ಅನೇಕ ಯೋಜನೆಗಳನ್ನು ನೀಡುತ್ತಿದೆ. ಅದನ್ನು ಅವರಿಗೆ ತಲುಪಿಸುವ ಕಾರ್ಯ ಆಗಬೇಕು. ಬುಡಕಟ್ಟು ಸಮುದಾಯ ಇಂದಿಗೂ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬುಡಕಟ್ಟು ಸಮುದಾಯಗಳ ಸಮಸ್ಯೆ ಬಗೆಹರಿಸಲು ಮತ್ತಷ್ಟು ಯೋಜನೆಗಳನ್ನು ತರಬೇಕು. ಅವರಿಗೆ ಇರುವಂತಹ ಯೋಜನೆಗಳ ಬಗ್ಗೆ ಅಧಿಕಾರಿಗಳು ಅರಿವು ಮೂಡಿಸಬೇಕು. ಎಲ್ಲಾ ಬುಡಕಟ್ಟು ಜನಾಂಗದವರು ಸರ್ಕಾರ ನೀಡುವ ಯೋಜನೆಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು.- ಸಿ.ಎನ್. ಮಂಜೇಗೌಡ, ವಿಧಾನಪರಿಷತ್ ಸದಸ್ಯ
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))