ಕನ್ನಡಪ್ರಭ ವಾರ್ತೆ ಸರಗೂರುಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯ ವಿರೋಧಿಸಿ ಪಟ್ಟಣದಲ್ಲಿ ತಾಲೂಕು ಬಲಗೈ ಸಮುದಾಯಗಳ ಒಕ್ಕೂಟದಿಂದ ಪ್ರತಿಭಟಿಸಲಾಯಿತು.ತಾಲೂಕು ಕಚೇರಿ ಎದುರು ಜಮಾಯಿಸಿದ ನೂರಾರು ಬಲಗೈ ಸಮುದಾಯಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಆದಿ ಕರ್ನಾಟಕ ಮಹಾಸಭಾ ತಾಲೂಕು ಅಧ್ಯಕ್ಷ ರಾಜಣ್ಣ ಮಾತನಾಡಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮೂವರು ಪ್ರಭಾವಿ ಸಚಿವರು, 37 ಎಡ, ಬಲಗೈ ದಲಿತ ಸಮುದಾಯದ ಶಾಸಕರಿದ್ದರೂ ಬಲಗೈ ದಲಿತ ಸಮುದಾಯಕ್ಕೆ ಅನ್ಯಾಯವಾಗುತ್ತಿರುವ ಬಗ್ಗೆ ಮೌನವಾಗಿರುವುದನ್ನು ಖಂಡಿಸಿದರು.ಮಹಾಸಭಾದ ಮಾಜಿ ಅಧ್ಯಕ್ಷ ಶಿವಣ್ಣ ಮಾತನಾಡಿ, ನಾಗಮೋಹನ್ ದಾಸ್ ಅವರು ಸರ್ಕಾರಕ್ಕೆ ಏಕಪಕ್ಷೀಯವಾಗಿ ವರದಿ ಕೊಟ್ಟಿರುವುದೇ ಇದಕ್ಕೆಲ್ಲಾ ಕಾರಣ. ಸರ್ಕಾರ ಒಡೆದಾಳುವ ನೀತಿ ಅನುಸರಿಸುತ್ತಿದೆ. ಸಮುದಾಯದ ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ವರದಿ ಜಾರಿಗೊಳಿಸದೇ ಬಲಗೈ ಸಮಾಜಕ್ಕೆ ನ್ಯಾಯ ಕೊಡಿಸಬೇಕು. ಬಲಗೈ ದಲಿತ ಸಮುದಾಯಕ್ಕೆ ಅನ್ಯಾಯವಾದರೂ ಸಚಿವರಾದ ಪ್ರಿಯಾಂಕ ಖರ್ಗೆ, ಪರಮೇಶ್ವರ್ ಹಾಗೂ ಎಚ್.ಸಿ. ಮಹದೇವಪ್ಪ ಮತ್ತು ಶಾಸಕರು ಮೌನ ವಹಿಸಿರುವುದು ಯಾವ ಸ್ವಾರ್ಥಕ್ಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ದಲಿತ ಮುಖಂಡರಾದ ಗ್ರಾಮೀಣ ಮಹೇಶ್, ಶಿವರಾಜು, ಗೋಪಾಲಸ್ವಾಮಿ, ವಿವಿ ಸಂಶೋಧಕರ ಸಂಘದ ಪದಾಧಿಕಾರಿಗಳಾದ ವಿಶ್ವಪ್ರಸಾದ್ ಹಾಗೂ ಮತ್ತುರಾಜ್ ಮಾತನಾಡಿದರು. ಶಿರಸ್ತೆದಾರ್ ಮನೋಹರ್ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಆದಿ ಕರ್ನಾಟಕ ಮಹಾಸಭಾ ಗೌರವಾಧ್ಯಕ್ಷ ಇದಿಯಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಜಿಪಂ ಮಾಜಿ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಜಿ. ಗೋಪಾಲಸ್ವಾಮಿ, ಸೋಮೇಶ್, ಮಾಜಿ ಕಾರ್ಯದರ್ಶಿ ಮಲ್ಲೇಶ್, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ನಿಂಗರಾಜು, ತಾಲೂಕು ಸಂಚಾಲಕ ಡಿ.ಎಂ. ಶಿವಶಂಕರ್, ಕೋಟೆ ಅಧ್ಯಕ್ಷ ಕುಮಾರ್, ಪುಟ್ಟಮಾದು, ಕಾಳಸ್ವಾಮಿ, ತಾಲೂಕು ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ನಾಗರಾಜು, ಟೌನ್ ಅಧ್ಯಕ್ಷ ಸಣ್ಣಸ್ವಾಮಿ, ಮಹಾಸಭಾ ಉಪಾಧ್ಯಕ್ಷ ಶಿವಣ್ಣ, ಚಿನ್ನಣ್ಣ, ಕಾಳಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಸೂರ್ಯ ಕುಮಾರ್, ಶ್ರೀನಿವಾಸ್, ವಿಷಕಂಠ, ಅಣ್ಣಯ್ಯ ಸ್ವಾಮಿ, ಗೋವಿಂದ, ರಮೇಶ್, ಮಹೇಶ್, ದಸಂಸ ಜಿಲ್ಲಾ ಸಂಚಾಲಕಿ ಅನುಷಾ ಇದ್ದರು.
ಒಳ ಮೀಸಲಾತಿಯಲ್ಲಿ ಅನ್ಯಾಯ ವಿರೋಧಿಸಿ ಬಲಗೈ ಒಕ್ಕೂಟ ಪ್ರತಿಭಟನೆ
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮೂವರು ಪ್ರಭಾವಿ ಸಚಿವರು, 37 ಎಡ, ಬಲಗೈ ದಲಿತ ಸಮುದಾಯದ ಶಾಸಕರಿದ್ದರೂ ಬಲಗೈ ದಲಿತ ಸಮುದಾಯಕ್ಕೆ ಅನ್ಯಾಯ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.