ಮಹಿಳೆಯರ ಸಾಧನೆಗೆ ಪುರುಷರು ಪ್ರೋತ್ಸಾಹಿಸಿ: ಡಾ.ಲಕ್ಷ್ಮಿದೇವಿ

| Published : Mar 19 2024, 12:48 AM IST / Updated: Mar 19 2024, 12:49 AM IST

ಮಹಿಳೆಯರ ಸಾಧನೆಗೆ ಪುರುಷರು ಪ್ರೋತ್ಸಾಹಿಸಿ: ಡಾ.ಲಕ್ಷ್ಮಿದೇವಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಧನೂರಿನ ನೊಬೆಲ್ ಪದವಿ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಸಾವಿತ್ರಿ ಬಾಪುಲೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಸಿಂಧನೂರು

ಮಹಿಳೆಯರ ಸಾಧನೆಗೆ ಪುರಷರ ಪ್ರೋತ್ಸಾಹ ಅಗತ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ.ಲಕ್ಷ್ಮಿದೇವಿ ಹೇಳಿದರು.

ಸ್ಥಳೀಯ ನೊಬೆಲ್ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವೆ ಯೋಜನಾ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಸಾವಿತ್ರಿ ಬಾಪುಲೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಮಾಜದಲ್ಲಿ ಹೆಣ್ಣು ಕಡಿಮೆಯಲ್ಲ, ಗಂಡು ಹೆಚ್ಚು ಅಲ್ಲ. ಇಬ್ಬರೂ ಸರಿಸಮಾನರು. ಇಬ್ಬರಲ್ಲಿಯೂ ಸ್ತ್ರೀ ಸಂವೇದನೆ ಬೇಕಾಗಿದೆ ಎಂದು ಹೇಳಿದರು.

ಕವಿಯಿತ್ರಿ ಸಂಗೀತ ಸಾರಂಗಮಠ ಮಾತನಾಡಿ, ಹೆಣ್ಣಿಗೆ ಅವಕಾಶ ಎಷ್ಟು ಮುಖ್ಯನೋ ಅಷ್ಟೇ ಪುರುಷರ ಸಹಕಾರ ಕೂಡ ಮುಖ್ಯ. ಮಹಿಳೆಯರ ಕನಸುಗಳಿಗೆ ಬಣ್ಣ ಹಚ್ಚುವ ಕೆಲಸ ಪುರುಷರು ಮಾಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಿ, ಅದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಎಲ್ಲ ಉಪನ್ಯಾಸಕರಿಗೆ ಮತ್ತು ಸಿಬ್ಬಂದಿಯೇತರ ವರ್ಗದವರಿಗೆ ಸನ್ಮಾನಿಸಲಾಯಿತು. ಪ್ರಾಂಶುಪಾಲೆ ಐಶ್ವರ್ಯ ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಪನ್ಯಾಸಕಿ ಶಾಂತ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಪನ್ಯಾಸಕಿಯರಾದ ಚೆನ್ನಬಸಮ್ಮ ಮಲ್ಲಾಪುರ, ಗಿರಿಜಾ, ಜ್ಯೋತಿ, ಸಮ್ರಿನ, ಸೌಜನ್ಯ, ಕಾವೇರಿ, ಪರಿಚಾರಿಕಿಯರಾದ ಫಾತಿಮಾ, ಹುಸೇನಮ್ಮ, ವಿದ್ಯಾರ್ಥಿನಿ ಅಂಬಿಕಾ, ಕಾಲೇಜಿನ ಅಧ್ಯಕ್ಷ ಪರಶುರಾಮ್ ಮಲ್ಲಾಪುರ್, ಕಾರ್ಯದರ್ಶಿ ಡಾ.ಅರುಣಕುಮಾರ್ ಬೇರಿಗಿ ಇದ್ದರು. ಪ್ರಿಯಾಂಕ ಪ್ರಾರ್ಥಿಸಿದರು. ಅಂಬಿಕಾ ಸ್ವಾಗತಿಸಿದರು. ಭಾಗ್ಯಮ್ಮ ನಿರೂಪಿಸಿದರು.