ಸಾರಾಂಶ
ಉಡುಪಿ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆಸ್ಪತ್ರೆ, ಎ.ವಿ. ಬಾಳಿಗಾ ಮೆಮೋರಿಯಲ್ ಆಸ್ಪತ್ರೆ ಹಾಗು ಐಎಂಎ ಕರಾವಳಿ, ಸೈಕ್ಯಾಟ್ರಿಕ್ ಸೊಸೈಟಿಗಳ ಆಶ್ರಯದಲ್ಲಿ ನಗರದ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನ ಆಚರಿಸಲಾಯಿತು. ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್ ಎಸ್. ಗಂಗಣ್ಣನವರ್ ಉದ್ಘಾಟಿಸಿ, ಇಂದಿನ ಪೀಳಿಗೆ ಒತ್ತಡದಲ್ಲಿ ಬದುಕುತ್ತಿದೆ. ಇದಕ್ಕೆ ಕೆಲಸ ಮಾತ್ರವಲ್ಲದೇ ಇತರ ಕಾರಣಗಳು ಸೇರಿಕೊಂಡು ಮಾನಸಿಕ ಆರೋಗ್ಯದ ಮೇಲೆ ಹಾನಿ ಉಂಟಾಗುತ್ತಿದೆ. ನಂತರ ಅದು ದೈಹಿಕ ಆರೋಗ್ಯವನ್ನು ಕೊಳೆಯುವಂತೆ ಮಾಡುತ್ತದೆ. ಹೀಗಾಗಿ ಯಾವ ಕಠಿಣ ಸಂದರ್ಭವನ್ನು ಸಾವಧಾನದಿಂದ ನಗುತ್ತಾ ಎದುರಿಸಿ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇರುತ್ತದೆ ಎಂದು ನುಡಿದರು. ಕಾಲೇಜಿನ ನಿರ್ದೇಶಕಿ ಡಾ.ನಿರ್ಮಲಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಸುರೇಖಾ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್, ಐಎಂಎ ಕರಾವಳಿಯ ಅಧ್ಯಕ್ಷ ಡಾ. ಅಶೋಕ್, ಖ್ಯಾತ ಮನೋವೈದ್ಯ ಡಾ. ಪಿ. ವಿ ಭಂಡಾರಿ, ಸೈಕ್ಯಾಟ್ರಿ ಸೊಸೈಟಿಯ ಅಧ್ಯಕ್ಷ ಡಾ. ಅನಿಲ್, ಮನೋವೈದ್ಯರಾದ ಡಾ.ರಿತಿಕಾ ಸಾಲಿಯಾನ್, ಡಾ.ವಾಸುದೇವ್, ಡಾ.ಸುನೀಲ್ ಕುಮಾರ್, ಕಾಲೇಜಿನ ಕಾನೂನು ಸೇವಾ ಪ್ರಾಧಿಕಾರ ಸಂಯೋಜಕ ಈರಪ್ಪ, ವಿದ್ಯಾರ್ಥಿ ಪ್ರತಿನಿಧಿ ಸ್ವಸ್ಥಿಕ್, ದಿಶಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪಲ್ಲವಿ ಸ್ವಾಗತಿಸಿ, ರೇವತಿ ವಂದಿಸಿದರು. ರೋಸ್ ನಿರೂಪಿಸಿದರು.