ದೈಹಿಕ, ಮಾನಸಿಕ ಆರೋಗ್ಯ ಮಾತ್ರ ಆರೋಗ್ಯವಲ್ಲ. ಆಧ್ಯಾತ್ಮಿಕ ಆರೋಗ್ಯವೂ ಮುಖ್ಯ ಎಂದು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್-2025 ಪುರಸ್ಕೃತರಾದ ಡಾ.ಅಶ್ವಿನಿ ಹಿರೇಮಠ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ದೈಹಿಕ, ಮಾನಸಿಕ ಆರೋಗ್ಯ ಮಾತ್ರ ಆರೋಗ್ಯವಲ್ಲ. ಆಧ್ಯಾತ್ಮಿಕ ಆರೋಗ್ಯವೂ ಮುಖ್ಯ ಎಂದು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್-2025 ಪುರಸ್ಕೃತರಾದ ಡಾ.ಅಶ್ವಿನಿ ಹಿರೇಮಠ ಹೇಳಿದರು.ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಿಸನಳ್ಳಿಯ ಶ್ರೀ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆಯ ಆವರಣದಲ್ಲಿ 6 ದಿನಗಳ ಕಾಲ ನಡೆಯುವ ಇಷ್ಟಲಿಂಗ ಮಹಾಪೂಜೆ ಹಾಗೂ ವೀರಶೈವ ಪಂಚಾಚಾರ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮದ ಮಾನವ ಧರ್ಮ ಸಮಾವೇಶದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿನ ಅನುಪಮ ಸೇವೆಗೆ ನೀಡುವ ವೈದ್ಯನಿಕೇತನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಾನು ವೃತ್ತಿಯಿಂದ ವೈದ್ಯನಾದರೂ ದೈಹಿಕ ಹಾಗೂ ಮಾನಸಿಕ ಆರೋಗ್ಯ ಜೊತೆಗೆ ಆಧ್ಯಾತ್ಮಿಕ ಆರೋಗ್ಯ ಚೆನ್ನಾಗಿದ್ದರೇ ಮಾತ್ರ ನಾವು ನಮ್ಮ ಅಜ್ಜ-ಅಜ್ಜಿಯವರ ಹಾಗೆ 100 ವರ್ಷಗಳ ಕಾಲ ಬದುಕಬಹುದು. ಹಗಲು-ರಾತ್ರಿ ದುಡಿಯುವರಿಗೆ ಯಾವ ರೋಗಗಳು ಬರುವುದಿಲ್ಲ. ಇಂದಿನ ಯುವಪೀಳಿಗೆ ಹೇಳುವುದಕ್ಕೆ, ಅರಿವು ಮೂಡಿಸುವುದಕ್ಕೆ ಇಂತಹ ಮಹಾಸಭೆಗಳು ತುಂಬಾನೆ ಅಗತ್ಯವಾಗಿವೆ ಎಂದು ವಿವರಿಸಿದರು.ದೈಹಿಕ ಆರೋಗ್ಯ ನೋಡಲು ವೈದ್ಯರಾದ ನಾವು ಇರುತ್ತೇವೆ. ಮಾನಸಿಕ ಆರೋಗ್ಯ ನಿಮ್ಮ ಕೈಯಲ್ಲಿಯೇ ಇದೆ. ಆದರೆ, ಆಧ್ಯಾತ್ಮಿಕ ಆರೋಗ್ಯ ಕಾಯಬೇಕೆಂದರೇ ನಮ್ಮ, ನಿಮ್ಮಂತ ಸಾಮಾನ್ಯ ಮನುಷ್ಯರ ಕೈಯಲ್ಲಿಲ್ಲ. ಅಂತಹದೊಂದು ಯಶಸ್ವಿಗೆ ದಾರಿ ಸೃಷ್ಟಿ ಮಾಡಿರುವುದೇ ವೀರಶೈವ ಲಿಂಗಾಯತ ಧರ್ಮ. ವೀರಶೈವ ಧರ್ಮ ಕೇವಲ ಧರ್ಮವಲ್ಲ, ನಾವು ಬದುಕುವ ದಾರಿ. ಧರ್ಮದ ಕೇಂದ್ರಯ ಭಾವನೆ ಇಷ್ಟಲಿಂಗ ಪೂಜೆಯಾಗಿದ್ದು, ಶ್ರೀಗಳ ಕೈಯಲ್ಲಿ ನಮಗೆ ಲಿಂಗಧಾರಣೆ ಆಗಿರುವುದು ಪಾವನ ದಿವಸವೆಂದುಕೊಳ್ಳುತ್ತೇನೆ. ನಮ್ಮ ಜೀವನಕ್ಕೆ ಬೆಳಕು ಬಿರುವ ನೀತಿಗಳಾದ ಮಾನವೀಯತೆ, ಪ್ರಾಮಾಣಿಕತೆ, ಸತ್ಯ, ಸೇವೆ ಇವೆಲ್ಲವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ವೀರಶೈವ ಲಿಂಗಾಯತ ಧರ್ಮದ ಅರ್ಥವನ್ನು ಅರಿಯುತ್ತೇವೆ ಎಂದು ತಿಳಿಸಿದರು.ಆದರ್ಶ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ವಿದ್ಯಾ ಬಲವಂತಪ್ಪ ಕೋಟೆನ್ನವರ ಮಾತನಾಡಿ, ನಮ್ಮ ಲಿಂಗಾಯತ ಧರ್ಮ ಪ್ರೋಟಿನ್ ವಿಥ್ ಧರ್ಮವಾಗಿದೆ. ಈ ಧರ್ಮವನ್ನು ರಕ್ಷಣೆ ಮಾಡುವಂತರು ಮಹಿಳೆಯರು. ಎಲ್ಲೆಲ್ಲೂ ನೋಡಿದರು ಮಹಿಳೆಯರು ಧರ್ಮ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದು, ರುದ್ರಗಳನ್ನು ಓದುತ್ತಿದ್ದಾರೆ. ಪೂಜೆ, ಪುನಸ್ಕಾರಗಳನ್ನು ಮಾಡುತ್ತಿರುವುದರಿಂದ ಮಹಿಳಾ ಚಿಂತಾನಗೋಷ್ಠಿ ಮಾಡುವ ಮೂಲಕ ಶ್ರೀಗಳು ಮಹಿಳೆಯರಿಗೆ ಗೌರವ ಸಲ್ಲಿಸಿರುವುದಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.ನಾಡಿನ ಶಿವಾಚಾರ್ಯರು ಮತ್ತು ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ವಿಜಯಪುರ ಜಿಲ್ಲೆಯ ಜೀವನ ಜ್ಯೋತಿ ಹಾರ್ಟ್ ಆ್ಯಂಡ್ ಬ್ರೆನ್ ಕ್ಲಿನಿಕ್ ಹಾಗೂ ಆರೋಗ್ಯಧಾಮ ಹಾಸ್ಪಿಟಲ್‌ನ ಖ್ಯಾತ ವೈದ್ಯರು, ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದ ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್-೨೦೨೫ ಪುರಸ್ಕೃತ ದಂಪತಿಯರಾದ ಡಾ.ಅಶ್ವಿನಿ ಹಿರೇಮಠ-ಡಾ.ಮಡಿವಾಳಸ್ವಾಮಿ ಧವಳಗಿಮಠ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯನಿಕೇತನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕಿ ವಿದ್ಯಾ, ಸುವರ್ಣ ನ್ಯೂಸ್ ಕಾಜಗಾರ, ಕನ್ನಡಪ್ರಭ ಗೊಂಬಿಗೆ ಪ್ರಶಸ್ತಿ ಪ್ರದಾನವಿಜಯಪುರ ಜಿಲ್ಲೆಯ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ನೀಡುವ ಸುವರ್ಣ ಸಾಧಕಿ-೨೦೨೫ ಪ್ರಶಸ್ತಿ ಪುರಸ್ಕೃತೆ ವಿದ್ಯಾ ಬಲವಂತಪ್ಪ ಕೋಟೆನ್ನವರ ಅವರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಆದರ್ಶ ಶಿಕ್ಷಕಿ ಪ್ರಶಸ್ತಿ ಸೇರಿದಂತೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಬೆಳಗಾವಿ ಜಿಲ್ಲೆಯ ಹಿರಿಯ ವರದಿಗಾರ ಅನಿಲ್ ಕಾಜಗಾರ ಅವರಿಗೆ ಮಾಧ್ಯಮ ಕ್ಷೇತ್ರದಲ್ಲಿ ಮಾಧ್ಯಮ ಭೂಷಣ ಪ್ರಶಸ್ತಿ, ಹುಬ್ಬಳ್ಳಿಯ ಕನ್ನಡಪ್ರಭ ವಿಶೇಷ ವರದಿಗಾರ ಶಿವಾನಂದ ಗೊಂಬಿ ಅವರಿಗೆ ಮಾಧ್ಯಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈಗಾಗಲೇ ಆಚಾರ್ಯರು, ಶರಣರು, ಸಂತರು ಸಾಕಷ್ಟು ಹೇಳಿದ್ದು, ನಮ್ಮ ಮೂಲ ತತ್ವಗಳಾದ ಶ್ರಮ, ಮಾನವೀಯತೆ, ಸಮಾನತೆ ಹಾಗೂ ಕಾಯಕವೇ ಕೈಲಾಸ ಎಂಬುವುದು. ಸಮಾನತೆ ಮಾತನಾಡುವಾಗ ಹೆಣ್ಮಕ್ಕಳು ಸ್ವಲ್ಪು ತಮ್ಮ ಹಕ್ಕುಗಳನ್ನು ಹಾಗೂ ಸಮ್ಮಾನವನ್ನು ಪಡೆದುಕೊಳ್ಳಬೇಕು. ಆತ್ಮ ಸಮ್ಮಾನ ಇಲ್ಲದಿದ್ದರೇ ಏನೂ ಇಲ್ಲ. ಮನೆಯ ಒಳಗೆಯಾಗಲಿ, ಹೊರಗೆಯಾಗಲಿ ತಮ್ಮ ಹಕ್ಕುಗಳನ್ನು ಗುರುತಿಸಿಕೊಳ್ಳಬೇಕು, ಸಮ್ಮಾನವನ್ನು ಪಡೆದುಕೊಳ್ಳಬೇಕು.
-ಡಾ.ಅಶ್ವಿನಿ ಹಿರೇಮಠ, ಜೀವನ ಜ್ಯೋತಿ ಹಾರ್ಟ್ ಆ್ಯಂಡ್ ಬ್ರೆನ್ ಕ್ಲಿನಿಕ್ ಹಾಗೂ ಆರೋಗ್ಯಧಾಮ ಹಾಸ್ಪಿಟಲ್‌ನ ಖ್ಯಾತ ವೈದ್ಯರು.ನಮ್ಮ ವಿಜಯಪುರದ ಜಾಲಹಳ್ಳಿ ಮಠದಲ್ಲಿ ಸಿದ್ಧಾಂತ ಶಿಖಾಮಣಿಯನ್ನು ಶ್ರೀಗಳು ಬಿಡುಗಡೆ ಮಾಡಿದರು. ಸಿದ್ಧಾಂತ ಶಿಖಾಮಣಿ ನಮ್ಮ ಧರ್ಮಗ್ರಂಥ, ಪವಿತ್ರ ಗ್ರಂಥ ಎಂದು ನಾವೆಲ್ಲವೂ ಭಾವಿಸಿದ್ದೇವೆ. ಅದನ್ನು ನಾವೆಲ್ಲರೂ ಇಂದಿಗೂ ಪಠಣ ಮಾಡುತ್ತಿದ್ದೇವೆ.
-ವಿದ್ಯಾ ಬಲವಂತಪ್ಪ ಕೋಟೆನ್ನವರ, ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದ ಸುವರ್ಣ ಸಾಧಕಿ ಪ್ರಶಸ್ತಿ ಪುರಸ್ಕೃತೆ.