ದೈವರಾಧನೆಯಿಂದ ಮಾನಸಿಕ ನೆಮ್ಮದಿ ಲಭ್ಯ

| Published : May 29 2024, 12:51 AM IST

ಸಾರಾಂಶ

ಸೂಲಿಬೆಲೆ: ಇಂದಿನ ಒತ್ತಡದ ಬುದುಕಿನಲ್ಲಿ ನೆಮ್ಮದಿ ಕಾಣಲು ದೈವರಾಧನೆಯಿಂದ ಮಾತ್ರ ಸಾಧ್ಯ ಎಂದು ಸೊಣ್ಣಹಳ್ಳಿಪುರ ಬಸವೇಶ್ವರ ದೇಗುಲದ ಮುಖ್ಯಸ್ಥ ಪಟೇಲ್ ನಾರಾಯಣಗೌಡ ಹೇಳಿದರು.

ಸೂಲಿಬೆಲೆ: ಇಂದಿನ ಒತ್ತಡದ ಬುದುಕಿನಲ್ಲಿ ನೆಮ್ಮದಿ ಕಾಣಲು ದೈವರಾಧನೆಯಿಂದ ಮಾತ್ರ ಸಾಧ್ಯ ಎಂದು ಸೊಣ್ಣಹಳ್ಳಿಪುರ ಬಸವೇಶ್ವರ ದೇಗುಲದ ಮುಖ್ಯಸ್ಥ ಪಟೇಲ್ ನಾರಾಯಣಗೌಡ ಹೇಳಿದರು.

ಹೋಬಳಿಯ ಸೊಣ್ಣಹಳ್ಳಿಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಸವೇಶ್ವರಸ್ವಾಮಿ ೪೧ನೇ ವರ್ಷ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೂರ್ವಜರು ದೇವಸ್ಥಾನಗಳನ್ನು ನೆಮ್ಮದಿ ತಾಣಗಳಾಗಿ ಕಂಡುಕೊಂಡಿದ್ದರು. ಅವುಗಳನ್ನು ನಮಗೂ ಬಳುವಳಿಯಾಗಿ ಬಿಟ್ಟು ಹೋಗಿದ್ದಾರೆ. ಗ್ರಾಮಸ್ಥರು ಪ್ರತಿವರ್ಷ ಇಲ್ಲಿ ದೇವತಾ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮದ ಎಲ್ಲಾ ಜನಾಂಗ ದೇವರ ಆರಾಧನೆ ಮಾಡುತ್ತೇವೆ ಎಂದರು.

ಗ್ರಾಪಂ ಅಧ್ಯಕ್ಷೆ ಭಾರತಿದೇವರಾಜ್ ಮಾತನಾಡಿ, ಗ್ರಾಮ ದೇವರಾದ ಬಸವೇಶ್ವರಸ್ವಾಮಿ ಆರಾಧನೆಯಿಂದ ಗ್ರಾಮದ ಸುಭಿಕ್ಷವಾಗಿದೆ ಎಂದರು.

ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶ್ರೀನಿವಾಸಮೂರ್ತಿ ಮಾತನಾಡಿ, ಜಯಂತ್ಯುತ್ಸವದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ, ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಅಖಂಡ ಭಜನೆ, ಸಂಗೀತ, ವೀರಗಾಸೆ ಕುಣಿತ ಹಮ್ಮಿಕೊಳ್ಳಲಾಗುತ್ತದೆ, ಅಗ್ನಿಕುಂಡ ಹಾಯ್ದು ದೇವರಿಗೆ ಹರಕೆ ಸಲ್ಲಿಸಲಾಗುತ್ತದೆ ಎಂದರು.

ಸೊಣ್ಣಹಳ್ಳಿಪುರ ಉತ್ತನಳ್ಳಪ್ಪ, ಕೃಷ್ಣಸ್ವಾಮಿ, ನಾಗರಾಜ್ ತಂಡದಿಂದ ಪಂಡರಾಪುರ ಭಜನೆ, ಎಸ್.ವಿ.ರವಿಚಂದ್ರ ತಂಡದಿಂದ ವೀರಗಾಸೆ ಕುಣಿತ, ಭಜನೆ, ಭಕ್ತಿಗೀತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಬಸವೇಶ್ವರ ವಿಗ್ರಹಕ್ಕೆ ಬೆಣ್ಣೆ (ನವನೀತ) ಅಲಂಕಾರ ಸೇವೆ ಮಾಡಲಾಗಿತ್ತು. ಶಿವನ ವಿಗ್ರಹಕ್ಕೆ ಹೂವಿನ ಅಲಂಕಾರ ದೇವಾಲಯಕ್ಕೆ ವಿದ್ಯುತ್ ದೀಪಾಲಕಾರ, ಅನ್ನಸಂತರ್ಪಣೆ ನಡೆಯಿತು.

ಗ್ರಾಪಂ ಮಾಜಿ ಅಧ್ಯಕ್ಷ ಮುನಿನಂಜೇಗೌಡ, ಸದಸ್ಯೆ ಲಲಿತಾನಾರಾಯಣಸ್ವಾಮಿ, ನಾಗೇಶ್, ಅರ್ಚಕ ವೀರಭದ್ರಯ್ಯ, ನಾಟಕ ಮೇಷ್ಟ್ರುಆಂಜಿನಪ್ಪ ಇತರರಿದ್ದರು. (ಚೆನ್ನಾಗಿರುವ ಫೋಟೋ ಮಾತ್ರ ಬಳಸಿ)

ಚಿತ್ರ; ೨೮ ಸೂಲಿಬೆಲೆ ೧ ಜೆಪಿಜೆ ನಲ್ಲಿದೆ

ಚಿತ್ರ; ೨೮ ಸೂಲಿಬೆಲೆ ೨ ಜೆಪಿಜೆ ನಲ್ಲಿದೆ

ಚಿತ್ರ; ೨೮ ಸೂಲಿಬೆಲೆ ೩ ಜೆಪಿಜೆ ನಲ್ಲಿದೆ

ಚಿತ್ರ; ೨೮ ಸೂಲಿಬೆಲೆ ೪ ಜೆಪಿಜೆ ನಲ್ಲಿದೆ