ಮೀಟರ್ ಬಡ್ಡಿ ದಂಧೆ: ಯುವಕ ನೇಣಿಗೆ ಶರಣು

| Published : Jul 02 2025, 12:21 AM IST

ಮೀಟರ್ ಬಡ್ಡಿ ದಂಧೆ: ಯುವಕ ನೇಣಿಗೆ ಶರಣು
Share this Article
  • FB
  • TW
  • Linkdin
  • Email

ಸಾರಾಂಶ

ಈತ ಖಾಸಗಿ ವ್ಯಕ್ತಿಗಳಿಂದ ಮೀಟರ್ ಬಡ್ಡಿಗೆ ಸಾಲ ಪಡೆದಿದ್ದು, ಸುಮಾರು 15 ಲಕ್ಷ ರು. ಸಾಲ ಮಾಡಿಕೊಂಡಿದ್ದರೆನ್ನಲಾಗಿದೆ.

ಪಾವಗಡ:

ಮೀಟರ್ ಬಡ್ಡಿ ದಂಧೆಕೋರರ ಕಿರುಕುಳದಿಂದ ಯುವಕನೊಬ್ಬ ಬೇಸತ್ತು ನೇಣಿಗೆ ಶರಣಾದ ಘಟನೆ ಸೋಮವಾರ ತಾಲೂಕಿನ ನಾಗಲಾಪುರ ಗ್ರಾಮದಲ್ಲಿ ನಡೆದಿದೆ.ನಾಗಲಾಪುರ ಗ್ರಾಮದ ಮಂಜುನಾಥ ವೈ.ಟಿ. (38) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಈತ ಖಾಸಗಿ ವ್ಯಕ್ತಿಗಳಿಂದ ಮೀಟರ್ ಬಡ್ಡಿಗೆ ಸಾಲ ಪಡೆದಿದ್ದು, ಸುಮಾರು 15 ಲಕ್ಷ ರು. ಸಾಲ ಮಾಡಿಕೊಂಡಿದ್ದರೆನ್ನಲಾಗಿದೆ. ಅಲ್ಲದೇ ಸಾಲಕ್ಕೆ ಲಕ್ಷಾಂತರ ರು.ಗಳ ಬಡ್ಡಿ ಸಹ ಕಟ್ಟಿದ್ದ. ಆದರೂ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ತಪ್ಪಿರಲಿಲ್ಲ.

ಇದರ ಜತೆ ಊರಿನಲ್ಲಿ ಕೈ ಸಾಲ ಪಡೆದಿದ್ದು ಆತ ಒಂದು ವಾರಕ್ಕೆ 15ರಿಂದ 25 ಸಾವಿರ ಬಡ್ಡಿ ಕಟ್ಟಬೇಕಾದ ಸ್ಥಿತಿಯಲ್ಲಿದ್ದು, ಅದನ್ನು ನಿರ್ವಹಿಸಲು ಸಾಧ್ಯವಾಗದೇ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಈ ಸಂಬಂಧ ತಾಲೂಕಿನ ವೈ.ಎನ್. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಗಲಾಪುರ ಗ್ರಾಮದಲ್ಲಿ ಮೀಟರ್ ಬಡ್ಡಿ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ಈ ದಂಧೆ ನಡೆಸುವವರನ್ನು ಪತ್ತೆ ಕಡಿವಾಣ ಹಾಕಬೇಕು. ಇದೇ ರೀತಿ ಮುಂದುವರಿದರೆ ಇನ್ನೂ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು. ಈ ಹಿನ್ನೆಲೆಯಲ್ಲಿ ಮೀಟರ್‌ ಬಡ್ಡಿ ದಂಧೆಕೋರರ ವಿರುದ್ಧ ರೌಡಿಶೀಟರ್ ಒಪನ್‌ ಮಾಡಿ ನಿಯಂತ್ರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವೈ.ಎನ್. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಫೋಟೋ 1ಪಿವಿಡಿ3

ಮೀಟರ್ ಬಡ್ಡಿಗೆ ಬೇಸತ್ತು ಶೇಣಿಗೆ ಶರಣಾದ ವೈ.ಟಿ.ಮಂಜುನಾಥ್,