ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಹಾಲು ಉತ್ಪಾದಕರಿಗೆ ಸಬ್ಸಿಡಿಕೊಡುವುದಾಗಿ ಘೋಷಿಸಿದ್ದ ಕಾಂಗ್ರೆಸ್ ಸರ್ಕಾರ ಇದುವರೆಗೂ ನೀಡಿಲ್ಲ. ಈ ಮೂಲಕ ರೈತರಿಗೆ ವಂಚನೆ ಮಾಡಲಾಗಿದೆಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧಜಿಲ್ಲಾ ಬಿಜೆಪಿ ವತಿಯಿಂದ ನಗರದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ನಗರದ ತಾಲೂಕು ಕಚೇರಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.ಈ ವೇಳೆ ಮಾತನಾಡಿದ ಮಾಜಿ ಶಾಸಕ ಎಸ್. ಬಾಲರಾಜು, ರಾಜ್ಯದ ಕಾಂಗ್ರೆಸ್ ಸರ್ಕಾರ. ಹಾಲು ಉತ್ಪಾದಕರಿಗೆ ೭ ರು, ಸಬ್ಸಿಡಿ ಹೆಚ್ಚಳ ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದು ಈಗ ಸಾಲವನ್ನು ನೀಡುತ್ತಿಲ್ಲ, ಸಬ್ಸಿಡಿಯನ್ನೂ ಕೊಡುತ್ತಿಲ್ಲ ಎಂದು ಆರೋಪಿಸಿದರು.
ರೈತರಿಗೆ ಹಾಲಿನ ಸಬ್ಸಿಡಿಯಾಗಿ 716 ಕೋಟಿ ರು. ನೀಡಬೇಕಿದ್ದು. ಆ ಬಾಕಿ ಹಣವನ್ನೂ ನೀಡದೆ ಹಾಗೇ ಉಳಿಸಿಕೊಂಡಿದೆ ಇದರ ಪರಿಣಾಮರಾಜ್ಯದಲ್ಲಿ ಹಾಲಿನ ಉತ್ಪಾದನೆಯು ಭಾರಿ ಪ್ರಮಾಣದಲ್ಲಿ ಕುಂಠಿತವಾಗಿದೆ ಎಂದರುಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರೈತರಿಗೆ ಕೊಡಬೇಕಾದ ಸಬ್ಸಿಡಿ ಹಣವನ್ನು 2023 ಜುಲೈನಿಂದ ಇಲ್ಲಿಯವರೆಗೆ ನೀಡಲಾಗಿಲ್ಲ. ಈಗ ಅದರ ಮೊತ್ತವೇ 716 ಕೋಟಿ ರು. ಆಗಿದೆ, ಸುಳ್ಳು ಗ್ಯಾರಂಟಿಗಳನ್ನು ನೀಡಿ ಯಾವುದೇ ಗ್ಯಾರಂಟಿಯನ್ನು ಪೂರ್ಣ ಮಾಡದೇ ಜನರಿಗೆ ಮೋಸ ಮಾಡುತ್ತಿದೆ ಎಂದರು. ರೈತರಿಗೆ ಕೊಡಬೇಕಾದ ಹಣವನ್ನುಕೊಡಲು ನಿಮ್ಮ ಬಳಿ ಆಗುವುದಿಲ್ಲ ಎಂದರೆ ಕುರ್ಚಿ ಬಿಟ್ಟು ನಡೆಯಿರಿ, ಈಗಾಗಲೇ ಜನರು ನಿಮ್ಮ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ ಎಂದರು.ತಕ್ಷಣ ಹಾಲು ಉತ್ಪಾದಕರಿಗೆ ಸಬ್ಸಿಡಿ ನೀಡಿ, ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಈ ವೇಳೆ ಮೂಡ್ನಾಕೂಡು ಪ್ರಕಾಶ್, ವಿರಾಟ್ ಶಿವು, ಶಿವರಾಜ್, ನಾಗು ರಮೇಶ್, ಅರಕಲವಾಡಿ ಮಹೇಶ್, ಆರ್.ಸುಂದರ್, ರಾಜು, ಕುಮಾರ್, ಭಾನುಪ್ರಕಾಶ್, ಬೇಡರಪುರ ಬಸವಣ್ಣ, ಸೂರ್ಯ, ಇತರರು ಭಾಗವಹಸಿದ್ದರು.