ಸಮುದ್ರ ಸೇರಿದ 42 ಕಡಲಾಮೆ ಮರಿಗಳು

| Published : Feb 07 2024, 01:46 AM IST

ಸಾರಾಂಶ

ಕಾರವಾರದ ದೇವಬಾಗ ಕಡಲ ತೀರದಲ್ಲಿ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಮಂಗಳವಾರ ಬಿಡಲಾಯಿತು. ಡಿ. 16ರಂದು ಆಮೆಗಳು ತೀರಕ್ಕೆ ಬಂದು ಮೊಟ್ಟೆ ಇಟ್ಟಿದ್ದವು. 96 ಮೊಟ್ಟೆಗಳ ಪೈಕಿ 42 ಮೊಟ್ಟೆಗಳಿಂದ ಹೊರಬಂದ ಮರಿಗಳನ್ನು ಸಮುದ್ರಕ್ಕೆ ಬಿಡಲಾಯಿತು.

ಕಾರವಾರ:

ಇಲ್ಲಿನ ದೇವಬಾಗ ಕಡಲ ತೀರದಲ್ಲಿ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಮಂಗಳವಾರ ಬಿಡಲಾಯಿತು.

ಡಿ. 16ರಂದು ಆಮೆಗಳು ತೀರಕ್ಕೆ ಬಂದು ಮೊಟ್ಟೆ ಇಟ್ಟಿದ್ದವು. 96 ಮೊಟ್ಟೆಗಳ ಪೈಕಿ 42 ಮೊಟ್ಟೆಗಳಿಂದ ಹೊರಬಂದ ಮರಿಗಳನ್ನು ಸಮುದ್ರಕ್ಕೆ ಬಿಡಲಾಯಿತು. 45-50 ದಿನಗಳಿಗೆ ಮೊಟ್ಟೆಗಳಿಂದ ಮರಿಗಳು ಹೊರಬರುತ್ತವೆ. ಸಾಮಾನ್ಯವಾಗಿ ಶೇ. 50-60 ಮೊಟ್ಟೆಗಳು ಮರಿಗಳಾಗುತ್ತವೆ. ಕಳೆದ ಡಿಸೆಂಬರ್‌ನಲ್ಲಿ ಮೊಟ್ಟೆಯಿಟ್ಟವುಗಳಲ್ಲಿ ಶೇ. 40ರಷ್ಟು ಮರಿಗಳಾಗಿವೆ. ಒಂದೆರಡು ದಿನದಲ್ಲಿ ಉಳಿದ ಮೊಟ್ಟೆಗಳಿಂದ ಮರಿಗಳು ಹೊರಬರಲಿವೆ.

ಕಳೆದ ಬಾರಿ ನವೆಂಬರ್‌ನಿಂದ ಫೆಬ್ರುವರಿ ವರೆಗೆ 44 ಕಡೆಗಳಲ್ಲಿ ಕಡಲಾಮೆಗಳು ಮೊಟ್ಟೆ ಇಟ್ಟಿದ್ದವು. ಪ್ರಸಕ್ತ ವರ್ಷ ಈ ವರೆಗೆ 26 ಕಡೆಗಳಲ್ಲಿ ಮೊಟ್ಟೆ ಇರಿಸಿದ್ದು, ಫೆಬ್ರುವರಿ ತಿಂಗಳ ಕೊನೆಯವರೆಗೂ ಕಡಲಾಮೆಗಳು ಮೊಟ್ಟೆ ಇಡುತ್ತವೆ. ಈ ಮೊಟ್ಟೆಗಳು ಮೇ ಕೊನೆಯವರೆಗೂ ಮರಿಗಳಾಗಿ ಹೊರಬರುತ್ತವೆ.ಆಮೆಗಳು ಮೊಟ್ಟೆ ಇಟ್ಟು ವಾಪಸ್ ಸಮುದ್ರಕ್ಕೆ ತೆರಳುತ್ತವೆ. ತೀರದಲ್ಲಿ ಇರುವ ಮೊಟ್ಟೆಗಳನ್ನು ಅರಣ್ಯ ಇಲಾಖೆಯಿಂದ ಆ ಪ್ರದೇಶದಲ್ಲೇ ಸಂರಕ್ಷಿಸಲು ಪ್ರಯತ್ನಿಸಲಾಗುತ್ತವೆ. ಒಂದು ವೇಳೆ ಮೊಟ್ಟೆಯಿಟ್ಟ ಪ್ರದೇಶ ಸುರಕ್ಷಿತವಾಗಿಲ್ಲ. ಮೊಟ್ಟೆಗಳಿಗೆ ತೊಂದರೆಯಾಗುವಂತಿದ್ದರೆ ಅವುಗಳನ್ನು ಸ್ಥಳಾಂತರ ಮಾಡಲಾಗುತ್ತದೆ.