ಕೊಳ್ಳೇಗಾಲ, ಹನೂರು ಮಂಡಲಕ್ಕೆ ಅಧ್ಯಕ್ಷ ನೇಮಕ

| Published : Feb 07 2024, 01:46 AM IST

ಕೊಳ್ಳೇಗಾಲ, ಹನೂರು ಮಂಡಲಕ್ಕೆ ಅಧ್ಯಕ್ಷ ನೇಮಕ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯ ಕೊಳ್ಳೇಗಾಲ ನಗರ ಮಂಡಲ ಅಧ್ಯಕ್ಷರಾಗಿ ನಗರಸಭೆ ಮಾಜಿ ಅಧ್ಯಕ್ಷ ಪರಮೇಶ್ವರಯ್ಯ ಮತ್ತು ಹನೂರು ಮಂಡಲ ಅದ್ಯಕ್ಷರಾಗಿ ಕಣ್ಣೂರು ಗ್ರಾಮದ ವೃಷಬೇಂದ್ರಸ್ವಾಮಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೂಚನೆ ಮೇರೆಗೆ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್ ನೇಮಿಸಿ ಆದೇಶಿದ್ದಾರೆ

ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ

ಬಿಜೆಪಿಯ ಕೊಳ್ಳೇಗಾಲ ನಗರ ಮಂಡಲ ಅಧ್ಯಕ್ಷರಾಗಿ ನಗರಸಭೆ ಮಾಜಿ ಅಧ್ಯಕ್ಷ ಪರಮೇಶ್ವರಯ್ಯ ಮತ್ತು ಹನೂರು ಮಂಡಲ ಅದ್ಯಕ್ಷರಾಗಿ ಕಣ್ಣೂರು ಗ್ರಾಮದ ವೃಷಬೇಂದ್ರಸ್ವಾಮಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೂಚನೆ ಮೇರೆಗೆ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್ ನೇಮಿಸಿ ಆದೇಶಿದ್ದಾರೆ. ಪರಮೇಶ್ವರಯ್ಯ ಕೊಳ್ಳೇಗಾಲ ನಗರಸಭೆಗೆ ಸತತ 3ಬಾರಿ ಸದಸ್ಯರಾಗಿ ಆರಿಸಿ ಬರುವ ಮೂಲಕ ಹ್ಯಾಟ್ರಿಕ್ ಗೆಲುವು ಕಂಡ ಸದಸ್ಯ ಎಂಬ ಖ್ಯಾತಿಗೆ ಭಾಜನರಾಗಿದ್ದರು. ಈ ವೇಳೆ ಮಾತನಾಡಿದ ಪರಮೇಶ್ವರಯ್ಯ ನನ್ನ ಮಂಡಲ ಅಧ್ಯಕ್ಷ ಸ್ಥಾನ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಅಭಿನಂದಿಸುವೆ. ತಳಹಂತದಿಂದ ಪಕ್ಷದ ಸಂಘಟನೆಗೆ ಮುಂದಾಗುವೆ, ಜವಾಬ್ದಾರಿ ಅರಿತು ಪಕ್ಷದ ಸಂಘಟನೆಗೆ ಪ್ರಮಾಣಿಕವಾಗಿ ಮುಂದಾಗುವೆ ಎಂದು ಹೇಳಿದರು.ಮಾದರಿ ರೈತ ವೖಷಬೇಂದ್ರಸ್ವಾಮಿ

ಹನೂರು ಮಂಡಲ ಅಧ್ಯಕ್ಷರಾಗಿ ನೇಮಕಗೊಂಡಿರುವ ವೃಷಬೇಂದ್ರಸ್ವಾಮಿ ಈಗಾಗಲೇ ಮಾದರಿ ರೈತರಾಗಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೖಷಿ ವಿಶ್ವ ವಿದ್ಯಾನಿಲಯ ನೀಡುವ ಮಾದರಿ ರೈತ ಪ್ರಶಸ್ತಿ, ಸುತ್ತೂರು ಶ್ರೀಕ್ಷೇತ್ರದಲ್ಲಿ ನೀಡುವ ಯುವ ರೈತ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ 2014ರಲ್ಲಿ ಒಣ ಬೇಸಾಯದ ಕುರಿತು ವೖಷಬೇಂದ್ರ ನೀಡಿದ ಸಂದರ್ಶನ ಆಕಾಶವಾಣಿಯಲ್ಲಿ ಪ್ರಸಾರವಾಗಿ ಗಮನ ಸೆಳೆದಿತ್ತು. ಅಲ್ಲದೆ ಈಗಾಗಲೇ ಹನೂರು ಮಂಡಲ ಯುವ ಮೋರ್ಚಾ ಅಧ್ಯಕ್ಷರಾಗಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಬಳಿಕ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಪಕ್ಷ ಹನೂರು ಮಂಡಲಕ್ಕೆ ನನ್ನನ್ನು ಅಧ್ಯಕ್ಷರಾಗಿ ನೇಮಿಸಿಜವಾಬ್ದಾರಿಯುತ ಸ್ಥಾನ ನೀಡಿದೆ. ಎಲ್ಲರ ವಿಶ್ವಾಸಗಳಿಸಿ ಬೂತ್ ಮಟ್ಟದಲ್ಲಿ ವಾಸ್ತವ್ಯ ಹೂಡುವ ಜೊತೆಗೆ ಸಂಘಟನೆಗೆ ಮುಂದಾಗುವೆ ಎನ್ನುತ್ತಾರೆ ವೖಷಬೇಂದ್ರಸ್ವಾಮಿ.