ಕಡೂರುರಾಗಿ ಖರೀದಿಗೆ ಇರುವ ಮಾನದಂಡಗಳನ್ನು ಅನುಸರಿಸಿಯೇ ಖರೀದಿ ನಡೆಯುತ್ತಿದೆ. ರೈತರು ಗೊಂದಲಕ್ಕೆ ಒಳಗಾಗುವುದು ಬೇಡ. ಹೆಚ್ಚಿನ ಪ್ರಮಾಣದ ರಾಗಿ ನೀಡುವಾಗ ರೈತರು ಸಮರ್ಪಕ ದಾಖಲೆ ಒದಗಿಸಿದರೆ ಮಾತ್ರ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು.
ಕಡೂರು ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳ ಭೇಟಿ
ಕನ್ನಡಪ್ರಭ ವಾರ್ತೆ, ಕಡೂರುರಾಗಿ ಖರೀದಿಗೆ ಇರುವ ಮಾನದಂಡಗಳನ್ನು ಅನುಸರಿಸಿಯೇ ಖರೀದಿ ನಡೆಯುತ್ತಿದೆ. ರೈತರು ಗೊಂದಲಕ್ಕೆ ಒಳಗಾಗುವುದು ಬೇಡ. ಹೆಚ್ಚಿನ ಪ್ರಮಾಣದ ರಾಗಿ ನೀಡುವಾಗ ರೈತರು ಸಮರ್ಪಕ ದಾಖಲೆ ಒದಗಿಸಿದರೆ ಮಾತ್ರ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು.
ಕಡೂರು ಎಪಿಎಂಸಿ ಪ್ರಾಂಗಣದಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ಸೋಮವಾರ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಭೇಟಿ ನೀಡಿ ಖರೀದಿಸಿದ ರಾಗಿಯನ್ನು ಕ್ಲೀನ್ ಮಾಡಿ ಗೋದಾಮುಗಳಿಗೆ ದಾಸ್ತಾನು ಮಾಡುವ ಕಟ್ಟೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಜಿಲ್ಲೆಯಾದ್ಯಂತ ರಾಗಿ ಖರೀದಿ ಕೇಂದ್ರಗಳಲ್ಲಿ ಖರೀದಿ ಮಾನ ದಂಡಗಳ ಮೂಲಕ ಖರೀದಿಸಿ ರೈತರಿಗೆ ಅನ್ಯಾಯವಾಗದಂತೆ ಕ್ರಮ ವಹಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಯಾವುದೇ ಗೊಂದಲಕ್ಕೆ ಅವಕಾಶ ಆಗದಂತೆ ನಿರ್ದೇಶನ ನೀಡಲಾಗಿದೆ. ಈ ಸಂಭಂದ ಅಧಿಕಾರಿಗಳು ಆಗಾಗ ತಮಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದೇನೆ. ಈ ನಿಟ್ಟಿನಲ್ಲಿ ಖರೀದಿ ಕೇಂದ್ರಗಳಿಗೆ ಭೇಟಿ ನೀಡುತ್ತಿರುವುದಾಗಿ ವಿವಿರಿಸಿದರು.
ನಮ್ಮ ಜಿಲ್ಲೆಯ ಯಾವುದೇ ಭಾಗದಿಂದ ರೈತರು ರಾಗಿ ತಂದರೆ ಖರೀದಿ ಮಾಡಲಾಗುವುದು. ರೈತರಿಗೆ ಅನುಕೂಲ ವಾಗಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ರೈತರಿಂದ ಯಾವುದೇ ಹಣ ಪಡೆಯುವಂತಿಲ್ಲ ಹಾಗೇನಾದರೂ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಖರೀದಿಗೆ ಸಂಭಂದಿಸಿದಂತೆ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲು ಹೆಚ್ಚುವರಿ ಕೆಲಸಗಾರರು ಮತ್ತು ಸಿಬ್ಬಂದಿ ಅಗತ್ಯವಿದ್ದಲ್ಲಿ ನೇಮಕ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.ಇನ್ನು ಹದಿನೈದು ದಿನ ನೋಡಿಕೊಂಡು ಹೆಚ್ಚುವರಿ ರಾಗಿ ಇದ್ದಲ್ಲಿ ಖರೀದಿ ದಿನಾಂಕ ವಿಸ್ತರಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು. ಮೊದಲು ಬಂದು ಟೋಕನ್ ಪಡೆದವರಿಗೆ ಆದ್ಯತೆ ನೀಡಿ, ಆನಂತರ ಬಂದ ಹೊಸ ರೈತರಿಗೂ ಖರೀದಿಗೆ ಟೋಕನ್ ನೀಡಲಾಗುವುದು ಎಂದರು.
-- ಬಾಕ್ಸ್ ಸುದ್ದಿಗೆ--ರೈತರ ದೂರು ಆಲಿಸಿದ ಡಿಸಿ
ರೈತರು ಜಿಲ್ಲಾಧಿಕಾರಿಗಳ ಬಳಿ ವರ್ತಕರು ರಾಗಿ ತಂದು ಹಾಕುತ್ತಿದ್ದರೆ ಎಂದು ನೀಡಿದ ದೂರಿನ ಬಗ್ಗೆ ಗಂಭೀರವಾಗಿ ಗಮನಹರಿಸುವಂತೆ ಡಿ.ಸಿ ಯವರು ಸೂಚನೆ ನೀಡಿದರು. ಈ ಕುರಿತು ಬಂದ ದೂರುಗಳ ಬಗ್ಗೆ ಗಂಭೀರ ಕ್ರಮ ವಹಿಸುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಇದೇ ಸಂಧರ್ಭದಲ್ಲಿ ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ, ಆಹಾರ ಇಲಾಖೆ ಶಿರಸ್ತೇದಾರ್ ಶ್ರೀನಿವಾಸ್, ಖರೀದಿ ಕೇಂದ್ರದ ಅಧಿಕಾರಿ ವೆಂಕಟೇಶ್, ಎಪಿಎಂಸಿ ಕಾರ್ಯದರ್ಶಿ ಎಂ.ಧರ್ಮಣ್ಣ ಸೇರಿದಂತೆ ರೈತರು ಅಧಿಕಾರಿಗಳು ಇದ್ದರು.
16 ಕೆಕೆಡಿಯು1.ಕಡೂರು ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿರುವ ರಾಗಿ ಖರೀದಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದರು.