ಸಾರಾಂಶ
ಹುಮನಾಬಾದ ಪೊಲೀಸರಿಂದ ಜಪ್ತಿ ಮಾಡಿಕೊಂಡಿರುವ ಬೈಕ್‌ಗಳ ಜೊತೆಯಲ್ಲಿ ಎಸ್ಪಿ ಪ್ರದೀಪ ಗುಂಟಿ ಮತ್ತಿತರರು ಇದ್ದಾರೆ.
ಕನ್ನಡಪ್ರಭ ವಾರ್ತೆ ಹುಮನಾಬಾದ್
ಹುಮನಾಬಾದ ಪೊಲೀಸ್ ಠಾಣೆ ವ್ಯಾಪ್ತಿ ಹಾಗೂ ಚಿಟಗುಪ್ಪಾ ತಾಲೂಕಿನ ಬೆಂಬಳಖೇಡಾ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆ ದ್ವಿಚಕ್ರ ವಾಹನಗಳ ಕಳವು ಪ್ರಕರಣಕ್ಕೆ ಸಂಬಂಧಿತ 10 ದ್ವಿಚಕ್ರ ಹಾಗೂ ಒಂದು ಅಪ್ಪೆ ಆಟೋ ವಾಹನ ಜಪ್ತಿ ಮಾಡಿಕೊಂಡಿದ್ದು, ಕಳವು ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕು ಜನ ಆರೋಪಿಗಳನ್ನು ಹಾಗೂ ನಗದು ಹಣ ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪಕುಮಾರ ಗುಂಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹಾಗೂ ಪೊಲೀಸ್ ಉಪಾಧೀಕ್ಷಕ ಜೆ.ಎಸ್ ನ್ಯಾಮೇಗೌಡರ್ ಅವರ ಮಾರ್ಗದರ್ಶನದಲ್ಲಿ, ಹುಮನಾಬಾದ ಸಿಪಿಐ ಗುರುಲಿಂಗಪ್ಪಗೌಡ ಪಾಟೀಲ್ ನೇತೃತ್ವದಲ್ಲಿ ಹುಮನಾಬಾದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂತರ ರಾಜ್ಯ ನಾಲ್ಕು ಜಹಿರಾಬಾದ, ಎರಡು ಚಿರಾಗಪಲ್ಲಿ, ಒಂದು ಸಂಗಾರೆಡ್ಡಿ ಯಿಂದ ದ್ವಿಚಕ್ರ ವಾಹನ ಕಳುವು ಮಾಡಿ ತಂದು ಮಾರಾಟ ಮಾಡುತ್ತಿದ್ದು ಸಂಶಾಯಾಸ್ಪದ ಮೇರೆಗೆ ಪೊಲೀಸ್ ಸಿಬ್ಬಂದಿ ಬಸವರೆಡ್ಡಿ, ಶಿವಶರಣ, ಸೂರ್ಯಕಾಂತ, ನಾಗೇಶ ಆರೋಪಿಗಳನ್ನು ಬಂಧಿಸಿ ₹2.60 ಲಕ್ಷ ಮೌಲ್ಯದ 7 ದ್ವಿಚಕ್ರ ವಾಹನ ಜಪ್ತಿ ಮಾಡಿಕೊಂಡಿದ್ದಾರೆ.
ಚಿಟಗುಪ್ಪ ಸಿಪಿಐ ಶ್ರೀನಿವಾಸ ಅಲ್ಲಾಪೂರ ನೇತೃತ್ವದಲ್ಲಿ ಚಿಟಗುಪ್ಪ ತಾಲೂಕಿನ ಬೇಮಳಖೇಡಾ ಪೊಲೀಸ್ ಠಾಣೆ ಪಿಎಸ್‌ಐ ನಿಂಗಪ್ಪ ಮಣ್ಣೂರ ಸಿಬ್ಬಂದಿ ಅಂಬರೇಶ, ಲಕ್ಷ್ಮಿಕಾಂತ, ರೂಬೇನ, ಮಾಣಿಕ, ಸಿದ್ದಾರೊಡ ಇವರಿಂದ ದೇವಗೀರಿ ತಾಂಡ ದುರ್ಗಮ್ಮಾ ದೇವಸ್ಥಾನದ ಹುಂಡಿಯಿಂದ ₹78 ಸಾವಿರ, ಚಿಟಗುಪ್ಪಾ ಮಡಿವಾಳ ದೇವಸ್ಥಾನದ ಹುಂಡಿಯಿಂದ ₹10 ಸಾವಿರ ಹಾಗೂ ಉಡಬಾಳ ಯಲ್ಲಮ್ಮನ ದೇವಸ್ಥಾನದ ಹುಂಡಿಯಿಂದ ₹25 ಸಾವಿರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ ತಾಲೂಕಿನ ರೇಕುಳಗಿ ಗ್ರಾಮದ ಓರ್ವ, ತಾಲೂಕು ಚಿಂಚೋಳಿ ಮೂರು ಜನ ಆರೋಪಿಗಳನ್ನು ಬಂಧಿಸಿ ಮೂರು ದ್ವಿಚಕ್ರ ವಾಹನ ಹಾಗೂ ಒಂದು ಅಪ್ಪಿ ಆಟೋ ವಾಹನ ಹೀಗೆ ₹80 ಸಾವಿರ ನಗದು, 11 ಗ್ರಾಂ. ಬೆಳ್ಳಿ, 1 ಗ್ರಾಂ ಬಂಗಾರ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಂದು ಪೊಲೀಸರು ಮಾಹಿತಿ ನೀಡಿದರು.