ರಾಜ್ಯದ ಲಕ್ಷಾಂತರ ಮಂದಿಗೆ ಇ-ಖಾತಾ ದೊರೆಯಲಿದೆ: ಜಿ.ಎಚ್.ಶ್ರೀನಿವಾಸ್

| Published : Oct 27 2025, 12:15 AM IST

ರಾಜ್ಯದ ಲಕ್ಷಾಂತರ ಮಂದಿಗೆ ಇ-ಖಾತಾ ದೊರೆಯಲಿದೆ: ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ 10200 ಮನೆಗಳಿಗೆ ಇ-ಸ್ವತ್ತು ಇಲ್ಲದ ವಿಚಾರವನ್ನು ವಿಧಾನ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದರಿಂದ ರಾಜ್ಯದ ಲಕ್ಷಾಂತರ ಮಂದಿಗೆ ಇ-ಖಾತಾ ದೊರೆಯಲಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

- ಉಡೇವಾದಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ತರೀಕೆರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ 10200 ಮನೆಗಳಿಗೆ ಇ-ಸ್ವತ್ತು ಇಲ್ಲದ ವಿಚಾರವನ್ನು ವಿಧಾನ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದರಿಂದ ರಾಜ್ಯದ ಲಕ್ಷಾಂತರ ಮಂದಿಗೆ ಇ-ಖಾತಾ ದೊರೆಯಲಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಉಡೇವಾ ಗ್ರಾಮದಲ್ಲಿ ಎಸ್.ಇ.ಪಿ ಹಾಗೂ ಟಿಎಸ್.ಪಿ ಮತ್ತು ಸಾಮಾನ್ಯ ವರ್ಗದ ಯೋಜನೆಯ ₹60 ಲಕ್ಷ ಅನುದಾನದಲ್ಲಿ ಕೈಗೊಳ್ಳಲಿರುವ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿ ಇ-ಸ್ವತ್ತು ಇಲ್ಲದ ಕಾರಣ ಫಲಾನುಭವಿಗಳ ತಂದೆ ತಾಯಿಯರ ಹೆಸರಿನಲ್ಲಿದ್ದ ಮನೆ ಮತ್ತು ಖಾಲಿ ನಿವೇಶನಗಳ ವರ್ಗಾವಣೆ, ಬ್ಯಾಂಕು ಮತ್ತು ಇತರೆಡೆಗಳಿಂದ ಸಾಲ ಸೌಲಭ್ಯ ಸಿಗದೆ ಹೊಸ ಮನೆಗಳ ನಿರ್ಮಾಣ, ಇನ್ನಿತರ ಗೃಹ ಕೃತ್ಯದ ಅಗತ್ಯ ಗಳಿಗಾಗಲೀ ತೊಂದರೆಯಾಗುತ್ತಿತ್ತು. ಕಂದಾಯ ಗ್ರಾಮಗಳನ್ನಾಗಲೀ, ಉಪ ಕಂದಾಯ ಗ್ರಾಮಗಳನ್ನಾಗಲಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ವಿಷಯ ಅರಿತ ತಾವು ಇದನ್ನು ಪ್ರಸ್ತಾಪಿಸಿದ್ದೆವು ಎಂದರು.

ಉಡೇವಾ ಗ್ರಾಪಂ ವ್ಯಾಪ್ತಿಯಲ್ಲಿ 8 ಚಕ್ ಡ್ಯಾಂಗಳನ್ನು ನಿರ್ಮಾಣ ಮಾಡಿರುವುದರಿಂದ ಮಳೆಯ ನೀರು ವ್ಯರ್ಥವಾಗಿ ಹೋಗದೇ ಭೂಮಿಯಲ್ಲಿ ಅಂತರ್ ಜಲ ಮಟ್ಟ ಹೆಚ್ಚಾಗಿದ್ದು, ಗ್ರಾಮಸ್ಥರಿಗೆ ಅನುಕೂಲವಾಗಿದೆ. ಉಡೇವಾ ಗ್ರಾಮದ ವ್ಯಾಪ್ತಿಯಲ್ಲಿ ₹ 3.80 ಕೋಟಿ ಅಂದಾಜು ವೆಚ್ಚದಲ್ಲಿ ನೀರು ಮರುಪೂರಣ ಯೋಜನೆ ಜಾರಿಗೊಳಿಸಲಾಗಿದೆ. ಸದ್ಯ ನಡೆಯುತ್ತಿರುವ ಸಿಸಿ ಕಾಮಗಾರಿ ಪೂರ್ಣಗೊಂಡರೆ ಇಡೀ ಗ್ರಾಮದ ರಸ್ತೆಗಳೆಲ್ಲವೂ ಸಿಸ. ರಸ್ತೆಗಳಂತಾಗಲಿವೆ ಎಂದು ತಿಳಿಸಿದರು.

ಪಿಕಾರ್ಡ್ ಬ್ಯಾಂಕಿನ ನಿರ್ದೇಶಕ ತಮ್ಮಯ್ಯ ಮಾತನಾಡಿ ಶಾಸಕ ಜಿ.ಎಚ್.ಶ್ರೀನಿವಾಸ್ ಅವರು ಶಾಸಕರಾದ ನಂತರ ಉಡೇವಾ ಗ್ರಾಮಸ್ಥರಿಗೆ 94(ಸಿ) ಬಿ ಖಾತಾಗಳನ್ನು ಮಾಡಿಸುತ್ತಿದ್ದಾರೆ. ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಾಲಯದ ರಸ್ತೆ ಅಭಿವೃದ್ಧಿ ಗ್ರಾಮದ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆಗಳ ಮೇಲ್ಚಾವಣಿ ನಿರ್ಮಾಣ, ವಾಲ್ಮೀಕಿ ಭವನದ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಈಗ ಕಲ್ಲತ್ತಿಗಿರಿ ಜಲಪಾತದಿಂದ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಗ್ರಾಮದ ಬಳಿ ಕೆರೆ ನಿರ್ಮಾಣ, ಗ್ರಾಮದ ರೈತರ ಜಮೀನುಗಳಿಗೆ ತೆರಳುವ ರಸ್ತೆಗಳ ಅಭಿವೃದ್ಧಿ ಸೇರಿದಂತೆ ವಿವಿಧ 5 ಬೇಡಿಕೆಗಳ ಪಟ್ಟಿಯನ್ನು ಶಾಸಕರಿಗೆ ನೀಡಿದರು.

ಈ ಸಂದರ್ಭಧಲ್ಲಿ ಕೆಡಿಪಿ ಸದಸ್ಯೆ ರಚನಾ ಶ್ರೀನಿವಾಸ್, ತಾಪಂ ಮಾಜಿ ಅಧ್ಯಕ್ಷೆ ಲತಾ ತಮ್ಮಯ್ಯ, ಗ್ರಾಪಂ ಸದಸ್ಯರಾದ ಡಿ. ಶ್ರೀನಿವಾಸ್, ಜ್ಞಾನಮೂರ್ತಿ, ಆಂಡಿಗೌಡ, ತಾ.ಪಂ ಮಾಜಿ ಸದಸ್ಯ ಎಸ್.ಎ ಕೃಷ್ಣಪ್ಪ, ಸಿ. ರಾಜಕುಮಾರ್, ಅಬೂಬಕರ್ ಗ್ರಾಮಸ್ಥರಾದ ಈಶ್ವರಪ್ಪ, ಸಿದ್ದಪ್ಪ, ತಿಮ್ಮಯ್ಯ, ಭೂ ಸೇನಾ ನಿಗಮದ ಇಂಜಿನಿಯರ್ ಪುನೀತ್, ಪಿಡಿಒಬಿ ಮಂಜು, ಮುಂತಾದವರು ಹಾಜರಿದ್ದರು. -

25ಕೆಟಿಆರ್.ಕೆ. 6ಃ

ಉಡೇವಾ ಗ್ರಾಮದಲ್ಲಿ ₹60 ಲಕ್ಷ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಶಾಸಕ ಜಿ.ಎಚ್.ಶ್ರೀನಿವಾಸ್ , ತಮ್ಮಯ್ಯ, ಸಿ.ರಾಜಕುಮಾರ್, ರಚನಾ ಶ್ರೀನಿವಾಸ್, ಪುನೀತ್. ಬಿ ಮಂಜು, ಮುಂತಾದವರು ಶಂಕು ಸ್ಥಾಪನೆ ನೇರವೇರಿಸಿದರು.