ಸಾರಾಂಶ
ಬೇಲೂರು ತಾಲೂಕಿನ ಕೋಗಿಲಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊತ್ನಳ್ಳಿ ಗ್ರಾಮದಲ್ಲಿರುವ ಚೇತನ್, ಸಿ,ಗೌಡ ಎಂಬುವರಿಗೆ ಸೇರಿದ ಜೋಳದ ಹೊಲ, ಹಾಗೂ ಮನೆ ಕಾಂಪೌಂಡ್, ಗೇಟು, ನೀರಿನ ಟ್ಯಾಂಕ್, ಪೈಪ್, ಇನ್ನೂ ಮುಂತಾದ ವಸ್ತುಗಳನ್ನು ಪುಡಿ ಮಾಡಿದ್ದು, ಜೋಳ ಕಟಾವಿಗೆ ಬಂದಿದ್ದು ಸುಮಾರು ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ. ಸುತ್ತಮುತ್ತ ರೈತರು ಭಯಭೀತರಾಗಿದ್ದು, ಆನೆಗಳನ್ನು ಸ್ಥಳಅಂತರಿಸಿ, ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ಕೊಡಿಸಿ ಎಂದು ಶಾಸಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಕೋಗಿಲಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊತ್ನಳ್ಳಿ ಗ್ರಾಮದಲ್ಲಿರುವ ಚೇತನ್, ಸಿ,ಗೌಡ ಎಂಬುವರಿಗೆ ಸೇರಿದ ಜೋಳದ ಹೊಲ, ಹಾಗೂ ಮನೆ ಕಾಂಪೌಂಡ್, ಗೇಟು, ನೀರಿನ ಟ್ಯಾಂಕ್, ಪೈಪ್, ಇನ್ನೂ ಮುಂತಾದ ವಸ್ತುಗಳನ್ನು ಪುಡಿ ಮಾಡಿದ್ದು, ಜೋಳ ಕಟಾವಿಗೆ ಬಂದಿದ್ದು ಸುಮಾರು ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ. ಸುಮಾರು 15ಕ್ಕೂ ಅಧಿಕ ಆನೆಗಳು ಜಮೀನಿಗೆ ಬಂದು ಮನೆ ಕಟ್ಟಲು ಸಂಗ್ರಹಿಸಿದ್ದ ಮರಳನ್ನು ಚೆಲ್ಲಾಡಿ ಲದ್ದಿ ಹಾಕಿ ಹೋಗಿದೆ, ಅಲ್ಲಿನ ಸುತ್ತಮುತ್ತ ರೈತರು ಭಯಭೀತರಾಗಿದ್ದು, ಆನೆಗಳನ್ನು ಸ್ಥಳಅಂತರಿಸಿ, ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ಕೊಡಿಸಿ ಎಂದು ಶಾಸಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕಳೆದ ವಾರ ಸ್ಥಳೀಯ ಶಾಸಕರು ಆನೆಗಳ ಹಾವಳಿ ತಪ್ಪಿಸಲು ಶಾಶ್ವತ ಪರಿಹಾರ ಮಾಡಿಕೊಡಬೇಕು ಮಾಡದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದ ಅವಧಿ ಮುಗಿದಿದೆ. ಮಾಜಿ ಸಚಿವರು ಶಿವರಾಂ ಆನೆಗಳಿಂದ ನಷ್ಟವಾದ ಪ್ರದೇಶಕ್ಕೆ ಭೇಟಿ ನೀಡಿ ಸರ್ಕಾರದ ಗಮನ ಸೆಳೆದು ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು, ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಕೋಗಿಲಮನೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ ಎಂ ಶಿವಕುಮಾರ್ ಹೇಳಿದರು.ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಆದಷ್ಟು ಬೇಗ ಬೇಲೂರು ತಾಲೂಕಿನಲ್ಲಿ ಅದು ಮಲೆನಾಡು ಭಾಗದಲ್ಲಿ ದೊಡ್ಡ ಸಮಸ್ಯೆಗಳಾದ ಆನೆ ಸಮಸ್ಯೆಗೆ ಸ್ಪಂದಿಸಬೇಕೆಂದು ತಾಲೂಕು ಕೆಡಿಪಿ ಸದಸ್ಯ ಚೇತನ್ ಗೌಡ ಮನವಿ ಮಾಡಿದ್ದಾರೆ.