ಸಾರಾಂಶ
ಹುಕ್ಕೇರಿ ತಾಲೂಕಿನ ಘೋಡಗೇರಿಯಲ್ಲಿ ಶಿವಾನಂದ ಮಠದ ಜಾತ್ರಾ ಮಹೋತ್ಸವ ಹಾಗೂ ಪುರಾಣ ರತ್ನ ಚನ್ನಬಸವ ದೇವರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಸಕ ನಿಖಿಲ್ ಕತ್ತಿ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಯಮಕನಮರಡಿ
ಮಾನವನ ಯಾಂತ್ರಿಕ ಒತ್ತಡದ ಬದುಕಿನಲ್ಲಿ ನೆಮ್ಮದಿ ಶಾಂತಿ, ಸಂಸ್ಕಾರ, ಸಿಗುವುದು ಮಠ ಮಾನ್ಯಗಳಿಂದ ಮಾತ್ರ ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.ತಾಲೂಕಿನ ಘೋಡಗೇರಿಯಲ್ಲಿ ಶಿವಾನಂದ ಮಠದ ಜಾತ್ರಾ ಮಹೋತ್ಸವ ಹಾಗೂ ಪುರಾಣ ರತ್ನ ಚನ್ನಬಸವ ದೇವರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಐತಿಹಾಸಿಕ ಹಾಗೂ ಅಧ್ಯಾತ್ಮ ಕೇಂದ್ರವಾಗಿರುವ ಘೋಡಗೇರಿಯ ಶಿವಾನಂದ ಮಠ ಭಕ್ತರ ಪಾಲಿಗೆ ಆರಾಧ್ಯದೈವ ವಾಗಿದೆ. ಇಂದು ಯುವಕರು ಮೊಬೈಲ್ ಬಳಕೆಯುಂದ ಬಕ್ತಿ ಮಾರ್ಗದಿಂದ ದೂರ ಉಳಿಯುತ್ತಿರುವದು ಕಳವಕಳ ಸಂಗತಿ ಎಂದರು.
ಈ ಭಾಗದ ದೊಡ್ಡ ಕನಸಾದ ಹಿಡಕಲ್ ಜಲಾಶಯದ ಉದ್ಯಾನವನಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಭೇಟಿ ಮಾಡಿದಾಗ ಸಕಾರಾತ್ಮಕವಾಗಿ ಸ್ಪಂದಿಸಿ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದ್ದಾರೆ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳು ಶೀಘ್ರದಲ್ಲಿ ಪ್ರಾರಂಭವಾಗಲಿ ಎಂದರು.ಪೀಠಾಧ್ಯಕ್ಷ ಮಲ್ಲಯ್ಯಾ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ ಜಾತ್ರೆ ಹಾಗೂ ಸತ್ಸಂಗವು ಜನರಲ್ಲಿ ಧಾರ್ಮಿಕ ಮನೋಭಾವನೆಯನ್ನು ಗಟ್ಟಿಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ ಎಂದರು.
ಜಿಲ್ಲಾ ಗುತ್ತಿಗೆದಾರ ಸಂಘದ ಗೌರವಾಧ್ಯಕ್ಷ ಬಸವರಾಜ ಮಟಗಾರ ಮಾತನಾಡಿದರು. ಮೈಗೂರ ಹಿರೇಮಠದ ಶ್ರೀಧರ ಸ್ವಾಮೀಜಿ ಪ್ರವಚನ ನೀಡಿದರು. ಮುಖಂಡರಾದ ಅಪ್ಪುನಾಯಕ ಪಾಟಿಲ, ಸಿದ್ರಾಮ ಮುಗಳಿ ಮತ್ತಿತರರು ಉಪಸ್ಥಿತರಿದ್ದರು.