ಮಾನಸಿಕ ಆರೋಗ್ಯ ಗುಣಮುಖವಾಗುವ ಕಾಯಿಲೆ

| Published : Aug 02 2024, 12:58 AM IST

ಸಾರಾಂಶ

ಧನಾತ್ಮಕ ಜೀವನ ಶೈಲಿ ಮತ್ತು ಉತ್ತಮ ಆಲೋಚನೆಗಳಿಂದ ಮಾನಸಿಕ ಕಾಯಿಲೆಯಿಂದ ಹೊರಬರಬಹುದು.

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಮಾನಸಿಕ ಆರೋಗ್ಯ ಗುಣಮುಖವಾಗುವ ಕಾಯಿಲೆ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ರವಿಕುಮಾರ್ ಹೇಳಿದರು.

ಎಪಿಡಿ ಸ್ವಯಂ ಸೇವಾ ಸಂಸ್ಥೆ ಮತ್ತು ಟಿ. ನರಸೀಪುರ ಸಾರ್ವಜನಿಕ ಆಸ್ಪತ್ರೆಯ ಸಹಯೋಗದೊಂದಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಮನೋಚೇತನರ ಆರೈಕೆ, ಮಾನಸಿಕ ಪುನಶ್ಚೇತನ ಕುರಿತು ಮನೋಚೇತನ ಮತ್ತು ಆರೈಕೆದಾರರಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಧನಾತ್ಮಕ ಜೀವನ ಶೈಲಿ ಮತ್ತು ಉತ್ತಮ ಆಲೋಚನೆಗಳಿಂದ ಮಾನಸಿಕ ಕಾಯಿಲೆಯಿಂದ ಹೊರಬರಬಹುದು. ಮನೋಚೇತನರ ಆರೈಕೆ, ಆರೈಕೆಯಲ್ಲಾಗುವ ವ್ಯತ್ಯಾಸಗಳು, ಸರಿಪಡಿಸುವಿಕೆ, ಆರೈಕೆಯ ಸಮಯದಲ್ಲಿ ಆರೈಕೆದಾರರಿಗೆ ಉಂಟಾಗುವ ಸಮಸ್ಯೆಗಳು ಮತ್ತು ಒತ್ತಡ ನಿರ್ವಹಣೆಯ ವಿಧಾನಗಳ ಬಗ್ಗೆ ಸವಿವರವಾಗಿ ವಿವರಿಸಿದರು .

ಮುಖ್ಯಅತಿಥಿಗಳಾಗಿದ್ದ ಸ್ತ್ರೀರೋಗ ತಜ್ಞೆ ಡಾ. ರಮ್ಯಾ , ಸಮಾಜ ಸೇವಕಿ ವರಲಕ್ಷ್ಮಿ ರಮೇಶ್ ಗೌಡ, ಸಂಪನ್ಮೂಲ ವ್ಯಕ್ತಿ ಅಭಿನಂದನ್ ಮಾತನಾಡಿದರು.

ಎಪಿಡಿ ಸಂಸ್ಥೆಯ ತಾಲೂಕು ಸಂಯೋಜಕ ಕೆ. ರಕ್ಷಿತಾ, ಮನಶಾಸ್ತ್ರಜ್ಞ ಆರ್. ಎಚ್. ಅರುಣ್, ಸಮುದಾಯ ಕಾರ್ಯಕರ್ತೆಯರಾದ ಮಧುಶ್ರೀ, ಕಾವ್ಯ, ರತ್ನ , ಸಹನಾ, ಹಲವು ಮನೋಚೇತನರು ಹಾಗೂ ಆರೈಕೆದಾರರು ಇದ್ದರು.